ಸಾರಾಂಶ
ತಮ್ಮ ನಿವಾಸದಲ್ಲಿ ಕ್ಯಾತನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜೆಡಿಎಸ್- ಬಿಜೆಪಿ ಬೆಂಬಲತ ನೂತನ ನಿರ್ದೇಶಕರಾದ ಅಭಿಷೇಕ್(ಗವೀಗೌಡರ ಮನು) ಹಾಗೂ ರೈಲ್ವೆ ಶಿವಣ್ಣನವರ ಯಶ್ವಂತ್ ಅವರನ್ನು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕ್ಯಾತನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾದ ಜೆಡಿಎಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಅಭಿನಂದಿಸಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಕ್ಯಾತನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜೆಡಿಎಸ್- ಬಿಜೆಪಿ ಬೆಂಬಲತ ನೂತನ ನಿರ್ದೇಶಕರಾದ ಅಭಿಷೇಕ್(ಗವೀಗೌಡರ ಮನು) ಹಾಗೂ ರೈಲ್ವೆ ಶಿವಣ್ಣನವರ ಯಶ್ವಂತ್ ಅವರನ್ನು ಅಭಿನಂದಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ತಾಲೂಕಿನ ಕ್ಯಾತನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಅಭಿಷೇಕ್ ಹಾಗೂ ಯಶ್ವಂತ್ ಅವರನ್ನು ಮತದಾರರು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ನಿರ್ದೇಶಕರು ಜತೆಗೂಡಿ ಸಹಕಾರ ಸಂಘದ ಅಭಿವೃದ್ಧಿಗೆ ಕೆಲಸ ಮಾಡಬೇಕು, ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿವೆ, ಹಾಗಾಗಿ ಸಹಕಾರ ಸಂಘದ ಮೂಲಕ ಸರಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ಒದಗಿಸುವ ಕೆಲಸ ಮಾಡಬೇಕು ಎಂದರು.ಜೆಡಿಎಸ್ ರಾಜ್ಯ ರೈತ ವಿಭಾಗದ ಮಾಜಿ ಉಪಾಧ್ಯಕ್ಷ ಗವೀಗೌಡ, ಪ್ರವೀಣ್, ಚೇತನ್, ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಂದ್ರ, ರೇವಣ್ಣ, ಎಲೆಕೆರೆ ರಾಜೇಶ್, ಚಿಕ್ಕಮರಾಮಂಜಣ್ಣ, ಮಿಥುನ್, ವಾಸು, ತಿಮ್ಮಪ್ಪ, ಸುಬ್ಬಣ್ಣ, ಅರುಣ, ವಿಜಿ, ಡಾಲು ಸೇರಿದಂತೆ ಹಲವರು ಹಾಜರಿದ್ದರು.