ಸಾರಾಂಶ
ಹಾವೇರಿ ನಗರದ ಪಿ.ಬಿ. ರಸ್ತೆ, ಅಶ್ವಿನಿ ನಗರ, ಗೆಳೆಯರ ಬಳಗ ಪ್ರೌಢಶಾಲೆ, ವೈಭವ್ ಪಾರ್ಕ್ ಸೇರಿದಂತೆ ಪ್ರಮುಖ ವಾರ್ಡುಗಳಿಗೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಾಧನೆ ಹಾಗೂ ಗ್ಯಾರಂಟಿ ಯೋಜನೆಗಳ ಕುರಿತು ವಿವರಿಸಿದರು.
ಕನ್ನಡಪ್ರಭ ವಾರ್ತೆ ಹಾವೇರಿ
ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪಕ್ಷದ ಮುಖಂಡರು ನಗರದ ಪ್ರಮುಖ ವಾರ್ಡುಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಅನುಷ್ಠಾನಗೊಳಿಸಿರುವ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜೊತೆಗೆ ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಒಂದು ಲಕ್ಷ, ರೈತರ ಸಾಲ ಮನ್ನಾ, ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ, ಶ್ರಮಿಕರಿಗೆ ₹೪೦೦ ಕನಿಷ್ಠ ವೇತನ ಮತ್ತು ಜಾತಿ ಗಣತಿ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಿದೆ ಎಂದು ನಗರದ ಪಿ.ಬಿ. ರಸ್ತೆ, ಅಶ್ವಿನಿ ನಗರ, ಗೆಳೆಯರ ಬಳಗ ಪ್ರೌಢಶಾಲೆ, ವೈಭವ್ ಪಾರ್ಕ್ ಸೇರಿದಂತೆ ಪ್ರಮುಖ ವಾರ್ಡುಗಳಿಗೆ ತೆರಳಿ ಪಕ್ಷದ ಸಾಧನೆ ಹಾಗೂ ಗ್ಯಾರಂಟಿ ಯೋಜನೆಗಳ ಕುರಿತು ವಿವರಿಸಿದರು.
ನಗರಸಭೆ ಸದಸ್ಯರಾದ ಗಣೇಶ ಬಿಷ್ಟಣ್ಣನವರ, ಪೀರ್‌ಸಾಬ ಚೋಪದಾರ್, ನಗರಸಭೆ ವಿರೋಧ ಪಕ್ಷದ ಮಾಜಿ ನಾಯಕ ಬಾಬುಸಾಬ ಮೋಮಿನಗಾರ, ನಗರಸಭೆ ಮಾಜಿ ಅಧ್ಯಕ್ಷ ಮೈಲಾರಪ್ಪ ಬೊಗಳಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ, ಪಕ್ಷದ ಕಾರ್ಯಕರ್ತರಾದ ಬಸವರಾಜ ಮಾಳಗಿ, ಗುಡ್ಡನಗೌಡ ಅಂದಾನಿಗೌಡ್ರ, ರವಿ ಪುತ್ರನ್, ವೆಂಕಟೇಶ ಬಿಜಾಪುರ, ರಮೇಶ ಆನವಟ್ಟಿ, ರಾಜೇಶ ಕಾಶಪ್ಪನವರ, ಶಾಂತವ್ವ ಶಿರೂರ, ಶಿಲ್ಪಾ ಬಡಮ್ಮನವರ, ಗೀತಾ ಪ್ರಕಾಶ, ಇಮಾಮ್ ಮುಗದೂರ ಇದ್ದರು.