ನಿಂತಿದ್ದ ಲಾರಿಗೆ ಬಸ್‌ ಡಿಕ್ಕಿ: 11 ಮಂದಿಗೆ ಗಾಯ

| Published : Jun 20 2024, 01:00 AM IST

ಸಾರಾಂಶ

ಲಾರಿ ಹಾಗೂ ಬಸ್ ಚಾಲಕರಿಬ್ಬರ ತಪ್ಪಿನಿಂದಾಗಿ ಈ ಅಪಘಾತ ನಡೆದಿರುವ ಕಾರಣ ಎರಡೂ ವಾಹನಗಳ ಚಾಲಕರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಯಲ್ಲಾಪುರ: ತಾಲೂಕಿನ ಡೊಮಗೇರಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ಸಾರಿಗೆ ಸಂಸ್ಥೆಯ ಬಸ್‌ವೊಂದು ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಬಸ್‌ನಲ್ಲಿದ್ದ 11 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಲ್ಲಯ್ಯ ಸಂಗಯ್ಯ ಹಿರೇಮಠ, ರೇಷ್ಮಾ ವಾಜೀದ್ ತೊರಗಲ್, ಬಸಯ್ಯ ಶಿವಪುತ್ರಯ್ಯ ದೇಸಾಯಿಮಠ, ಲಕ್ಷ್ಮೀ ಶಿವಪ್ಪ, ಚಂದ್ರಪ್ಪ ಪರಸಪ್ಪ ರಾಜೂರು, ಶಿವಾನಂದ ಹನುಮಪ್ಪ ದೊಡ್ಡವಿ, ಕಿರಣ ಅಮರೇಶ ಕೊಲ್ಲೂರು, ರಾಜೇಶ್ವರಿ, ಕೆ.ಎಸ್. ಮಂಜುನಾಥ, ಚಂದ್ರಶೇಖರಪ್ಪ ಕಪಲೆಪ್ಪ ಅಳಗವಾಡಿ, ಚಾಲಕ ಪ್ರದೀಪ ನಂದೆಪ್ಪ ಬಿ.ಆರ್. ಎಂಬವರಿಗೆ ಅಲ್ಪಸ್ವಲ್ಪ ಪೆಟ್ಟಾಗಿದೆ. ಲಾರಿ ಹಾಗೂ ಬಸ್ ಚಾಲಕರಿಬ್ಬರ ತಪ್ಪಿನಿಂದಾಗಿ ಈ ಅಪಘಾತ ನಡೆದಿರುವ ಕಾರಣ ಎರಡೂ ವಾಹನಗಳ ಚಾಲಕರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ಸಾತೊಡ್ಡಿ ಜಲಪಾತದಲ್ಲಿ ಮುಳುಗಿ ವ್ಯಕ್ತಿ ಸಾವು

ಯಲ್ಲಾಪುರ: ತಾಲೂಕಿನ ಸಾತೊಡ್ಡಿ ಜಲಪಾತದ ನೀರಿನಲ್ಲಿ ಸ್ನಾನ ಮಾಡಲು ಹೋಗಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ಜೂ. ೧೮ರಂದು ಸಂಜೆ ನಡೆದಿದೆ.ಹುಬ್ಬಳ್ಳಿಯ ಮೌಲಾಲಿ ದರ್ಗಾದ ಹಸನ್ ಕಾಲೆಮದರ್ ಎಂಬವರೇ ಮೃತಪಟ್ಟ ವ್ಯಕ್ತಿ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.