ಸಾರಾಂಶ
ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಪರ ಮಹಿಳಾ ಮುಖಂಡರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಾಲೂಕಿನ ವಿವಿಧೆಡೆ ಶನಿವಾರ ಮತಯಾಚಿಸಿದರು.
- ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮುಖಂಡರಿಂದ ಮತಯಾಚನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಪರ ಮಹಿಳಾ ಮುಖಂಡರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಾಲೂಕಿನ ವಿವಿಧೆಡೆ ಶನಿವಾರ ಮತಯಾಚಿಸಿದರು.
ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಕ್ಕುವಾಡ, ಹಳೇ ಕೊಳೇನಹಳ್ಳಿ, ಹೊಸ ಕೊಳೇನಹಳ್ಳಿ, ಕನಗೊಂಡನಹಳ್ಳಿ, ಬಲ್ಲೂರು, ಜಡಗನಹಳ್ಳಿ, ಸಿರಿಗನಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗಳಿಗೆ ತೆರಳಿದ ಮಹಿಳೆಯರು ಜಿ.ಬಿ.ವಿನಯಕುಮಾರ ಪರ ಪ್ರಚಾರ ಕೈಗೊಂಡರು. ಇದೇ ವೇಳೆ ಮಾತನಾಡಿದ ಮಹಿಳಾ ಮುಖಂಡರು, ದಾವಣಗೆರೆ ತಾ. ಕಕ್ಕರಗೊಳ್ಳ ಗ್ರಾಮದ ಪ್ರತಿಭಾವಂತ ಯುವಕ, ವಿದ್ಯಾವಂತ, ಐಎಎಸ್- ಐಪಿಎಸ್- ಕೆಎಎಸ್‌ನಂತಹ ಅಧಿಕಾರಿಗಳನ್ನು ದೇಶ, ರಾಜ್ಯಕ್ಕೆ ನೀಡಿದ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಜಿ.ಬಿ.ವಿನಯಕುಮಾರ ಬಡವರು, ಹಿಂದುಳಿದವರು, ದಲಿತರು, ರೈತರು, ಗ್ರಾಮೀಣರ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದಾರೆ. ಎಲ್ಲಾ ಜಾತಿ, ವರ್ಗದವರ ಅಭಿವೃದ್ಧಿಯ ಬಗ್ಗೆ ಸದಾ ಚಿಂತನೆ ಮಾಡುವ ಜಿ.ಬಿ. ವಿನಯ್ ಅವರಿಗೆ ಮತ ನೀಡಿ, ಗೆಲ್ಲಿಸುವಂತೆ ಮನವಿ ಮಾಡಿದರು.ಕಕ್ಕರಗೊಳ್ಳ ಗ್ರಾಪಂ ಉಪಾಧ್ಯಕ್ಷೆ, ಸ್ತ್ರೀಶಕ್ತಿ ಸಂಘಗಳ ತಾಲೂಕು ಒಕ್ಕೂಟ ಅಧ್ಯಕ್ಷೆ ಕೆ. ಬಿ. ಶಕುಂತಲಾ ಬಸವರಾಜಪ್ಪ, ಶೈಲಾ ಬಿ.ವಿ.ಜಗದೀಶ ಒಡೆಯರ್, ಸ್ತ್ರೀಶಕ್ತಿ ಒಕ್ಕೂಟದ ಸದಸ್ಯರಾದ ವನಜಾಕ್ಷಮ್ಮ, ಕೊಳೇನಹಳ್ಳಿ ಸುನಂದಾ ವರ್ಣೇಕರ್, ಜಿ.ಎನ್.ರುದ್ರೇಶ್ ಹೊಸ ಕೊಳೇನಹಳ್ಳಿ, ಹಿರಿಯ ಪತ್ರಕರ್ತ ಪುರಂದರ ಲೋಕಿಕೆರೆ, ಚಿಕ್ಕಣ್ಣ ಮಲ್ಲನಾಯಕನಹಳ್ಳಿ ಸೇರಿದಂತೆ ಮಹಿಳಾ ಮುಖಂಡರು ಭಾಗವಹಿಸಿದ್ದರು.
- - - -13ಕೆಡಿವಿಜಿ8: ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಪರ ಮಹಿಳಾ ಮುಖಂಡರು ಮತಯಾಚಿಸಿದರು.