ಸಾರಾಂಶ
ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ಬದಿಯಲ್ಲಿರುವ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಪಟ್ಟಣದಿಂದ ಇಂಗಳೇಶ್ವರ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಡಾ.ಗುಬ್ಬಾ ಜಮೀನು ಹತ್ತಿರ ಸೋಮವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವೇಗವಾಗಿ ಚಲಿಸುತ್ತಿದ್ದ ಕಾರೊಂದು ರಸ್ತೆ ಬದಿಯಲ್ಲಿರುವ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಪಟ್ಟಣದಿಂದ ಇಂಗಳೇಶ್ವರ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಡಾ.ಗುಬ್ಬಾ ಜಮೀನು ಹತ್ತಿರ ಸೋಮವಾರ ರಾತ್ರಿ ನಡೆದಿದೆ.ಇಂಗಳೇಶ್ವರ ಗ್ರಾಮದ ಪ್ರಶಾಂತ ಮಹಾದೇವಪ್ಪ ಮಿಣಜಗಿ (೨೮), ಮಲ್ಲಿಕಾರ್ಜುನ ಮಾಳಪ್ಪ ಡೋಳಗೊಂಡ (೩೦) ಮೃತ ವ್ಯಕ್ತಿಗಳು. ಇದೇ ಗ್ರಾಮದ ವಿಜಯಕುಮಾರ ಮಲಪ್ಪ ದಳವಾಯಿ, ಮಾಳಪ್ಪ ಲಗಮಣ್ಣ ತೆಲಗಿ, ರೇವಣಸಿದ್ದಪ್ಪ ಭೀಮರಾಯ ಶೇಖಣ್ಣಿ ಗಾಯಗೊಂಡಿದ್ದು, ವಿಜಯಪುರದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೋಮವಾರ ರಾತ್ರಿ ಬಸವನಬಾಗೇವಾಡಿಯಿಂದ ಇಂಗಳೇಶ್ವರ ಗ್ರಾಮದ ಕಡೆಗೆ ಕಾರಿನಲ್ಲಿ ಐವರು ಪ್ರಯಾಣಿಸುತ್ತಿರುವಾಗ ಅವಘಡ ಸಂಭವಿಸಿದೆ. ಪರಿಣಾಮ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ವಿಜಯ ಮುರಗೊಂಡ ಭೇಟಿ ನೀಡಿ ಪರಿಶೀಲಿಸಿದರು.
;Resize=(128,128))
;Resize=(128,128))
;Resize=(128,128))