ಚಿತ್ರ: ಡಿ೧೫-ಬಿಡಿವಿಟಿ(ಎ)ಭದ್ರಾವತಿಯಲ್ಲಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ನಾಗರೀಕರು ನಾಡಹಬ್ಬ ದಸರಾ ಉದ್ಘಾಟಕರಾದ ಸಮಾಜ ಸೇವಕ ಪಿ. ವೆಂಕಟರಮಣಶೇಟ್ ಹಾಗೂ ಪ್ರೇಮಾ ಶೇಟ್ ದಂಪತಿಯನ್ನು ಮಾಧವಚಾರ್ ವೃತ್ತದಿಂದ ನಗರಸಭೆ ಕಚೇರಿ ಆವರಣದವೆರಗೂ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. | Kannada Prabha
Image Credit: KP
ನಗರಸಭೆ ಕಚೇರಿ ಆವರಣದ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ
ಕನ್ನಡಪ್ರಭ ವಾರ್ತೆ, ಭದ್ರಾವತಿ ನವದುರ್ಗೆಯರನ್ನು ಪೂಜಿಸುವ ಮೂಲಕ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವ ಕೆಲಸ 9 ದಿನಗಳ ವಿಶೇಷ ಆಚರಣೆಗಳಿಂದ ಸಾಧ್ಯವಾಗುತ್ತದೆ. ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಕ್ಷೇತ್ರದ ಜನತೆಗೆ ಸುಖ- ಶಾಂತಿ ನೀಡಲಿ ಎಂದು ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ಹೇಳಿದರು. ನಗರಸಭೆ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿರುವ ದಸರಾ ಆಚರಣೆಗೆ ನಗರಸಭೆ ಕಚೇರಿ ಆವರಣದ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ದಸರಾ ಶಕ್ತಿದೇವತೆಗಳ ಹಬ್ಬ ಮಾತ್ರವಲ್ಲದೆ ನಾಡಿನ ಸಂಪ್ರದಾಯ ಸಂಸ್ಕೃತಿ ಬಿಂಬಿಸುವ ಹಬ್ಬವಾಗಿದೆ. ಇಂತಹ ಹಬ್ಬಕ್ಕೆ ಚಾಲನೆ ನೀಡಲು ಅವಕಾಶ ಮಾಡಿಕೊಟ್ಟ ನಗರಸಭೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡಿ, ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು ಸೇರಿದಂತೆ ಎಲ್ಲ ಸಮಾಜಗಳ, ಧರ್ಮಗಳ ಜನರು ಒಟ್ಟಾಗಿ ದಸರೆ ಆಚರಿಸುವಂತಾಗಬೇಕು. ಆಗ ಮಾತ್ರ ಏಕತೆ ಕಾಣಲು ಸಾಧ್ಯ. ಅಂತಹ ಸೌಹಾರ್ದ ಹಬ್ಬಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕು ಎಂದರು. ನಗರಸಭೆ ಅಧ್ಯಕ್ಷೆ ಶೃತಿ ಸಿ.ವಸಂತಕುಮಾರ್ ಕೆ.ಜಿ ಮಾತನಾಡಿ, ಹಲವು ಸಂಸ್ಕೃತಿಗಳನ್ನು ಒಳಗೊಂಡಿರುವ ಭಾರತದಲ್ಲಿ ಸಂಸ್ಕೃತಿಯ ಉಳಿವಿಗೆ ದಸರಾ ಪೂರಕವಾಗಿದೆ ಎಂದರು. ಪೌರಾಯುಕ್ತ ಮನುಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭದ್ರಾವತಿ ದಸರಾ ಆಚರಣೆಯಲ್ಲಿ ಕುಸ್ತಿ ಪಂದ್ಯಾವಳಿಗೆ ಜನರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ ಎಂದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ವಿವಿಧ ಸಮಿತಿಗಳ ಅಧ್ಯಕ್ಷರಾದ ಬಷೀರ್ ಅಹಮದ್, ಬಸವರಾಜ ಬಿ. ಆನೇಕೊಪ್ಪ, ಚನ್ನಪ್ಪ, ಆರ್. ಮೋಹನ್‌ಕುಮಾರ್, ವಿ. ಕದಿರೇಶ್, ಮಣಿ ಎಎನ್‌ಎಸ್, ಅನುಸುಧಾ ಮೋಹನ್ ಪಳನಿ, ಬಿ.ಕೆ ಮೋಹನ್ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪೌರಾಯುಕ್ತರು, ಅಧಿಕಾರಿಗಳು, ಸಿಬ್ಬಂದಿ ಪೌರಕಾರ್ಮಿಕರು ಮತ್ತು ನಾಗರೀಕರು ಪಿ. ವೆಂಕಟರಮಣ ಶೇಟ್ ಹಾಗೂ ಪ್ರೇಮಾ ಶೇಟ್ ದಂಪತಿಯನ್ನು ಮಾಧವಚಾರ್ ವೃತ್ತದಿಂದ ನಗರಸಭೆ ಕಚೇರಿ ಆವರಣದವೆರಗೂ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಕಂದಾಯಾಧಿಕಾರಿ ರಾಜ್‌ಕುಮಾರ್ ನಿರೂಪಿಸಿ, ಪರಿಸರ ಅಭಿಯಂತರ ಪ್ರಭಾಕರ್ ಸ್ವಾಗತಿಸಿದರು. ಪವನ್‌ಕುಮಾರ್ ಉಡುಪ, ನರಸಿಂಹಚಾರ್, ರಮಾಕಾಂತ್ ನೇತೃತ್ವದ ತಂಡದ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. - - - -ಡಿ15-ಬಿಡಿವಿಟಿ: ಭದ್ರಾವತಿ ನಗರಸಭೆ ನೇತೃತ್ವದ ದಸರೆಗೆ ಸಮಾಜ ಸೇವಕ ಪಿ. ವೆಂಕಟರಮಣ ಶೇಟ್ ಚಾಲನೆ ನೀಡಿದರು. -ಡಿ15ಬಿಡಿವಿಟಿ(ಎ): ಭದ್ರಾವತಿಯಲ್ಲಿ ದಸರೆಗೆ ಚಾಲನೆ ಅಂಗವಾಗಿ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಉದ್ಘಾಟಕರಾದ ಸಮಾಜ ಸೇವಕ ಪಿ. ವೆಂಕಟರಮಣಶೇಟ್ ಹಾಗೂ ಪ್ರೇಮಾ ಶೇಟ್ ದಂಪತಿಯನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.