ಸಾರಾಂಶ
ನಾಗದೇವರ, ಚೌಡೇಶ್ವರಿ ಹಾಗೂ ಜಟ್ಟಿಗೇಶ್ವರ ದೇವರ ಕಲಾಭಿವೃದ್ಧಿಹೋಮ ಮತ್ತು ಕಾಲಭೈರವ ಹಾಗೂ ಅಮ್ಮನವರ ಸಹಿತ ಪರಿವಾರ ದೇವರುಗಳ ಸಂಪಾದ ಪೂಜೆ ಮತ್ತು ಶ್ರೀ ದೇವರುಗಳ ದರ್ಶನ ಸೇವೆ ನಾಗಪಾತ್ರಿ ನರೇಶ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಬೈಂದೂರುಇಲ್ಲಿನ ಹಳಗೇರಿಯಲ್ಲಿ ಯಡಮೋಗೆಯ ಸಿದ್ದಪೀಠ ಕೊಡಚಾದ್ರಿ ಹಲವರಿ ಮಠದ ಪೀಠಾಧ್ಯಕ್ಷ ಮಹಾಂತ ಯೋಗಿ ಜಗದೀಶನಾಥ ಜೀ ಅವರ ದಿವ್ಯ ಉಪಸ್ಥಿತಿಯಲ್ಲಿ ಗುರುಪಾದ ಪೂಜೆ ಹಾಗೂ ದೀಕ್ಷಾ ಕಾರ್ಯಕ್ರಮ ನಡೆಯಿತು.
ನಾಗದೇವರ, ಚೌಡೇಶ್ವರಿ ಹಾಗೂ ಜಟ್ಟಿಗೇಶ್ವರ ದೇವರ ಕಲಾಭಿವೃದ್ಧಿಹೋಮ ಮತ್ತು ಕಾಲಭೈರವ ಹಾಗೂ ಅಮ್ಮನವರ ಸಹಿತ ಪರಿವಾರ ದೇವರುಗಳ ಸಂಪಾದ ಪೂಜೆ ಮತ್ತು ಶ್ರೀ ದೇವರುಗಳ ದರ್ಶನ ಸೇವೆ ನಾಗಪಾತ್ರಿ ನರೇಶ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಸಂಪನ್ನಗೊಂಡಿತು.ಇದಕ್ಕೆ ಮೊದಲು ವಾದ್ಯ - ಚಂಡೆ ವಾದನದೊಂದಿಗೆ ಭವ್ಯ ಮೆರವಣಿಗೆ ಮೂಲಕ ಶ್ರೀ ಸ್ವಾಮೀಜಿ ಅವರನ್ನು ಬರಮಾಡಿಕೊಂಡು ಪಾದ ಪೂಜೆ ಸಲ್ಲಿಸಲಾಯಿತು. ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮೂರು ಮಂದಿ ಶಿಷ್ಯರಿಗೆ ದೀಕ್ಷೆಯನ್ನು ನೀಡಿದರು.ಈ ಸಂದರ್ಭದಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ಕೇಶವ ಕೋಟೇಶ್ವರ, ಉಪಾಧ್ಯಕ್ಷರಾದ ಕೃಷ್ಣಯ್ಯ ಜೋಗಿ ಅಂಕದಕಟ್ಟೆ ಮತ್ತು ರಮೇಶ್ ಜೋಗಿ, ವಿಶ್ವ ಹಿಂದೂ ಪರಿಷತ್ ಭಟ್ಕಳ ತಾಲೂಕು ಸದಸ್ಯ ರಮಾನಾಥ ಜೋಗಿ, ಉತ್ತರ ಕನ್ನಡ ಜಿಲ್ಲೆಯ ಜೋಗಿ ಸಮಾಜ ಸಂಘದ ಅಧ್ಯಕ್ಷರು ಶಿವರಾಮ್ ಜೋಗಿ, ಹಲವರಿ ಮಠದ ಪ್ರಧಾನ ಅರ್ಚಕರು ಸಂಪತ್ ಜೋಗಿ, ತೆಂಕಬೆಟ್ಟು ಕಾಲಭೈರವ ದೇವಸ್ಥಾನದ ಪ್ರಧಾನ ಅರ್ಚಕರು ಅಣ್ಣಪ್ಪಯ್ಯ ಬಳೆಗಾರ್ ಕಡೆಮನೆ, ಬೈಂದೂರು ತಾಲೂಕು ಜೋಗಿ ಸಮಾಜ ಸೇವಾಸಂಘದ ಅಧ್ಯಕ್ಷರು ದಯಾನಂದ ಜೋಗಿ, ಹಲವರಿ ಮಠದ ಸಮಿತಿ ಸದಸ್ಯರುಗಳಾದ ಸುಶೀಲ ಜೋಗಿ ಕಾಳವಾರ, ರವೀಂದ್ರ ಜೋಗಿ ಕೋಟ, ಉಡುಪಿ ಜಿಲ್ಲಾ ಜೋಗಿ ಘಟಕ ಮಹಿಳಾ ಸಂಘದ ಅಧ್ಯಕ್ಷರಾದ ರಜನಿ ಜೋಗಿ ಸೂಡ ಮುಂತಾದವರು ಉಪಸ್ಥಿತರಿದ್ದರು. ಶ್ವೇತಾ ವಸಂತ್ ಜೋಗಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.