ಸಾರಾಂಶ
ತುಮಕೂರು ವಿಶ್ವವಿದ್ಯಾನಿಲಯದ ನೂತನ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ತೆರಳಲು ಕೆಎಸ್‌ಆರ್‌ಟಿಸಿ ದೈನಂದಿನ ಬಸ್ ಸಂಚಾರಕ್ಕೆ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಬುಧವಾರ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ವಿಶ್ವವಿದ್ಯಾನಿಲಯದ ನೂತನ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ತೆರಳಲು ಕೆಎಸ್‌ಆರ್‌ಟಿಸಿ ದೈನಂದಿನ ಬಸ್ ಸಂಚಾರಕ್ಕೆ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಬುಧವಾರ ಚಾಲನೆ ನೀಡಿದರು.
ಅ.10 ರಂದುವಿಶ್ವವಿದ್ಯಾನಿಲಯದ ಮೊದಲ ವರ್ಷದ ಸ್ನಾತಕೋತ್ತರ ವಿಜ್ಞಾನ ವಿಷಯಗಳಿಗೆ ಪ್ರವೇಶಾತಿ ನಡೆಯಲಿದ್ದು, ಅ.14 ರಿಂದ ಪ್ರಥಮ ವರ್ಷದ ಸ್ನಾತಕೋತ್ತರ ತರಗತಿಗಳು ಆರಂಭವಾಗಲಿವೆ.ಪ್ರವೇಶಾತಿ ಸಂಬಂಧ ಅ.10 ರಂದು ಹಾಗೂ ಅ.14 ರಿಂದ ಪ್ರತಿನಿತ್ಯನೂತನ‘ಜ್ಞಾನಸಿರಿ’ ಕ್ಯಾಂಪಸ್‌ಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ಗಳು ತುಮಕೂರು ನಗರ ಬಸ್ ನಿಲ್ದಾಣದಿಂದ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ನಗರ ಕ್ಯಾಂಪಸ್‌ನಿಂದ ಲಭ್ಯವಿರಲಿವೆ.ಬಿದರಕಟ್ಟೆಯ ನೂತನ ‘ಜ್ಞಾನಸಿರಿ’ ಕ್ಯಾಂಪಸ್ ತುಮಕೂರು ನಗರದಿಂದ 18 ಕಿ.ಮೀ ದೂರವಿದ್ದು ವಿವಿಯ ವಿದ್ಯಾರ್ಥಿಗಳು, ಅಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ತುಮಕೂರು ನಗರದಿಂದ ಮತ್ತು ನಗರ ಕ್ಯಾಂಪಸ್‌ನಿಂದ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ತೆರಳಲು ಅನುವಾಗುವಂತೆ ಜ್ಞಾನಸಿರಿ ಕ್ಯಾಂಪಸ್ ಮಾರ್ಗಕ್ಕೆ ಬಸ್ಸುಗಳ ಸಂಚಾರ ಸೌಲಭ್ಯ ಕಲ್ಪಿಸಲಾಗಿದೆ.ದೈನಂದಿನ ಬಸ್ ಸೇವೆಯ ಆರಂಭಿಕ ಪ್ರಯಾಣದಲ್ಲಿ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜಮ್‌ಜಮ್, ವಿವಿಯಬೋಧಕ, ಬೋಧಕೇತರ ಸಿಬ್ಬಂದಿಗಳು ನೂತನ ‘ಜ್ಞಾನಸಿರಿ’ ಕ್ಯಾಂಪಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು.ತುಮಕೂರು-ಗೂಳೂರು-ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್, ಸೋಪನಹಳ್ಳಿ ಗೇಟ್-ಬಿದರಕಟ್ಟೆ ಮಾರ್ಗವಾಗಿಕೆಎಸ್‌ಆರ್‌ಟಿಸಿ ಬಸ್ ಸಂಚರಿಸಿ ಜ್ಞಾನಸಿರಿ ಕ್ಯಾಂಪಸ್‌ತಲುಪಲಿದೆ. ಅ.10ರಂದು ತುಮಕೂರು ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 8, 9,10, 11, ಮಧ್ಯಾಹ್ನ2, 3,4,5, 6ಗಂಟೆಯ ವರಗೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ನಗರ ಕ್ಯಾಂಪಸ್‌ನಿಂದ ಬೆಳಗ್ಗೆ 8.30, 9.30, 10.30, 11.30, ಮಧ್ಯಾಹ್ನ2.30, 3.30, 4.30, 5.30, 6.30ರ ವರೆಗೂ ತುಮಕೂರು ವಿವಿಯ‘ಜ್ಞಾನಸಿರಿ’ ಕ್ಯಾಂಪಸ್‌ಗೆ ತೆರಳಲು ಬಸ್‌ಗಳು ಲಭ್ಯವಿರಲಿವೆ.ಅ.14 ರಿಂದ ಪ್ರತಿನಿತ್ಯತುಮಕೂರು ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 8, 9,10, 11, ಮಧ್ಯಾಹ್ನ 12, 1, 2, 3, 4, 5, 6ಗಂಟೆಯವರೆಗೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ನಗರಕ್ಯಾಂಪಸ್‌ನಿಂದ ಬೆಳಗ್ಗೆ 8.30, 9.30, 10.30, 11.30, ಮಧ್ಯಾಹ್ನ12.30, 1.30, 2.30, 3.30, 4.30, 5.30, 6.30ರ ವರೆಗೂತುಮಕೂರು ವಿವಿಯ‘ಜ್ಞಾನಸಿರಿ’ ಕ್ಯಾಂಪಸ್‌ಗೆ ತೆರಳಲು ಬಸ್‌ಗಳು ಲಭ್ಯವಿರಲಿವೆ.