ಸಾರಾಂಶ
Business Model: Jain started a shop in honor of the farmers
-ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಬಸವರಾಜ ಜೈನ್ ಶ್ಲಾಘನೆ
-----ಕನ್ನಡಪ್ರಭ ವಾರ್ತೆ ಯಾದಗಿರಿ
ರೈತರಿಗೆ ಸನ್ಮಾನ ಮಾಡುವ ಮೂಲಕ ನೂತನ ಅಂಗಡಿ ಪ್ರಾರಂಭಿಸಿದ ಗಂಜ್ ವರ್ತಕ ಗುಂಡಪ್ಪ ಕಲಬುರಗಿ ಅವರ ನಡೆ ವಿನೂತನವಾಗಿದೆ ಎಂದು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಬಸವರಾಜ ಜೈನ್ ಶ್ಲಾಘನೆ ವ್ಯಕ್ತಪಡಿಸಿದರು.ನಗರದ ಬಸವೇಶ್ವರ ಗಂಜ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಅಡತಿ ಅಂಗಡಿ ಕಟ್ಟಡ ಪ್ರವೇಶವನ್ನು ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ, ಶರಣರ ವಚನ ಕಟ್ಟುಗಳೊಂದಿಗೆ ಗುರು ಪ್ರವೇಶ ಮಾಡುವ ಮೂಲಕ ವಿನೂತನವಾಗಿ ಅಂಗಡಿಯ ಶುಭಾರಂಭ ಮಾಡಿದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅಡತಿ ಅಂಗಡಿಗಳಿಗೆ ಆಧಾರವಾಗಿರುವ ರೈತರನ್ನು ಸನ್ಮಾನಿಸಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಹುಲಕಲ್ ನಟರಾಜ್ ಮಾತನಾಡಿ, ಪ್ರಗತಿಪರತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಮೌಢ್ಯವನ್ನು ದೂರ ಮಾಡಲು ಸಾಧ್ಯವೆಂದರು.ಗುರುಮಠಕಲ್ ಖಾಸಾಮಠದ ಗುರುಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಚಿಗರಳ್ಳಿಯ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಉಪಸ್ಥಿತರಿದ್ದರು.
ಈ ವೇಳೆ ಹುಲಕಲ್ ನಟರಾಜ್ ದಂಪತಿಗೆ ಸನ್ಮಾನಿಸಲಾಯಿತು. ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಪ್ರಾಂತ ರೈತ ಸಂಘದ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ, ಕೃಷಿ ಕೂಲಿಕಾರರ ಸಂಘಟನೆಯ ಅಧ್ಯಕ್ಷ ದಾವಲಸಾಬ ನದಾಫ್, ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ, ಕೆಪಿಸಿಸಿ ಮುಖಂಡ ಎ.ಸಿ. ಕಾಡ್ಲೂರು, ಚಿಂತಕ ವೆಂಕಟಪ್ಪದು. ಅಲೆಮನಿ ಇದ್ದರು.-----
ಫೋಟೊ:ಯಾದಗಿರಿ ನಗರದ ಬಸವೇಶ್ವರ ಗಂಜ್ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಅಡತಿ ಅಂಗಡಿ ಕಟ್ಟಡ ಪ್ರವೇಶವನ್ನು ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಗುರು ಪ್ರವೇಶ ಮಾಡಲಾಯಿತು.7ವೈಡಿಆರ್6