ರಾಜ್ಯ ಅಭಿವೃದ್ಧಿಯಲ್ಲಿ ತೀವ್ರ ಮುನ್ನಡೆ ಸಾಧಿಸಬೇಕಾದರೆ ಯುವ ಜನಾಂಗ ಸನ್ನದ್ಧರಾಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯ ಅಭಿವೃದ್ಧಿಯಲ್ಲಿ ತೀವ್ರ ಮುನ್ನಡೆ ಸಾಧಿಸಬೇಕಾದರೆ ಯುವ ಜನಾಂಗ ಸನ್ನದ್ಧರಾಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ವಸತಿ ಇಲಾಖೆ, ಕೊಳಗೇರಿ ಅಬಿವೃದ್ಧಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ನಿರ್ಮಿಸಿರುವ 42,345 ಮನೆಗಳ ಪೈಕಿ ಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿ 192 ಮನೆಗಳ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರವಾಹ, ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಒಟ್ಟು ₹139.57 ಕೋಟಿ ಇನಪುಟ್ ಸಬ್ಸಿಡಿ ಪರಿಹಾರವನ್ನು ನೇರವಾಗಿ ಜಿಲ್ಲೆಯ 1.10 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ತಿಳಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಪ್ರಸಕ್ತ 2025-26ನೇ ಸಾಲಿಗೆ ₹3.63 ಕೋಟಿ ಮೊತ್ತದ ಸಹಾಯಧನವನ್ನು 39 ಕೈಗಾರಿಕೆಗಳಿಗೆ ಬಿಡುಗಡೆ ಮಾಡಲಾಗಿದೆ. ಸಣ್ಣ ಪುಟ್ಟ ಉದ್ದಿಮೆ ಅಭಿವೃದ್ಧಿಗೆ ಜಿಲ್ಲೆಯಲ್ಲಿ 14 ಕಾರ್ಯಾಗಾರ ನಡೆಸಿ, ಕೇಂದ್ರ ಸರ್ಕಾರದ ಯೋಜನೆಯಡಿ ಅಂದಾಜು ₹60 ಕೋಟಿ ಬಂಡವಾಳ ಹೂಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಹಾಲಿಂಗಪುರದಲ್ಲಿ ನೂರು ವಿದ್ಯಾರ್ಥಿಗಳ ಸಾಮರ್ಥ್ಯವಿರುವ ಡಾ.ಬಿ.ಆರ್.ಅಂಬೇಡ್ಕರ್‌ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎನ್.ಆರ್.ಎಲ್.ಎಂ ಯೋಜನೆಯಡಿ ಸ್ವ-ಸಹಾಯ ಸಂಘಗಳ ಮಹಿಳೆಯರು ಜೀವನೋಪಾಯ ಚಟುವಟಿಕೆ ಕೈಗೊಳ್ಳಲು ಪ್ರಸಕ್ತ ಸಾಲಿನಲ್ಲಿ 333 ಸ್ವ-ಸಹಾಯ ಗುಂಪುಗಳಿಗೆ ₹4.99 ಕೋಟಿ ಸಮುದಾಯ ಬಂಡವಾಳ ನಿಧಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಬನಶಂಕರಿ ಜಾತ್ರೆ ಹಾಗೂ ಚಾಲುಕ್ಯ ಉತ್ಸವದಲಲಿ ಜಿಲ್ಲಾ ಮಟ್ಟದ ಸರಸ್ ಮೇಳ ಆಯೋಜನೆ ಮಾಡಿ ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಲು ಪ್ರೋತ್ಸಾಹ ನೀಡಲಾಗಿದೆ ಎಂದರು.

ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಹಣಮಂತ ನಿರಾಣಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ, ಬುಡಾದ ಅಧ್ಯಕ್ಷ ಅಬ್ದುಲ್‌ ರಜಾಕ್‌ ಬೇನೂರ, ಜಿಲ್ಲಾಧಿಕಾರಿ ಸಂಗಪ್ಪ. ಜಿಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಯುಕೆಪಿ ಮಾಹಾ ವ್ಯವಸ್ಥಾಪಕ ಗಜಾನನ ಬಾಲೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹಿರೆ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್‌ ವಾಸುದೇವ್ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಂಗಮೇಶ ಸನತಂಗಿ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ:

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಸಿದ್ದು ಮೂಲಿಮನಿ (ಸಾಹಿತ್ಯ ಕ್ಷೇತ್ರ), ಬಸವರಾಜ ಡಂಬಳ (ಸಂಗೀತ), ಮಹಾದೇವ ಕಲ್ಯಾಣಿ (ಕರಡಿ ಮಜಲು), ವೆಂಕಪ್ಪ ಕ್ವಾನ್ಯಾಗೋಳ (ಡೊಳ್ಳಿನಪದ), ಹನುಮಂತ ಭಜಂತ್ರಿ (ಕರಡಿ ಮಜಲು), ರಮೇಶ ಬಡಿಗೇರ (ಭಜನೆ), ಲೇಶಪ್ಪ ಬಸರಕೋಡ (ಪುರವಂತಿಕೆ), ಗಿರಿಮಲ್ಲಪ್ಪ ಪೂಜಾರಿ (ಚಿತ್ರಕಲೆ), ಭಾರತಿ ಹಿರೇಮಠ (ಅಂಗಾಂಗ ದಾನ), ಮಹಾದೇವ ಮಳ್ಳಿಗೇರಿ (ಕೃಷಿ), ಅಡಿವೇಶ ಡೊಂಕಪ್ಪಗಳ, ರಮೇಶ ನಾಯ್ಕರ (ಸಮಾಜ ಸೇವೆ), ವಿನೋದ ಸಂದಿಮನಿ, ಪ್ರಭಾಸ ತಳವಾರ, ಗಂಗಾ ದಂಡಿನ, ಹನುಮಂತ ಹುಲ್ಲಿಕೇರಿ, ಏಕನಾಥ ದಿವಟಗಿ (ಕ್ರೀಡೆ), ಸಂತೋಷ ಹಜೇರಿ (ಛಾಯಾಗ್ರಾಹಕ), ಅಭಯ ಮನಗೂಳಿ, ಗುರು ಹಿರೇಮಠ, ಹೇಮಾ ಕಡಿವಾಳ (ಮಾಧ್ಯಮ),