ತಾ.ಪಂ ವತಿಯಿಂದ ತೆರೆದಿರುವ ಸಂಜೀವಿನಿ ಯುಗಾದಿ ಮಾಸಿಕ ಸಂತೆ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳಾ ಸದಸ್ಯರನ್ನೊಳಗೊಂಡ ತಂಡ ಈ ಯುಗಾದಿ ಅಕ್ಕ ಹೋಳಿಗೆ ಕಿಟ್‍ನ್ನು ತಯಾರಿಸಿದ್ದಾರೆ ಎಂದರು.
ಬಾಗೇಪಲ್ಲಿ: ಸ್ವ-ಸಹಾಯ ಗುಂಪಿನ ಮಹಿಳಾ ಸದಸ್ಯರು ತಯಾರಿಸಿದ ಸ್ಥಳೀಯ ವಿಶೇಷತೆಗಳನ್ನು ಬಿಂಬಿಸುವ ಯುಗಾದಿ ಹಬ್ಬದ ದಿನಸಿ ಪದಾರ್ಥಗಳನ್ನು ಖರೀದಿಸುವ ಮೂಲಕ ಮಹಿಳಾ ಸಂಘಗಳನ್ನು ಪ್ರೋತ್ಸಾಹಿಸುವಂತೆ ತಹಸೀಲ್ದಾರ್ ಮನೀಷ ಎನ್. ಪತ್ರಿ ಮನವಿ ಮಾಡಿದರು.ಪಟ್ಟಣದ ತಾಪಂ ಮುಂಭಾಗದಲ್ಲಿ ತಾ.ಪಂ ವತಿಯಿಂದ ತೆರೆದಿರುವ ಸಂಜೀವಿನಿ ಯುಗಾದಿ ಮಾಸಿಕ ಸಂತೆ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಿಳಾ ಸದಸ್ಯರನ್ನೊಳಗೊಂಡ ತಂಡ ಈ ಯುಗಾದಿ ಅಕ್ಕ ಹೋಳಿಗೆ ಕಿಟ್‍ನ್ನು ತಯಾರಿಸಿದ್ದಾರೆ ಎಂದರು.
ತಾಪಂ ಇಒ ರಮೇಶ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಬಿಇಒ ಎನ್ ವೆಂಕಟೇಶಪ್ಪ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಮಂಜುಳಾ, ಬಿ.ಸಿ.ಎಂ.ಇಲಾಖೆ ವಿಸ್ತರ್ಣಾಧಿಕಾರಿಗಳಾದ ಶಿವಪ್ಪ, ಸಹಯಕ ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಮತ್ತಿತರರು ಇದ್ದರು.17ಬಿಜಿಪಿ-1: ಬಾಗೇಪಲ್ಲಿ ಪಟ್ಟಣದ ತಾ.ಪಂ ಮುಂಭಾಗದಲ್ಲಿ ತಾ.ಪಂ ವತಿಯಿಂದ ತೆರೆದಿರುವ ಸಂಜೀವಿನಿ ಯುಗಾದಿ ಮಾಸಿಕ ಸಂತೆ ಹಾಗೂ ವಸ್ತು ಪ್ರದರ್ಶನಕ್ಕೆ ತಹಸೀಲ್ದಾರ್ ಮನೀಷಾ ಎನ್ ಪತ್ರಿ ಚಾಲನೆ ನೀಡಿದರು.