ಸಾರಾಂಶ
ದೇವದುರ್ಗ ತಾಲೂಕಿನ ಆಲ್ಕೋಡ ಗ್ರಾಮದ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಸಾಂಬರ್ನಲ್ಲಿ ವಿಷಯ ಬೆರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ದೇವದುರ್ಗ: ತಾಲೂಕಿನ ಆಲ್ಕೋಡ ಗ್ರಾಮದ ಕಸ್ತೂರಿ ಬಾ ವಸತಿ ಶಾಲೆಯಲ್ಲಿ ಸಾಂಬರ್ನಲ್ಲಿ ವಿಷಯ ಬೆರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ಕರೆಮ್ಮ ಜಿ.ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ಸಾಂಬರ್ ಬಣ್ಣ ಬೇರೆಯಾಗಿದ್ದರಿಂದ ಅನುಮಾನಗೊಂಡ ಅಡುಗೆ ಸಹಾಯಕಿ ವಿಜಯಲಕ್ಷ್ಮಿ ಶಂಕಾಸ್ಪದ ಸಾಂಬರ್ ಸೇವಿಸಿ ಆ.14ರಂದು ಅಸ್ವಸ್ತಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನಾ ಮಾಹಿತಿ ತಿಳಿದ ಬಳಿಕ,ಶಾಸಕಿ ಕರೆಮ್ಮ ಜಿ.ನಾಯಕ ಅಧಿಕಾರಿಗಳನ್ನು, ಮುಖ್ಯಗುರುಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ರಜೆ ನೀಡದೇ ಗೈರು ಹಾಜರಿ ಇರುವದರ ಜೊತೆಗೆ ವಸತಿ ಶಾಲೆಗೆ ಸರಿಯಾಗಿ ಬಾರದ ಮುಖ್ಯಗುರು ಸುರೇಖಾ ಪಾಟೀಲ್ ಹಾಗೂ ವಿಷ ಬೆರಿಸಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ರ ಕ್ರಮಕೈಗೊಳ್ಳುವಂತೆ ಬಿಇಒ ಹೆಚ್.ಸುಖದೇವ ಹಾಗೂ ಸಿಪಿಐ ವೈ.ಎನ್.ಗುಂಡುರಾವ್ರಿಗೆ ಸೂಚಿಸಿ,ವರ್ಗವಾರು ಕೋಣೆಗೆ ಭೇಟಿ ನೀಡಿ,ವಿದ್ಯಾರ್ಥಿನಿಯರೊಂದಿಗೆ ಶಾಸಕಿ ಚರ್ಚಿಸಿದರು.
ಶಾಲಾ ಆವರಣದಲ್ಲಿ ಮೇಲಧಿಕಾರಿಗಳ ಪರವಾನಿಗೆ ಇಲ್ಲದೇ,ದೇವಸ್ಥಾನ ನಿರ್ಮಾಣ ಮಾಡಿದ್ದು,ಶಾಸಕಿ ಇದೇ ಸಂದರ್ಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು,ಇಂಥ ಅವಾಂತರಗಳು ಮರುಕಳಿಸದಂತೆ ನಿಗಾ ವಹಿಸಲು ಸೂಚಿಸಿದರು.ಶಂಕಾಸ್ಪದ ಸಾಂಬರ್ ಪದಾರ್ಥವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು,ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ತಾತ್ಕಾಲಿಕವಾಗಿ ಪಕ್ಕದ ವಸತಿ ನಿಲಯದಿಂದ ಊಟ ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ,ತಾಪಂ ಇಒ ಬಸವರಾಜ ಹಟ್ಟಿ, ಗ್ರಾಪಂ ಅಧ್ಯಕ್ಷ ಮಹೇಶ ನಾಯಕ,ಜಾಲಹಳ್ಳಿ ಪಿಎಸ್ಐ ವೈಶಾಲಿ ಝಳಕಿ ,ಮುಖಂಡರಾದ ಗೋವಿಂದರಾಜ ನಾಯಕ,ಇಸಾಕ ಸಾಬ್ ಹಾಗೂ ಗ್ರಾಮಸ್ತರು,ಪಾಲಕರು ಇದ್ದರು.