ಸಾರಾಂಶ
ಹಾನಗಲ್ಲ ತಾಲೂಕಿನ ತಿಳವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿರಸಿಯ ರೋಟರಿ ಚಾರಿಟೆಬಲ್ ಆಸ್ಪತ್ರೆ ಹಾಗೂ ಟೀಂ ಆಪತ್ಬಾಂಧವ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ೩೨೦ ಜನರನ್ನು ತಪಾಸಣೆಗೆ ಒಳಪಡಿಸಿ ಈ ಪೈಕಿ ೧೫೦ ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಭಗವಂತ ನೀಡಿದ ಕಣ್ಣುಗಳನ್ನು ಪ್ರತಿಯೊಬ್ಬರೂ ಸಂರಕ್ಷಣೆ ಮಾಡಿಕೊಳ್ಳುವ ಅಗತ್ಯವಿದ್ದು, ಕಣ್ಣುಗಳ ಸಂರಕ್ಷಣೆ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ನೇತ್ರಾಧಿಕಾರಿ ಬಿ.ಎಂ. ಮಂಜುನಾಥಗೌಡ ಹೇಳಿದರು.
ಹಾನಗಲ್ಲ: ಭಗವಂತ ನೀಡಿದ ಕಣ್ಣುಗಳನ್ನು ಪ್ರತಿಯೊಬ್ಬರೂ ಸಂರಕ್ಷಣೆ ಮಾಡಿಕೊಳ್ಳುವ ಅಗತ್ಯವಿದ್ದು, ಕಣ್ಣುಗಳ ಸಂರಕ್ಷಣೆ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ನೇತ್ರಾಧಿಕಾರಿ ಬಿ.ಎಂ. ಮಂಜುನಾಥಗೌಡ ಹೇಳಿದರು.
ತಾಲೂಕಿನ ತಿಳವಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿರಸಿಯ ರೋಟರಿ ಚಾರಿಟೆಬಲ್ ಆಸ್ಪತ್ರೆ ಹಾಗೂ ಟೀಂ ಆಪತ್ಬಾಂಧವ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರು ಪ್ರಪಂಚ ನೋಡುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಬಹಳ ಜನ ತಮ್ಮ ನಿರ್ಲಕ್ಷ್ಯದಿಂದ ದೃಷ್ಟಿ ಕಳೆದುಕೊಳ್ಳುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ ಮಾತನಾಡಿ, ಹಾನಗಲ್ ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ಮಾರ್ಗದರ್ಶನ ಮತ್ತು ಟೀಂ ಆಪತ್ಬಾಂಧವ ಆಶ್ರಯದಲ್ಲಿ ನಿರಂತರವಾಗಿ ಜನೋಪಯೋಗಿ ಕಾರ್ಯಕ್ರಮ ನಡೆಸಲಾಗುತ್ತಿದೆ. ರಕ್ತದಾನ ಶಿಬಿರಗಳನ್ನೂ ನಿಯಮಿತವಾಗಿ ನಡೆಸಿ ರಕ್ತದ ಕೊರತೆ ನೀಗಿಸಲಾಗುತ್ತಿದೆ. ಇದುವರೆಗೂ ನಡೆದ ನೇತ್ರ ತಪಾಸಣೆ ಶಿಬಿರದಲ್ಲಿ ಸಾವಿರಾರು ಜನರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇದರಿಂದ ದೂರದ ನಗರ ಪ್ರದೇಶಗಳಿಗೆ ಸಾವಿರಾರು ರು. ವ್ಯಯ ಮಾಡಿ ಅಲೆಯುವುದು ತಪ್ಪಿದಂತಾಗಿದೆ ಎಂದರು.
ನೇತ್ರ ತಜ್ಞ ಡಾ. ಎ.ಜಿ. ವಸ್ತ್ರದ, ಶಿಬಿರದ ಸಂಯೋಜಕ ಗಿರೀಶ ದಾರೇರ, ಗ್ರಾಪಂ ಅಧ್ಯಕ್ಷೆ ಅಫ್ರೋಜಾ ಕನವಳ್ಳಿ, ಸದಸ್ಯರಾದ ಲಕ್ಷ್ಮೀಬಾಯಿ ಪಾಟೀಲ, ಪ್ರೇಮಾ ನಿಟ್ಟೂರ, ನಾಗರತ್ನಾ ಚನ್ನಾಪುರ, ರೇಖಾ ಕುರುಬರ, ಗಿರಿಜಮ್ಮ ತಿಳವಳ್ಳಿ, ಡಾ. ರೆಹೆನಾ, ಮುಖಂಡರಾದ ಫಯಾಜ್‌ಅಹ್ಮದ್ ಲೋಹಾರ, ಸುರೇಶ ನಾಗಣ್ಣನವರ, ರಾಮಚಂದ್ರ ಕಲ್ಲೇರ, ರಾಜೂ ಶೇಷಗಿರಿ, ವಾಸೀಂ ಪಠಾಣ, ಬಸವರಾಜ ಚವ್ಹಾಣ, ಸಮ್ಮದ ಮೂಡಿ, ಶಾಂತಪ್ಪ ಬಡಣ್ಣನವರ ಉಪಸ್ಥಿತರಿದ್ದರು. ಶಿಬಿರದಲ್ಲಿ ೩೨೦ ಜನರನ್ನು ತಪಾಸಣೆಗೆ ಒಳಪಡಿಸಿ ಈ ಪೈಕಿ ೧೫೦ ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.