(3ನೇ ಪುಟದ ಲೀಡ್ ನೊಂದಿಗೆ ಬಳಸುವುದು)
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಳೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಹತಾಶರಾದ ಮಾಜಿ ಸಚಿವ ಸಿ.ಟಿ.ರವಿ ಅವರ ಮಾನಸಿಕ ಆರೋಗ್ಯ ಸ್ಥಿತಿ ಕೆಟ್ಟಿದೆ. ಹಾಗಾಗಿ, ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ವಾಗ್ದಾಳಿ ನಡೆಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರದ ಆದಿಶಕ್ತಿ ನಗರದ ರಸ್ತೆ ವಿಚಾರವಾಗಿ ಕಾಂಗ್ರೆಸ್ ನಾಯಕರ ಮೇಲೆ ನಡೆದ ಗೂಂಡಾಗಿರಿ ಘಟನೆ ಅತ್ಯಂತ ಖಂಡನೀಯ. ನಾಲ್ಕು ಬಾರಿ ಕ್ಷೇತ್ರದ ಶಾಸಕರಾಗಿ, ಸಚಿವರಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಸಿ.ಟಿ.ರವಿ ಅವರಿಗೆ ಇಂತಹ ದುರ್ಬುದ್ಧಿ ಬರಬಾರದಿತ್ತು. ಸಮಾಜದಲ್ಲಿ ಶಾಂತಿ ಕಾಪಾಡಬೇಕಾದ ಜವಾಬ್ದಾರಿ ಸ್ಥಾನದಲ್ಲಿ ಇರುವವರೇ ಶಾಂತಿ ಹಾಳು ಮಾಡಿದರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ ಎಂದರು.ಕೆಟ್ಟ ಕೆಟ್ಟ ಪದ ಬಳಕೆ ಮಾಡಿ ಬಾಯಿಗೆ ಬಂದಂತೆ ಮಾತನಾಡಿರುವುದನ್ನು ಗಮನಿಸಿದರೆ ಸೋಲಿನಿಂದ ಹತಾಶಾರಾಗಿ ಮಾನಸಿಕ ಆರೋಗ್ಯ ಏರುಪೇರಾಗಿರಬಹುದೆಂಬ ಅನುಮಾನ ಮೂಡುತ್ತಿದೆ ಎಂದು ಲೇವಡಿ ಮಾಡಿದರು.ನಮ್ಮ ಶಾಸಕರ ಬಗ್ಗೆ ಮಾತನಾಡುವ ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಬೇಕು. 2008ರಲ್ಲಿ ಬೆಳವಾಡಿ ಕೆರೆ ಸಮೀಪದಲ್ಲಿ ನಗರದ ಎಂ.ಜಿ.ರಸ್ತೆಯ ಜ್ಯುವೆಲ್ಲರಿ ಶಾಪ್ ಓನರ್ ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿಸಲು ಹೋಗಿ ಸಿಕ್ಕಿಬಿದ್ದಿದ್ದವರು ಯಾರು? ಆ ಕೇಸ್ ನಲ್ಲಿ ಎ1 ಯಾರು ಆಗಿದ್ದರು. ಅದರಲ್ಲಿ ತಮ್ಮ ಭಾಮೈದನ ಪಾತ್ರ ಏನು ಎಂಬುದನ್ನು ಕ್ಷೇತ್ರದ ಜನತೆ ಮರೆತಿಲ್ಲ ಎಂದು ತಿರುಗೇಟು ನೀಡಿದರು.
2004ರಲ್ಲಿ ತಾವು ಶಾಸಕರಾದಾಗ ನಿಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಹಾಗೂ ಈಗ ಹೇಗಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಿ. ಕಳೆದ ಮೂರು ವರ್ಷಗಳಿಂದ ಚಿಕ್ಕಮಗಳೂರು ಶಾಂತವಾಗಿದೆ. ಜನರ ನೆಮ್ಮದಿ ಕೆಡಿಸಲು ಸಿ.ಟಿ.ರವಿ ಅವರು ಪ್ರಯತ್ನಿಸಬಾರದು. ನಿಮಗೆ ಕಾಮಗಾರಿ ಬಗ್ಗೆ ಕಾಳಜಿ ಇದ್ದಿದ್ದರೆ ಅಧಿಕಾರಿಗಳೊಂದಿಗೆ ಸೂಕ್ತ ಸಭೆಯಲ್ಲಿ ಚರ್ಚಿಸಿ ಸಲಹೆ ನೀಡ ಬಹುದಿತ್ತು. ಬದಲಿಗೆ ಗೂಂಡಾಗಳಂತೆ ವರ್ತನೆ ಮಾಡುವವರನ್ನು ಉದ್ದೇಶ ಪೂರ್ವಕವಾಗಿ ಕರೆದುಕೊಂಡು ಹೋಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಬೆಟಗೆರೆ, ಶಿವಕುಮಾರ್, ಪರಮೇಶ್ ರಾಜ್ ಅರಸ್, ತನೋಜ್ ನಾಯ್ಡು, ಪ್ರಕಾಶ್ ರೈ ಉಪಸ್ಥಿತರಿದ್ದರು.-- ಬಾಕ್ಸ್--ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್ ಮುಖಂಡರ ಹಿಂದೆ ನಿಲ್ಲುವ ನೀವು ಅವರಿಗೆ ಬಕೆಟ್ ಹಿಡಿಯುತ್ತಿದ್ದೀರಾ ಎಂದು ಪ್ರಶ್ನಿಸಿದರು.ಖೋಟಾ ನೋಟು ಶಾಸಕ, ನಕಲಿ ಮದ್ಯ ಮಾರಾಟದ ಕಿಂಗ್ ಪಿನ್ ಸಹಕಾರ ನೀಡುತ್ತಿದ್ದೀರಾ ಎಂದು ಶಾಸಕ ತಮ್ಮಯ್ಯ ವಿರುದ್ದ ಸುಳ್ಳು ಆರೋಪ ಮಾಡಿದ್ದೀರಾ, ಈ ಬಗ್ಗೆ ಶಾಸಕರೇ ಶೀಘ್ರದಲ್ಲಿ ಉತ್ತರ ನೀಡಲಿದ್ದಾರೆ. ಜತೆಗೆ, ನಿಮ್ಮೊಂದಿಗೆ 20 ವರ್ಷ ತಮ್ಮಯ್ಯ ಇದ್ದರು. ನೀವು ಮಾಡಿದ ಎಲ್ಲ ಕೃತ್ಯಗಳು ಅವರಿಗೆ ಗೊತ್ತಿದೆ. ಅದನ್ನು ಬಹಿರಂಗ ಪಡಿಸಲಿದ್ದಾರೆ ಎಂದು ಮಂಜೇಗೌಡ ಹೇಳಿದರು.ಫೋಟೋ: ಎಚ್.ಪಿ.ಮಂಜೇಗೌಡ
