ಬಾವಿಗೆ ಬಿದ್ದ ಬೆಕ್ಕು: ರಕ್ಷಣೆಗೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೇಲೆ ದಾಳಿ

| Published : Jan 29 2025, 01:33 AM IST

ಬಾವಿಗೆ ಬಿದ್ದ ಬೆಕ್ಕು: ರಕ್ಷಣೆಗೆ ಬಂದ ಅಗ್ನಿಶಾಮಕ ಸಿಬ್ಬಂದಿ ಮೇಲೆ ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನ ಹಿಡಿಯಲು ಪ್ರಯತ್ನಿಸಿದಾಗ ಏಕಾಏಕಿ ಅಗ್ನಿಶಾಮಕದಳದ ಇಬ್ಬರ ಮೇಲೆ ಎರಗಿ ಗಂಭೀರ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ. ಸರಿ ಸುಮಾರು ಏಳು ನಿಮಿಷಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿಯ ಕೈಯನ್ನು ಬೆಕ್ಕು ಕಚ್ಚಿ ಹಿಡಿದಿತ್ತು. ಇದರಿಂದಾಗಿ ಬಾವಿಯೊಳಗಡೆ ಅಗ್ನಿಶಾಮಕ ದಳದ ಸಿಬ್ಬಂದಿ ಪರದಾಡುವಂತಾಯಿತು.

ಪುತ್ತೂರು: ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಯ ಮೇಲೆ ಬೆಕ್ಕೊಂದು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿರುವ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ.

ಅಗ್ನಿಶಾಮಕ ದಳದ ಸಿದ್ದರೂಢ ಮತ್ತು ಮೌನೇಶ್ ಎಂಬವರ ಕೈ ಬೆರಳಿಗೆ ಗಾಯಗಳಾಗಿವೆ. ಸೋಮವಾರ ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕು ಬಿದ್ದಿತ್ತು. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಮಂಗಳಾವರ ಬೆಕ್ಕಿನ ರಕ್ಷಣೆಗೆ ಬಂದಿದ್ದರು. ಬೆಕ್ಕನ್ನ ಹಿಡಿಯಲು ಬಾವಿಯೊಳಗಡೆ ಸಿದ್ದರೂಢ ಮತ್ತು ಮೌನೇಶ್ ಎಂಬವರು ಇಳಿದಿದ್ದರು. ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನ ಹಿಡಿಯಲು ಪ್ರಯತ್ನಿಸಿದಾಗ ಏಕಾಏಕಿ ಅಗ್ನಿಶಾಮಕದಳದ ಇಬ್ಬರ ಮೇಲೆ ಎರಗಿ ಗಂಭೀರ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ. ಸರಿ ಸುಮಾರು ಏಳು ನಿಮಿಷಗಳ ಕಾಲ ಅಗ್ನಿಶಾಮಕ ದಳದ ಸಿಬ್ಬಂದಿಯ ಕೈಯನ್ನು ಬೆಕ್ಕು ಕಚ್ಚಿ ಹಿಡಿದಿತ್ತು. ಇದರಿಂದಾಗಿ ಬಾವಿಯೊಳಗಡೆ ಅಗ್ನಿಶಾಮಕ ದಳದ ಸಿಬ್ಬಂದಿ ಪರದಾಡುವಂತಾಯಿತು. ಗಾಯಾಳುಗಳು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿ ನಡೆಸಿದರೂ ಬೆಕನ್ನು ರಕ್ಷಿಸಿ ಬಾವಿಯಿಂದ ಮೇಲೆ ತರಲಾಯಿತು.