ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಮುಸ್ಲಿಂ ಬಾಂಧವರು ಬದುಕು ರೂಪಿಸಿಕೊಳ್ಳಿ: ಎಂ. ರಫೀಕ್

| Published : Sep 29 2024, 01:31 AM IST

ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಮುಸ್ಲಿಂ ಬಾಂಧವರು ಬದುಕು ರೂಪಿಸಿಕೊಳ್ಳಿ: ಎಂ. ರಫೀಕ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುಮುಸ್ಲಿಂ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ರೂಪಿಸಿಕೊಂಡು ಈ ದೇಶದ ಕಾನೂನಿಗೆ ಗೌರವ ನೀಡಿ ಎಂದು ಕಡೂರು ಪೊಲೀಸ್ ವೃತ್ತ ನಿರೀಕ್ಷಕ ಎಂ. ರಫೀಕ್ ಹೇಳಿದರು.

ಪಟ್ಟಣದ ಹಜರತ್ ಜರೀನಾಬೀ ದರ್ಗಾ ಸಮಿತಿಯಿಂದ ದರ್ಗಾ ಆವರಣದಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ಮುಸ್ಲಿಂ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಬದುಕು ರೂಪಿಸಿಕೊಂಡು ಈ ದೇಶದ ಕಾನೂನಿಗೆ ಗೌರವ ನೀಡಿ ಎಂದು ಕಡೂರು ಪೊಲೀಸ್ ವೃತ್ತ ನಿರೀಕ್ಷಕ ಎಂ. ರಫೀಕ್ ಹೇಳಿದರು.

ಪಟ್ಟಣದ ಹಜರತ್ ಜರೀನಾಬೀ ದರ್ಗಾ ಸಮಿತಿಯಿಂದ ದರ್ಗಾ ಆವರಣದಲ್ಲಿ ಏರ್ಪಡಿಸಿದ್ದ 2023-24ನೇ ಸಾಲಿನಲ್ಲಿ ಮುಸ್ಲಿಂ ಸಮಾಜದ 10 ಮತ್ತು 12ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಚೆಕ್ ಹಾಗೂ ಪ್ರಶಸ್ತಿ ಪತ್ರ ನೀಡಿ ಮಾತನಾಡಿದರು. ಈ ರಾಷ್ಟ್ರಕ್ಕೆ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿ ಸೇವೆ ನೀಡಿದರು. ಅವರ ಜೀವನ ಮತ್ತು ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು. ಅವರು ರಾಷ್ಟ್ರಪತಿ ಭವನವನ್ನು ಜನರಿಗಾಗಿ ತೆರೆದವರು. ಗುಲಬರ್ಗ ವಿ.ವಿ.ಯಲ್ಲಿ ಸಮಾಜದ ಓರ್ವ ವಿದ್ಯಾರ್ಥಿ 16 ಬಂಗಾರದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಶೈಕ್ಷಣಿಕವಾಗಿ ಕಲಿಯಲು ಮುಂದೆ ಬಂದರೆ ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದು ಯುವಕರಿಗೆ ಸಲಹೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜನಾಯ್ಕ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನಿಮ್ಮ ಸಮಾಜದ ಮಕ್ಕಳು ಕಲಿಕೆಗೆ ಒತ್ತು ನೀಡಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾಜ ಗುರುತಿಸಿ ಅವರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸುವುದು ಉತ್ತಮ ಬೆಳವಣಿಗೆ ಎಂದರು.ಸಮಿತಿಯ ಅಧ್ಯಕ್ಷ ಇಮ್ರಾನ್ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ವರ್ಷ ಮೆಡಿಕಲ್, ಇಂಜಿನಿಯರ್ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಿ ಸಿದ್ದೆವು. ಈ ಭಾರಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಾರಣ 10- 12 ನೇ ತರಗತಿಯಲ್ಲಿ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಮುಂದಿನ ದಿನಗಳಲ್ಲಿ ಹಿರಿಯರ, ನಿರ್ದೇಶಕರ ಸಲಹೆ ಸೂಚನೆ ಪಡೆದು ಹೆಚ್ಚಿನ ಪ್ರೋತ್ಸಾಹ ನೀಡುತ್ತೇವೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಶಾಹಿದ್ ರಜನಿ ಮಾತನಾಡಿ, ಸಮಾಜದ ಮಹಿಳೆಯರು ಸಹ ಉತ್ತಮ ಶಿಕ್ಷಣ ಕಲಿತು ಉತ್ತಮ ನೌಕರಿ ಪಡೆಯುತ್ತಿದ್ದಾರೆ ಎಂದರು.ಪುರಸಭೆ ಸದಸ್ಯ ಸೈಯ್ಯದ್ ಯಾಸೀನ್ ಮಾತನಾಡಿ, ಸಮಾಜದ ಯುವಕರು ಶಿಕ್ಷಣದಿಂದ ಹಿಂದೆ ಸರಿಯುವುದು ಬೇಡ. ಉತ್ತಮ ಶಿಕ್ಷಣ ಪಡೆಯಲು ಮುಂದೆ ಬರಬೇಕು. ಡಾ.ಅಂಬೇಡ್ಕರ್ ಬಡತನದಿಂದ ಕಲಿತು ಈ ದೇಶದ ಸಂವಿಧಾನ ರಚಿಸಿದರು. ಅದರಂತೆ ನಮ್ಮಲ್ಲೂ ಉತ್ತಮ ಪ್ರತಿಭೆಗಳಿವೆ ಎಂದರು. ಸಮಾಜದ ಮುಖಂಡ ಹೈದರ್ ಮಾತನಾಡಿ ಈ ದರ್ಗಾ ಸಮಿತಿ ಹಿರಿಯರನ್ನು ಯುವಕರು ಕಡೆಗಣಿಸಬಾರದು. ಕಳೆದ 12 ವರ್ಷದಿಂದ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಬಡಮಕ್ಕಳನ್ನು ಸಮಿತಿ ದತ್ತು ಪಡೆದು ಅವರ ಸಂಪೂರ್ಣ ಶಿಕ್ಷಣಕ್ಕೆ ದಾರಿ ದೀಪ ವಾಗಲಿ ಎಂಬ ಸಲಹೆ ನೀಡಿದರು.

ಪುರಸಭೆ ಸದಸ್ಯ ಸೈಯದ್ ಇಕ್ಬಾಲ್, ಶಿಕ್ಷಕ ಮುನಾವರ್ ಭಾಷ, ಹಜರತ್ ದರ್ಗಾ ಸಮಿತಿ ಉಪಾಧ್ಯಕ್ಷ ಸೈಯ್ಯ ದ್ ಯಾಸೀನ್, ಕಾರ್ಯದರ್ಶಿ ಅನ್ಸರ್ ಖಾನ್, ಅಬ್ದುಲ್ ಖಾದರ್ ಕೆ.ಎ.ನಿರ್ದೇಶಕರಾದ ಅಪ್ರೋಜ್, ವಸೀಂ, ಪೈರೋಜ್ ಖಾನ್, ನಯಾಜ್,ನವಾಜ್ ಖಾನ್, ಸಲೀಂ, ರಪೀಕ್‍ ಅಲ್ಲಮ್, ಜಬೀವುಲ್ಲಾ ಖಾನ್, ಅಜಯ್, ಗೌಸ್ ಖಾನ್, ವಸೀ, ಶಂಷುದ್ದೀನ್, ಮಂಡಿ ಎಕ್ಬಾಲ್‌,ಖಾದರ್ ಹಾಗೂ ಪೋಷಕರು ಮತ್ತು ಮಕ್ಕಳು ಇದ್ದರು. 28ಕೆಕೆಡಿಯು3.

ಕಡೂರು ಹಜರತ್ ಜರೀನಾ ಬೀಬೀ ದರ್ಗಾ ಸಮಿತಿಯಿಂದ ಸಾಧನೆ ಮಾಡಿದ ಮಕ್ಕಳನ್ನು ಪ್ರೋತ್ಸಾಹಿಸಿ ಗೌರವಿಸಲಾಯಿತು.