ಹರಿಹರ: ಕಂದಕಕ್ಕೆ ಬಸ್ ಉರುಳಿ ನಾಲ್ವರಿಗೆ ಗಾಯ

| Published : Sep 03 2024, 01:40 AM IST

ಸಾರಾಂಶ

ಹರಿಹರ ನಗರದ ಹೊರವಲಯದ ಗುತ್ತೂರು ಸಮೀಪ ರಸ್ತೆ ಬದಿಯ ಕಂದಕಕ್ಕೆ ಶನಿವಾರ ಮಧ್ಯರಾತ್ರಿ ಸಾರಿಗೆ ಸಂಸ್ಥೆ ಬಸ್ಸೊಂದು ಉರುಳಿಬಿದ್ದು, ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಹರಿಹರ: ನಗರದ ಹೊರವಲಯದ ಗುತ್ತೂರು ಸಮೀಪ ರಸ್ತೆ ಬದಿಯ ಕಂದಕಕ್ಕೆ ಶನಿವಾರ ಮಧ್ಯರಾತ್ರಿ ಸಾರಿಗೆ ಸಂಸ್ಥೆ ಬಸ್ಸೊಂದು ಉರುಳಿಬಿದ್ದು, ನಾಲ್ಕು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

ಹರಪನಹಳ್ಳಿ ಕಡೆಯಿಂದ ಹರಿಹರಕ್ಕೆ ಬರುತ್ತಿದ್ದ ರಾಯಚೂರು ಡಿಪೋ ಬಸ್‌ ಹೊಸಪೇಟೆ-ಶಿವಮೊಗ್ಗ ಹೆದ್ದಾರಿಯಲ್ಲಿ ಶನಿವಾರ ಮಧ್ಯರಾತ್ರಿ 1.30ರ ಸುಮಾರಿಗೆ ನಗರದಿಂದ 3 ಕಿ.ಮೀ. ಅಂತರದಲ್ಲಿ ರಸ್ತೆಯಿಂದ ಪಕ್ಕದ ಕಂದಕಕ್ಕೆ ಉರುಳಿದೆ.

ಬಸ್‍ನಲ್ಲಿ 42 ಪ್ರಯಾಣಿಕರಿದ್ದರು. ಘಟನೆಯಲ್ಲಿ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಳಿದ ಪ್ರಯಾಣಿಕರಿಗೆ ಬೇರೆ ಬಸ್‍ಗಳಲ್ಲಿ ಮುಂದಿನ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿವೆ.

ಘಟನೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಗೆ ಸಾರಿಗೆ ಸಂಸ್ಥೆಯಿಂದ ದೂರು ಸಲ್ಲಿಸಲಾಗಿದೆ.

- - - (ಸಾಂದರ್ಭಿಕ ಚಿತ್ರ)