ಸಾರಾಂಶ
ಹೇಮಾವತಿ ನೀರಿನ ತುಮಕೂರು ಜಿಲ್ಲೆಯ ಹಕ್ಕಿಗಾಗಿ ಗುರುವಾರ ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲಾ ಪಕ್ಷದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಹೋರಾಟಗಾರರು, ಎಲ್ಲಾ ಸಂಘ ಸಂಸ್ಥೆಗಳು, ನಾಗರಿಕರು ಮತ್ತು ರೈತರನ್ನು ಒಳಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ಹೆಗ್ಗೆರೆ ನಿವಾಸದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಮನವಿ ಪತ್ರ ನೀಡುವ ಬಗ್ಗೆ ತೀರ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ತುಮಕೂರು
ಹೇಮಾವತಿ ನೀರಿನ ತುಮಕೂರು ಜಿಲ್ಲೆಯ ಹಕ್ಕಿಗಾಗಿ ಗುರುವಾರ ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲಾ ಪಕ್ಷದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಹೋರಾಟಗಾರರು, ಎಲ್ಲಾ ಸಂಘ ಸಂಸ್ಥೆಗಳು, ನಾಗರಿಕರು ಮತ್ತು ರೈತರನ್ನು ಒಳಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ಹೆಗ್ಗೆರೆ ನಿವಾಸದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಮನವಿ ಪತ್ರ ನೀಡುವ ಬಗ್ಗೆ ತೀರ್ಮಾನಿಸಲಾಯಿತು.ಹೇಮಾವತಿ ನಾಲಾ ವಲಯ ಗೊರೂರು ಜಲಾಶಯದಿಂದ ತುಮಕೂರಿಗೆ ಹಂಚಿಕೆಯಾದ ನೀರಿನಲ್ಲೇ ಮಾಗಡಿ ಹಾಗೂ ರಾಮನಗರಕ್ಕೆ ಶ್ರೀರಂಗ ಯೋಜನೆ ಅಡಿ ನೀರು ಸೆಳೆಯುವ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿಸಿ ನಡೆಯುತ್ತಿರುವ ಹೋರಾಟದ ಮುಂದಿನ ಹೆಜ್ಜೆಯ ಬಗ್ಗೆ ಬೆಂಬಲ ಘೋಷಿಸಲಾಯಿತು. ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವೀರೇಶ್ ಪ್ರಸಾದ್, ಸಮಾಜ ಸೇವಕ ಎಸ್ ರಾಮಚಂದ್ರರಾವ್, ಕನ್ನಡ ಮತ್ತು ಸಂಸ್ಕೃತಿ ವೇದಿಕೆಯ ರಾಜ್ಯ ಅಧ್ಯಕ್ಷ ಕನ್ನಡ ಪ್ರಕಾಶ್, ತುಮಕೂರು ಜಿಲ್ಲಾ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಶಬ್ಬೀರ್ ಅಹಮದ್, ಇಂದ್ರ ಕುಮಾರ್ ಡಿ ಕೆ, ರಫೀಕ್ ಅಹಮದ್, ಇಮ್ರಾನ್ ಅಹಮದ್, ಕರುನಾಡ ಯುವ ವೇದಿಕೆಯ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್, ಅಖಿಲ ಕರ್ನಾಟಕ ಕಾರ್ಮಿಕ ಪ್ರಜಾ ವೇದಿಕೆಯ ರಾಜ್ಯಾಧ್ಯಕ್ಷ ಮೀಸೆ ಸತೀಶ್, ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಸವರಾಜು, ಮುಖಂಡರುಗಳಾದ ಸಿದ್ದರಾಮಣ್ಣ ಜಿ ಬಿ, ಶಿವಕುಮಾರ್, ಗ್ರಾಮೀಣ ಕಲಾವಿದರ ವೇದಿಕೆಯ ಜಿಲ್ಲಾಧ್ಯಕ್ಷರಾದ ಪರಮಯ್ಯ ಜಿ ಟಿ, ಚಿತ್ರ ಲಿಂಗೇಶ್ವರ ಕಲಾವಿದರ ಸಂಘದ ಜಿಲ್ಲಾಧ್ಯಕ್ಷರಾದ ಲಕ್ಷ್ಮಮ್ಮ ಉಪಸ್ಥಿತರಿದ್ದರು.