ಶಿವರಾತ್ರಿ ಆಚರಣೆಯಿಂದ ಪಾಪಗಳು ಕಳೆದು ಪುಣ್ಯ ಪ್ರಾಪ್ತಿ: ತೀರ್ಥರಾಜ್

| Published : Feb 25 2025, 12:48 AM IST

ಶಿವರಾತ್ರಿ ಆಚರಣೆಯಿಂದ ಪಾಪಗಳು ಕಳೆದು ಪುಣ್ಯ ಪ್ರಾಪ್ತಿ: ತೀರ್ಥರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರಶಿವರಾತ್ರಿ ಆಚರಣೆಯಿಂದ ಪಾಪಗಳೆಲ್ಲಾ ಕಳೆದು ಪುಣ್ಯ ಪ್ರಾಪ್ತವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಎಚ್.ಕೈಮರ ವಲಯ ಮೇಲ್ವಿಚಾರಕ ತೀರ್ಥರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶಿವರಾತ್ರಿ ಆಚರಣೆಯಿಂದ ಪಾಪಗಳೆಲ್ಲಾ ಕಳೆದು ಪುಣ್ಯ ಪ್ರಾಪ್ತವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಎಚ್.ಕೈಮರ ವಲಯ ಮೇಲ್ವಿಚಾರಕ ತೀರ್ಥರಾಜ್ ತಿಳಿಸಿದರು.

ಶನಿವಾರ ಕಟ್ಟಿನಮನೆ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಕಾನೂರು, ಕೆರೆಮನೆ ಭಾಗದಿಂದ ಶಿವರಾತ್ರಿ ಪ್ರಯುಕ್ತ ಸತತ 18 ನೇ ವರ್ಷದ ಧರ್ಮಸ್ಥಳಕ್ಕೆ 50 ಕ್ಕೂ ಹೆಚ್ಚು ಗ್ರಾಮಸ್ಥರು ಪಾದ ಯಾತ್ರೆಗೆ ಹೊರಟಿದ್ದು ಅವರನ್ನು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ದೇವಸ್ಥಾನದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರು ಧರ್ಮಸ್ಥಳಕ್ಕೆ ಪಾದ ಯಾತ್ರೆ ಪ್ರಾರಂಭಿಸಿದ್ದಾರೆ. ಲಿಂಗ ಪುರಾಣದ ಪ್ರಕಾರ ಈಶ್ವರನ್ನು ಮೊದಲ ಬಾರಿಗೆ ಲಿಂಗ ರೂಪಿಯಾಗಿ ದರ್ಶನ ನೀಡಿದ ದಿನ ಎನ್ನುವುದು ನಂಬಿಕೆಯಾಗಿದೆ. ಆದ್ದರಿಂದ ಎಲ್ಲಾ ಪಾದಯಾತ್ರೆಗಳು ಶ್ರದ್ಧಾ ಭಕ್ತಿಯಿಂದ ಪಾದ ಯಾತ್ರೆಯಲ್ಲಿ ಭಾಗ ವಹಿಸಿ ಶಿವನ ಕೃಪೆಗೆ ಪಾತ್ರರಾಗಬೇಕು ಎಂದು ಶುಭ ಹಾರೈಸಿದರು.

ಪಾದಯಾತ್ರೆ ಸಮಿತಿ ಸದಸ್ಯ ಕೃಷ್ಣಮೂರ್ತಿ ಮಾಹಿತಿ ನೀಡಿ, ಪ್ರತಿ ವರ್ಷದಂತೆ ಈ ವರ್ಷ ದಾನಿಗಳು, ವಿವಿಧ ಸಂಘ ಸಂಸ್ಥೆಗಳ ಶುಭ ಹಾರೈಕೆಯೊಂದಿಗೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಫೆ.22 ರಂದು ಪ್ರಾರಂಭವಾಗುವ ಪಾದಯಾತ್ರೆ 25 ಕ್ಕೆ ಧರ್ಮಸ್ಥಳ ತಲುಪುತ್ತಾರೆ ಎಂದರು.

ಈ ಸಂದರ್ಭದಲ್ಲಿ ಧ.ಗ್ರಾ.ಯೋಜನೆಯ ಕೃಷಿ ಅಧಿಕಾರಿ ಶಿವಕುಮಾರ್, ಧ.ಗ್ರಾ.ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಸಂತೋಷ್, ವಿಜಯಕುಮಾರ್, ಗ್ರಾಮದ ಹಿರಿಯರಾದ ಶಂಕರ ನಾರಾಯಣಭಟ್,ಸೇವಾ ಪ್ರತಿನಿಧಿ ಮಂಜುಳಾ ಇದ್ದರು.