ತಾಯಿ ಎದೆಹಾಲು ಮಕ್ಕಳ ಬೆಳವಣಿಗೆಗೆ ಪೂರಕ

| Published : Aug 05 2025, 11:46 PM IST

ಸಾರಾಂಶ

ದೈಹಿಕ ಮತ್ತು ಮಾನಸಿಕ ಸದೃಢತೆಗೆ ತಾಯಿ ಹಾಲು ಮಹತ್ವವಾಗಿದೆ. ಎದೆ ಹಾಲಿನಲ್ಲಿರುವ ಪೌಷ್ಟಿಕಾಂಶವು ಮಗುವಿಗೆ ದೊರೆತರೆ ಮಗು ಆರೋಗ್ಯವಾಗಿ ಬೆಳೆಯುತ್ತದೆ.

ಯಲಬುರ್ಗಾ:

ತಾಯಿ ಎದೆಹಾಲು ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದು ಗುನ್ನಾಳ ಪಿಎಚ್‌ಸಿ ಆಡಳಿತ ವೈದ್ಯಾಧಿಕಾರಿ ದಯಾನಂದಸ್ವಾಮಿ ಹೇಳಿದರು.ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಪೌಷ್ಟಿಕ ಆಹಾರ ಶಿಬಿರ ಉದ್ದೇಶಿಸಿ ಮಾತನಾಡಿದರು.

ದೈಹಿಕ ಮತ್ತು ಮಾನಸಿಕ ಸದೃಢತೆಗೆ ತಾಯಿ ಹಾಲು ಮಹತ್ವವಾಗಿದೆ. ಎದೆ ಹಾಲಿನಲ್ಲಿರುವ ಪೌಷ್ಟಿಕಾಂಶವು ಮಗುವಿಗೆ ದೊರೆತರೆ ಮಗು ಆರೋಗ್ಯವಾಗಿ ಬೆಳೆಯುತ್ತದೆ. ತಾಯಿಯ ಎದೆಹಾಲಿನಷ್ಟು ಪೌಷ್ಟಿಕ ಆಹಾರ ಬೇರೆಲ್ಲೂ ಸಿಗುವುದಿಲ್ಲ ಎಂಬುದನ್ನು ತಾಯಂದಿರು ಅರ್ಥಮಾಡಿಕೊಂಡು ಮಗುವಿಗೆ ಎದೆ ಹಾಲುಣಿಸಬೇಕು ಎಂದರು.

ಆರೋಗ್ಯ ಸಿಬ್ಬಂದಿ ವೀರೇಶ ಬಡಿಗೇರ್ ಮಾತನಾಡಿ, ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರು ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಯ್ಯ ಮಾತನಾಡಿ, ಪ್ರತಿಯೊಬ್ಬರೂ ಸೊಳ್ಳೆಗಳಿಂದ ಹರಡುವ ಡೇಂಘಿ, ಚಿಕುನ್ ಗುನ್ಯಾ ಕಾಯಿಲೆಯಿಂದ ದೂರವಿರಬೇಕು. ಸುತ್ತಕಿನ ವಾತಾವರಣ ಶುಚಿಯಾಗಿಟ್ಟುಕೊಳ್ಳಬೇಕು. ಇದರಿಂದ ಯಾವುದೇ ರೋಗಗಳು ಬಾರದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದರು.ಈ ವೇಳೆ ಗ್ರಾಪಂ ಸದಸ್ಯೆ ಶಂಕ್ರಮ್ಮ, ಮಾಜಿ ಸದಸ್ಯ ಹನುಮಗೌಡ ಗೌಡ್ರು, ಮುಖಂಡರಾದ ಆದೇಶ ರೊಟ್ಟಿ, ಮುದಕ್ಕಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಹನುಮಕ್ಕ ಗುನ್ನಾಳ, ಪದ್ಮಾವತಿ ವಂಕಲಾಕುಂಟಾ, ಆಶಾ ಕಾರ್ಯಕರ್ತೆಯರಾದ ಕಮಲಾಕ್ಷಿ ಹಿರೇಮಠ, ರೇಣುಕಾ ಸೇರಿದಂತೆ ಮತ್ತಿತರರು ಇದ್ದರು.