ಭಾರತ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, 2047ಕ್ಕೆ ದೇಶ ಶಕ್ತಿಶಾಲಿ, ಸದೃಢ, ವಿಕಸಿತ ಭಾರತವಾಗಲಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು. ನಗರದ ಶಿವಾನಂದ ಜಿನ್‌ ನಲ್ಲಿ ಬಿಜೆಪಿ ಬಾಗಲಕೋಟೆ ಬ್ಲಾಕ್‌ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, 2047ಕ್ಕೆ ದೇಶ ಶಕ್ತಿಶಾಲಿ, ಸದೃಢ, ವಿಕಸಿತ ಭಾರತವಾಗಲಿದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ನಗರದ ಶಿವಾನಂದ ಜಿನ್‌ ನಲ್ಲಿ ಬಿಜೆಪಿ ಬಾಗಲಕೋಟೆ ಬ್ಲಾಕ್‌ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಮಗೆ ಸಂವಿಧಾನಾತ್ಮಕವಾಗಿ ಮತದಾನದ ಹಕ್ಕು ಸಿಕ್ಕಿದೆ. ಹಕ್ಕು ಚಲಾಯಿಸುವುದು ನಮ್ಮೆಲ್ಲರ ಕರ್ತವ್ಯ, ದೇಶದಲ್ಲಿ ಸಾಕಷ್ಟು ಧರ್ಮ, ಸಂಸ್ಕೃತಿಗಳು ಇದ್ದರೂ ನಾವೆಲ್ಲ ಭಾರತಿಯರು, ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಇರಲಿ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ. ವಿಕಸಿತ ಭಾರತ ಪರಿಕಲ್ಪನೆಯಲ್ಲಿ ಶಕ್ತಿಶಾಲಿ ದೇಶ ಕಟ್ಟಲು ಎಲ್ಲರೂ ಭಾಗವಹಿಸುವುದು ಅಗತ್ಯವಾಗಿದೆ ಎಂದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ಬೆಳಗಾವಿ ವಿಭಾಗದ ಉಸ್ತುವಾರಿ ಅರುಣ ಶಾಹಪುರ, ಜಿ.ಎನ್. ಪಾಟೀಲ, ಡಾ.ಎಂ.ಎಸ್. ದಡ್ಡೆನ್ನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ರಾಜು ರೇವಣಕರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಯಲ್ಲಪ್ಪ ಬೆಂಡಿಗೇರ, ಬಸಲಿಂಗಪ್ಪ ನಾವಲಗಿ, ಸತ್ಯನಾರಾಯಣ ಹೆಮಾದ್ರಿ, ಶಿವಾನಂದ ಟವಳಿ, ಭಾಗೀರಥಿ ಪಾಟೀಲ, ಜ್ಯೋತಿ ಭಜಂತ್ರಿ, ಶೋಭಾ ರಾವ, ಶಶಿಕಲಾ ಮಜ್ಜಗಿ, ಸೇರಿದಂತೆ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಭಾರತ ಮಾತೆ ಹಾಗೂ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು, ನಂತರ ನಗರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.