ಸಾರಾಂಶ
ಗ್ರಾಮದ ಗಾಂಧಿ ಪ್ರತಿಮೆ ಮುಂಭಾಗ ಸಭೆ ಸೇರಿದ ಜೆಡಿಎಸ್ ನ ಕಾರ್ಯಕರ್ತರು, ಮುಖಂಡರು ಎಚ್.ಡಿ. ರೇವಣ್ಣನವರ ಅಭಿಮಾನಿಗಳು ಮೈಮಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಎಟಿ ಸೋಮಶೇಖರ್ ನೇತೃತ್ವದಲ್ಲಿ ಜಯ ಘೋಷಗಳನ್ನು ಕೂಗುತ್ತಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸತ್ಯಕ್ಕೆ ಜಯ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ, ಮಾಜಿ ಸಚಿವ ಎಚ್.ಡಿ. ರೇವಣ್ಣರಿಗೆ ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ಜಯವಾಗಲಿ ಎಂದು ಜಯಗೋಷ
ಕನ್ನಡಪ್ರಭ ವಾರ್ತೆ ಸಾಲಿಗ್ರಾಮ
ಮಾಜಿ ಸಚಿವ ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಸೋಮವಾರ ಸಂಜೆ ನ್ಯಾಯಾಲಯದಿಂದ ಜಾಮೀನು ಮಂಜೂರು ಆದೇಶ ಹೊರಬಿಳುತ್ತಿದ್ದಂತೆ ಮೈಮಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳಿ ಸೋಮಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.ಗ್ರಾಮದ ಗಾಂಧಿ ಪ್ರತಿಮೆ ಮುಂಭಾಗ ಸಭೆ ಸೇರಿದ ಜೆಡಿಎಸ್ ನ ಕಾರ್ಯಕರ್ತರು, ಮುಖಂಡರು ಎಚ್.ಡಿ. ರೇವಣ್ಣನವರ ಅಭಿಮಾನಿಗಳು ಮೈಮಲ್ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಎಟಿ ಸೋಮಶೇಖರ್ ನೇತೃತ್ವದಲ್ಲಿ ಜಯ ಘೋಷಗಳನ್ನು ಕೂಗುತ್ತಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸತ್ಯಕ್ಕೆ ಜಯ, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ, ಮಾಜಿ ಸಚಿವ ಎಚ್.ಡಿ. ರೇವಣ್ಣರಿಗೆ ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ಜಯವಾಗಲಿ ಎಂದು ಜಯಗೋಷಗಳನ್ನು ಕೂಗಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಆರ್. ಪ್ರಕಾಶ್, ಸದಸ್ಯರಾದ ಹರೀಶ್, ಗಂಗಾಧರ್, ಮುಖಂಡರಾದ ಎಸ್.ಕೆ. ಯೋಗಣ್ಣ, ಜಯರಾಮೇಗೌಡ, ಅಲ್ಪಸಂಖ್ಯಾತ ಮುಖಂಡರಾದ ಲಾಲು ಸಾಹೇಬ್ ಅಯಾಜ್ ಅಹಮದ್, ಬಿಜೆಪಿ ಮುಖಂಡರಾದ ನಟರಾಜ್ ಗ್ರಾಪಂ ಮಾಜಿ ಸದಸ್ಯರಾದ ಗುರುಪ್ರಸಾದ್, ವಾಸು ಹಾಗೂ ರಾಜಣ್ಣ ರವಿ ಕೇಶವಮೂರ್ತಿ ಇದ್ದಾರೆ.