ತಾಲೂಕು ಪಂಚಾಯತಿ ಕಚೇರಿಗೆ ಭೇಟಿ ನೀಡಿದ ಸಿಎಒ

| Published : Sep 06 2024, 01:07 AM IST

ತಾಲೂಕು ಪಂಚಾಯತಿ ಕಚೇರಿಗೆ ಭೇಟಿ ನೀಡಿದ ಸಿಎಒ
Share this Article
  • FB
  • TW
  • Linkdin
  • Email

ಸಾರಾಂಶ

ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡುಗುಂಟಿ ಹಾಗೂ ಜಿಪಂ ಸಿಬ್ಬಂದಿ ಶಶಿಕಾಂತ ನೇಸರಗಿ ಹಾಗೂ ಸುವರ್ಣ ಮಹೇಂದ್ರಕರ ನಗರದ ತಾಪಂ ಕಚೇರಿಗೆ ಭೇಟಿ ನೀಡಿ ಕಡತಗಳ ಹಾಗೂ ಲೆಕ್ಕಪತ್ರ ದಾಖಲೆಗಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡುಗುಂಟಿ ಹಾಗೂ ಜಿಪಂ ಸಿಬ್ಬಂದಿ ಶಶಿಕಾಂತ ನೇಸರಗಿ ಹಾಗೂ ಸುವರ್ಣ ಮಹೇಂದ್ರಕರ ನಗರದ ತಾಪಂ ಕಚೇರಿಗೆ ಭೇಟಿ ನೀಡಿ ಕಡತಗಳ ಹಾಗೂ ಲೆಕ್ಕಪತ್ರ ದಾಖಲೆಗಳ ಪರಿಶೀಲನೆ ನಡೆಸಿದರು.

ತಾಲೂಕಿನ ಕುಂದರಗಿ ತವಗ ಹಾಗೂ ಕೊಣ್ಣೂರು ಗ್ರಾಮೀಣ ಗ್ರಾಪಂಗೆ ಭೇಟಿ ನೀಡಿ ಲೆಕ್ಕಪತ್ರ ಕಡತಗಳ ಹಾಗೂ ನರೇಗಾ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡಿ ಕಡತಗಳು ಸರಿಯಾಗಿ ನಿರ್ವಹಣೆ ಮಾಡದ ಕುಂದರಗಿ ಗ್ರಾಪಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಕನಸಿಗೇರಿ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಬಿಸಿಯೂಟ ಬಗ್ಗೆ ವಿಚಾರಿಸಿದರು. ಗೊಡಚಿನಮಲ್ಕಿ ಸರ್ಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಬಗ್ಗೆ ನೋಡಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗಸ್ತಿ, ಸಿಬ್ಬಂದಿ ಲಕ್ಷ್ಮೀ ಭಂಡಾರಿ ಇತರರು ಇದ್ದರು.