ಸಾರಾಂಶ
ಭರ್ಜರಿ ಮಳೆಯಿಂದ ಹನೂರಿನಲ್ಲಿ ಕೊಚ್ಚಿ ಹೋದ ಸೇತುವೆ ಹಾಗೂ ತಡೆಗೋಡೆ ದುರಸ್ತಿಪಡಿಸುವುದಾಗಿ ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದರು.
ಭಾರಿ ಮಳೆಯಿಂದ ರಾಮಾಪುರ ಮುಖ್ಯ ರಸ್ತೆ ಮಾರ್ಗ ಕೊಪ್ಪ, ಗಾಜನೂರು ಸೇತುವೆಗೆ ಹಾನಿ, ಓಡಾಡಲು ತೊಂದರೆಕನ್ನಡಪ್ರಭ ವಾರ್ತೆ ಹನೂರು
ಭರ್ಜರಿ ಮಳೆಯಿಂದ ಕೊಚ್ಚಿ ಹೋದ ಸೇತುವೆ ಹಾಗೂ ತಡೆಗೋಡೆ ದುರಸ್ತಿಪಡಿಸುವುದಾಗಿ ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದರು.ರಾಮಾಪುರ ಮುಖ್ಯ ರಸ್ತೆ ಮಾರ್ಗ ಕೊಪ್ಪ ಹಾಗೂ ಗಾಜನೂರು ಮುಖ್ಯ ಸೇತುವೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾನಿಗೊಳಗಾಗಿದ್ದು ಇದರಿಂದ ರಸ್ತೆಯಲ್ಲಿ ಓಡಾಡಲು ತೀವ್ರ ತೊಂದರೆಯಾಗಿತ್ತು. ಭರ್ಜರಿ ಮಳೆಯಿಂದ ಮಳೆ ನೀರು ತುಂಬಿ ಹರಿದ ಪರಿಣಾಮ ಸೇತುವೆ ಮೇಲ್ಭಾಗ ಹಾಗೂ ತಡೆಗೋಡೆ ಕೊಚ್ಚಿ ಹೋಗಿರುವುದರಿಂದ ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಹಾಗೂ ರೈತರಿಗೆ ಅವರು ಭರವಸೆ ನೀಡಿದರು.
ದೂರವಾಣಿ ಕರೆ: ಭಾರಿ ಮಳೆಯಿಂದ ಗಾಜನೂರು ಕೊಪ್ಪ ಮಾರ್ಗದಲ್ಲಿ ಸಿಗುವ ಹಳ್ಳಕ್ಕೆ ನಿರ್ಮಾಣ ಮಾಡಿರುವ ಸೇತುವೆ ತಡೆ ಗೋಡೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಸೇತುವೆ ದುರಸ್ತಿಪಡಿಸಿ ಈ ಭಾಗದ ಜನರಿಗೆ ಓಡಾಡಲು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಅಧಿಕಾರಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ದೂರವಾಣಿ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಇದೇ ಸಂದರ್ಭದಲ್ಲಿ ಮಿಣ್ಯಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾದೇಶ್, ಮುಖಂಡರಾದ ಮಂಜೇಶ್ ಗೌಡ, ಮುನಿಯಪ್ಪ, ಮಹೇಶ್, ವಸಂತ್ ಕುಮಾರ್, ಎಸ್. ನಾಗರಾಜ್, ವಿ. ನಾಗರಾಜ್, ಟಿ.ಪಿ. ಮಹಾದೇವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.