ಸಾರಾಂಶ
ಛಾಯಾಗ್ರಾಹಕ ವತ್ತಿಗೆ 175 ವರ್ಷದ ಇತಿಹಾಸವಿದೆ. ಪ್ರಾರಂಭದಲ್ಲಿದ್ದ ಕ್ಯಾಮೆರಾಗಳು ಇಂದು ಸುಧಾರಣೆಗೊಂಡಿದ್ದು ಇಂದು ಯಾರು ಬೇಕಾದರೂ ಛಾಯಾಗ್ರಾಹಕರಾಗಬಹುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಯರಗಟ್ಟಿ
ಛಾಯಾಗ್ರಾಹಕ ವತ್ತಿಗೆ 175 ವರ್ಷದ ಇತಿಹಾಸವಿದೆ. ಪ್ರಾರಂಭದಲ್ಲಿದ್ದ ಕ್ಯಾಮೆರಾಗಳು ಇಂದು ಸುಧಾರಣೆಗೊಂಡಿದ್ದು ಇಂದು ಯಾರು ಬೇಕಾದರೂ ಛಾಯಾಗ್ರಾಹಕರಾಗಬಹುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ನಡೆದ ತಾಲೂಕು ಛಾಯಾಗ್ರಾಹಕರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಯಾಮೆರಾ ಉಪಯೋಗಿಸುವವರು ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ. ಇದೊಂದು ತಪಸ್ಸಿನಂತಹ ಕೆಲಸ ಶ್ರದ್ಧೆ, ನಿಷ್ಠೆಯಿಂದ ಕೆಲಸಮಾಡಿದರೇ ಈ ವೃತ್ತಿಯಲ್ಲಿ ಸಾಧನೆ ಮಾಡಬಹುದು ಎಂದು ತಿಳಿಸಿದರು.ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲೂ ಸಂಘಟನೆಯಿಲ್ಲದಿದ್ದರೇ ಸಾಧನೆ ಸಾಧ್ಯವಿಲ್ಲ. ಹೀಗಾಗಿ ಸಂಘಟನೆಯ ಅವಶ್ಯಕತೆ ಎಲ್ಲರಿಗೂ ಇದೆ ಎಂದರು.ಈ ವೇಳೆ ಅಸೋಯೇಶನ್ ತಾಲೂಕು ಘಟಕದ ಅಧ್ಯಕ್ಷ ಪ್ರಮೋದ ಬಡಿಗೇರ, ಮಲ್ಲಿಕಾರ್ಜುನ ಕೆ.ಆರ್.ಲಕ್ಷ್ಮಣ, ಯಮಕನಮರಡಿ, ಬಸವರಾಜ ರಾಮಣ್ಣವರ, ಅಶೋಕ ಹಾದಿಮನಿ, ಭಾಸ್ಕರ ಹಿರೇಮೇತ್ರಿ, ಸುರೇಶ ಭಜಂತ್ರಿ, ನಿಖಿಲ ಪಾಟೀಲ, ಫಕ್ಕೀರಪ್ಪ ಹದ್ದನವರ, ಹನಮಂತ ಹಾರುಗೊಪ್ಪ, ಸಲಿಂಬೇಗ ಜಮಾದಾರ, ಶಂಕರ ಇಟ್ನಾಳ, ವಿಕ್ರಮ ಇಂಗಳೆ, ಚನ್ನಪ್ಪ ಪಣದಿ, ಮಹಾಂತೇಶ ಡವಳೇಶ್ವರ, ಪ್ರಜ್ವಲ ಮುದ್ದಾಗಿ, ರಮೇಶ ದಳವಾಯಿ ಹಾಗೂ ಸಂಘದ ಸದಸ್ಯರು ಇದ್ದರು.