ಮತದಾನ ಜಾಗೃತಿಗೆ ಕ್ಯಾಂಡಲ್ ಮಾರ್ಚ್‌

| Published : Mar 30 2024, 12:45 AM IST

ಸಾರಾಂಶ

ಅಥಣಿ ತಾಲೂಕು ಆಡಳಿತ, ತಾಪಂ. ತಾಲೂಕು ಸ್ವೀಪ್ ಸಮಿತಿ ಅಥಣಿ ಹಾಗೂ ಪುರಸಭೆ ಕಾರ್ಯಾಲಯ ಅಥಣಿ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಜಾಥಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಅಥಣಿಮತದಾನದಿಂದ ಯಾರೂ ಸಹ ದೂರ ಉಳಿಯಬಾರದು. ಮತದಾನ ನಮ್ಮೆಲ್ಲರ ಹಕ್ಕು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಶಿವಾನಂದ ಕಲ್ಲಾಪುರ ಹೇಳಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಬೆಳಗಾವಿ. ತಾಲೂಕು ಆಡಳಿತ. ತಾಪಂ. ತಾಲೂಕು ಸ್ವೀಪ್ ಸಮಿತಿ ಅಥಣಿ ಹಾಗೂ ಪುರಸಭೆ ಕಾರ್ಯಾಲಯ ಅಥಣಿ ಇವುಗಳ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಈ ಬಾರಿ ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವ ಬಲಗೊಳಿಸುವ ಶಕ್ತಿ ಮತದಾರರಿಗಿದೆ. ಎಲ್ಲ ಮತದಾರರು ಸಂವಿಧಾನ ಕೊಟ್ಟಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವ ಮೂಲಕ ಸುಭದ್ರವಾದ ದೇಶ ಕಟ್ಟಲು ಸಹಕರಿಸಿ ಎಂದು ಮನವಿ ಮಾಡಿದರು.ಕ್ಯಾಂಡಲ್‌ ಹಿಡಿದು ನಡೆಸಿದ ಜಾಥಾ ಪುರಸಭೆಯಿಂದ ಪ್ರಾರಂಭವಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು ಜಾಥಾದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು. ಸಿಬ್ಬಂದಿ. ಅಂಗನವಾಡಿ ಕಾರ್ಯಕರ್ತೆಯರು. ಪೌರ ಕಾರ್ಮಿಕರು ಸೇರಿ ಕಡ್ಡಾಯ ಮತದಾನ ಭಿತ್ತಿಪತ್ರ ಪ್ರದರ್ಶಿಸಿದರು.

ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ತಾಪಂ ಇಒ ಶಿವಾನಂದ ಕಲ್ಲಾಪುರ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಈ ವೇಳೆ ಗ್ರೇಡ್ 2 ತಹಸೀಲ್ದಾರ್‌ ಬಿ.ವೈ. ಹೊಸಕೇರಿ. ಜಿಪಂ ಅಭಿಯಂತರ ವೀರಣ್ಣ ವಾಲಿ. ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ್. ತಾಲೂಕು ಆರೋಗ್ಯಾಧಿಕಾರಿ ಡಾ.ಬಸಗೌಡ ಕಾಗೆ. ಸಿಡಿಪಿಒ ರೇಣುಕಾ ಹೊಸಮನಿ. ಪಶು ವೈದ್ಯಾಧಿಕಾರಿ ಡಿ.ಜೆ. ಕಾಂಬಳೆ, ಪೌರಕಾರ್ಮಿಕ ಸಂಘದ ಅಧ್ಯಕ್ಷ ಬಸವರಾಜ ಕಾಂಬಳೆ ಇತರರು ಉಪಸ್ಥಿತರಿದ್ದರು.