ಸಾರಾಂಶ
ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕ್ಯಾನ್ಸರ್ ಬಂದಿರುವುದು ಕೆಲವು ಕುರುಹುಗಳಿಂದ ಗೊತ್ತಾಗುತ್ತದೆ. ನಿರ್ಲಕ್ಷ್ಯಮಾಡದೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಮೊದಲ ಹಂತದಲ್ಲೇ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗಲು ಸಾಧ್ಯವಿದೆ ಎಂದು ಶಿವಮೊಗ್ಗ ನಂಜಪ್ಪ ಲೈಫ್ ಕೇರ್ ಮೆಡಿಕಲ್‌ನ ಆಂಕೋಲಜಿಸ್ಟ್ ಡಾ. ಆರ್. ಅರವಿಂದನ್ ಸಲಹೆ ನೀಡಿದರು.ನಗರಸಭಾ ಸಭಾಂಗಣದಲ್ಲಿ ನಂಜಪ್ಪ ಲೈಫ್ ಕೇರ್ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ನಗರಸಭೆ ಸಿಬ್ಬಂದಿಗಳಿಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಈ ರೋಗದ ಸಣ್ಣಪುಟ್ಟ ಸಂಕೇತಗಳು ದೇಹದಲ್ಲಿ ಕಾಣಿಸಿಕೊಂಡಾಕ್ಷಣ ಕೂಡಲೇ ವೈದ್ಯರ ಬಳಿ ತೆರಳಿ ಪರೀಕ್ಷಿಸಿಕೊಂಡು ಚಿಕಿತ್ಸೆಪಡೆದುಕೊಳ್ಳಬೇಕು. 2-3 ಹಂತಕ್ಕೆ ಬಂದರೆ ಗುಣಪಡಿಸುವುದು ಕಷ್ಟವೆಂದು ಕಿವಿಮಾತು ಹೇಳಿದರು.ಪ್ರಪಂಚದಲ್ಲಿ ಮುಂದಿನ ವರ್ಷಕ್ಕೆ 2.2 ಕೋಟಿ ಜನರಿಗೆ ರೋಗವು ಕಾಣಿಸಿಕೊಳ್ಳುತ್ತಿದ್ದು, ಒಂದು ಕೋಟಿ ಜನರು ಸಾವಪ್ಪುವ ಸಾಧ್ಯತೆಗಳಿವೆ. ಭಾರತದಲ್ಲಿ 2022 ಕ್ಕೆ 15 ಲಕ್ಷ ಕ್ಯಾನ್ಸರ್ ರೋಗಿಗಳಿದ್ದು, 9 ಲಕ್ಷ ಜನರು ಸಾವಪ್ಪಿದ್ದಾರೆ. ಶೇ. 30 - 40 ರಷ್ಟು ಜನರಲ್ಲಿ ರೋಗವನ್ನು ಗುಣಪಡಿಸಬಹುದಾಗಿದೆ. ಕೆಲವರಿಗೆ ಅನುವಂಶಿಯವಾಗಿ ಈ ರೋಗ ಬಂದರೆ ಕೆಲವು ಸಲ ದುರಾಭ್ಯಾಸಗಳಿಂದ, ನಾವು ಸೇವಿಸುವ ಆಹಾರಗಳಿಂದಲೂ ಬರುತ್ತದೆ ಎಂದು ತಿಳಿಸಿದರು.ತಂಬಾಕು ಸೇವನೆ ಅಂದರೆ ನಿಕೋಟಿನ್ ಅಂಶದಿಂದ ಬಾಯಿ, ಅನ್ನನಾಳ, ಶ್ವಾಸಕೋಶ, ಮೂತ್ರ ಚೀಲ, ಕಿಡ್ನಿಗೆ ಕ್ಯಾನ್ಸರ್ ಬರುತ್ತದೆ. 100ರಲ್ಲಿ 25 ರಿಂದ 30 ರಷ್ಟು ಜನರಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಬರುತ್ತದೆ. ಸ್ತನದಲ್ಲಿ ಗಂಟುಗಳು ಉಂಟಾಗುತ್ತದೆ. ಇವು ಸಾಮಾನ್ಯವೆಂದು ಬಿಟ್ಟುಕೊಳ್ಳಬಾರದು. ಮಹಿಳೆಯರು ಒಮ್ಮೆಲೆ 10 ಕೆ.ಜಿ. ತೂಕ ಕಡಿಮೆಯಾಗುವುದು, ಹೊಟ್ಟೆ ಬರುವುದು, ನಿರಂತರ ರಕ್ತ ಶ್ರಾವವಾಗುತ್ತಿದ್ದರೆ ಕೂಡಲೇ ವೈದ್ಯರ ಬಳಿ ತೆರಳಿ ಪರೀಕ್ಷೆಗೆ ಒಳಪಡಿಸಿಕೊಳ್ಳುವುದು ಸೂಕ್ತವೆಂದರು.ಬಾಯಿಯಲ್ಲಿ ಗುಳ್ಳೆಯಂತೆ ಮೂಡುತ್ತದೆ. ಕೆಲವು ವೇಳೆ ದೇಹದಲ್ಲಿ ಅಧಿಕ ಉಷ್ಣಾಂಶವಿದ್ದರೆ ಗುಳ್ಳೆಗಳು ಬರುತ್ತವೆ. ಬಳಿಕ ವಾಸಿಯಾಗುತ್ತದೆ. ಒಂದು ವೇಳೆ ವಾಸಿಯಾಗುವ ಲಕ್ಷಣ ಕಂಡುಬರದಿದ್ದರೆ ಬಾಯಿ ಕ್ಯಾನ್ಸರ್ ಇರುತ್ತದೆ. ಯಾವುದಕ್ಕೂ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.ಕ್ಯಾನ್ಸರ್ ಇರುವವರು ಬಂದರೆ ಮೊದಲು ಸ್ಕ್ಯಾನ್ ಮಾಡುತ್ತೇವೆ. ಖಾಯಿಲೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಂಡು ಚಿಕಿತ್ಸೆ ನೀಡಲು ಮುಂದಾಗುತ್ತೇವೆ. ಒಂದು ವೇಳೆ ಸರ್ಜರಿ, ಕಿಮೋಥೆರಪಿ, ರೇಡಿಯೇಷನ್ ಮಾಡಬೇಕಾಗುತ್ತದೆ ಎಂದು ಡಾ. ವೈದ್ಯ ಅರವಿಂದನ್ ಹೇಳಿದರು.ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಕ್ಯಾನ್ಸರ್ ಮಹಾಮಾರಿ ಇದ್ದಂತೆ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗದು. ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಆರೋಗ್ಯ ತಪಾಸಣೆಗೆ ಮುಂದಾಗಬೇಕು. ನಗರಸಭೆ ಸಿಬ್ಬಂದಿಯವರಿಗೆ ಲೈಪ್ ಇನ್ಸ್ಯೂರೆನ್ಸ್ ಮಾಡಿಸಲಾಗಿದೆ. 5 ಲಕ್ಷದವರೆಗೆ ಚಿಕಿತ್ಸೆ ವೆಚ್ಚ ದೊರೆಯಲಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಸಿಬ್ಬಂದಿಗಳಾದ ಲತಾ, ರಮೇಶ್ ನಾಯ್ಡು ಹಾಗೂ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.ಪೋಟೋ ಫೈಲ್ ನೇಮ್ 27 ಕೆಸಿಕೆಎಂ 3ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಚಿಕ್ಕಮಗಳೂರಿನ ನಗರಸಭೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಹಾಗೂ ಕ್ಯಾನ್ಸರ್ ಜಾಗೃತಿ ಶಿಬಿರವನ್ನು ನಂಜಪ್ಪ ಆಸ್ಪತ್ರೆಯ ಅಂಕೋಲಾಜಿಸ್ಟ್ ಡಾ. ಆರ್. ಅರವಿಂದನ್ ಅವರು ಉದ್ಘಾಟಿಸಿದರು. ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದರು.