ಬಿ.ಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸಿ.ಬೋರಯ್ಯ ಅವಿರೋಧ ಆಯ್ಕೆ

| Published : Nov 18 2024, 12:01 AM IST

ಬಿ.ಹೊಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸಿ.ಬೋರಯ್ಯ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದಿಂದ ಅವಿರೋಧವಾಗಿ ಆಯ್ಕೆ ಆಗಿದ್ದು, ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸದಸ್ಯರ ಜೊತೆಗೂಡಿ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಸಾಗಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಬಿ.ಹೊಸೂರು ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿ.ಬೋರಯ್ಯ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಬಿ.ಕೆ ಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು 21 ಮಂದಿ ಸದಸ್ಯರ ಪೈಕಿ 15 ಮಂದಿ ಮಾತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸಿ.ಬೋರಯ್ಯ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಗಣೇಶ್ ಹೆಗ್ಡೆ ಸಿ.ಬೋರಯ್ಯ ಅವರ ಆಯ್ಕೆಯನ್ನು ಘೋಷಿಸಿದರು.

ನಂತರ ನೂತನ ಅಧ್ಯಕ್ಷ ಸಿ.ಬೋರಯ್ಯ ಮಾತನಾಡಿ, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಸಹಕಾರದಿಂದ ಅವಿರೋಧವಾಗಿ ಆಯ್ಕೆ ಆಗಿದ್ದು, ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದಗಳು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಸದಸ್ಯರ ಜೊತೆಗೂಡಿ ಪಂಚಾಯಿತಿಯನ್ನು ಅಭಿವೃದ್ಧಿಯತ್ತ ಸಾಗಿಸುತ್ತೇನೆ ಎಂದರು.

ಜೆಡಿಎಸ್ ಮುಖಂಡ ಬಿಳಿದೇಗಲು ಪ್ರತಾಪ್ ಮಾತನಾಡಿ, ಸಿ.ಬೋರಯ್ಯ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಬಿ.ಹೊಸೂರು ಗ್ರಾ.ಪಂ ವ್ಯಾಪ್ತಿಯ ಎಲ್ಲ ಗ್ರಾಮಸ್ಥರಿಗೂ, ಜೆಡಿಎಸ್ ಮುಖಂಡರಾದ ಬಿ.ಆರ್. ರಾಮಚಂದ್ರ, ವಿಜಯಾನಂದ, ಕೆಬ್ಬಳ್ಳಿ ಆನಂದ್, ಸ್ಥಳೀಯ ಮುಖಂಡರಾದ ಮಹೇಶ್, ಶ್ರೀಧರ್, ಬಿ.ಹೊಸೂರು ರಾಮಣ್ಣ ಅವರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಪಕ್ಷದ ಪರ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ನೂತನ ಅಧ್ಯಕ್ಷ ಸಿ.ಬೋರಯ್ಯರನ್ನು ಗ್ರಾಪಂ ಸದಸ್ಯರು, ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಅಭಿನಂದಿಸಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ದೊಡ್ಡಮ್ಮ ತಾಯಿ, ಜಿ.ಪಿ.ಮಹೇಶ್, ಹೊಸೂರು ಶ್ರೀಧರ್, ಕೃಷ್ಣೇಗೌಡ, ರಾಮೇಗೌಡ, ಕೆಬ್ಬಳ್ಳಿ ರಮೇಶ್, ಕೆಬ್ಬಳ್ಳಿ ಶಿವಲಿಂಗೇಗೌಡ, ಹಂಚನಹಳ್ಳಿ ಜಯೇಂದ್ರ, ಶಂಕರಾಚಾರಿ, ನಂದೀಶ್, ದಿವ್ಯ, ಪವಿತ್ರ, ಕೆ.ಗೌಡಗೆರೆ ಮನು, ಶ್ರೀಧರ್, ಕಾಂತರಾಜು ಸೇರಿ ಸದಸ್ಯರು, ಪಿಡಿಒ ಮಹೇಶ್, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.