ಸಾರಾಂಶ
ಹಾವೇರಿ: ಜಿಲ್ಲಾದ್ಯಂತ ಮುಸಲ್ಮಾನರು ಈದ್ ಮಿಲಾದ್ ಹಬ್ಬವನ್ನು ಶುಕ್ರವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಮುಸಲ್ಮಾನರು ನಗರದ ಸುಭಾಸ್ ಸರ್ಕಲ್, ಮುಲ್ಲಾನಕೆರಿ, ಮೆಹಬೂಬ ಸೋಬಾನಿ ದರ್ಗಾ, ದಾವಲ್ ಮಲ್ಲಿಕ್ ದರ್ಗಾ, ಬೊರೆಶಾವಲ್ಲಿ ದರ್ಗಾ, ಸೂಲಮಟ್ಟಿ ಸೇರಿದಂತೆ ಸ್ಮಶಾನ ದರ್ಗಾಗಳಲ್ಲಿ ಹಾಗೂ ಮಸೀದಿ ಮೊಹಲ್ಲಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಬಳಿಕ ದರ್ಗಾ ಮತ್ತು ಮಸೀದಿಗಳಲ್ಲಿ ನೆರೆದಿದ್ದ ಮುಸಲ್ಮಾನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಎಲ್ಲ ಮಸೀದಿಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದ್ದು, ಈದ್ ಮಿಲಾದ್ ಸಂಭ್ರಮ ಇಮ್ಮಡಿಗೊಳಿಸಿತ್ತು. ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಸೇರಿದಂತೆ ಹಲವು ಮುಖಂಡರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮೆರವಣಿಗೆ ಸಂದರ್ಭದಲ್ಲಿ ಭೇಟಿ ನೀಡಿ ಮುಸಲ್ಮಾನರಿಗೆ ಈದ್ ಮಿಲಾದ ಹಬ್ಬದ ಶುಭಾಶಯಗಳನ್ನು ಕೋರಿದರು.ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಇರ್ಫಾನ್‌ಖಾನ್ ಪಠಾಣ್, ಚಮನ್‌ಶರೀಫ್ ಮುಲ್ಲಾ, ಬಾಬುಸಾಬ್ ಮೋಮಿನಗಾರ, ಖಲೀಲ್‌ಸಾಬ್ ಪಟವೇಗಾರ, ಮೋಸಿನ್ ಮುಲ್ಲಾ, ಅಲ್ತಾಫ್ ಬೋರಗಲ್, ಇಕ್ಬಾಲ್ ಶಿಡಗನಾಳ, ರಿಯಾಜ್‌ಅಹ್ಮದ್ ಶಿಡಗನಾಳ, ಅಮೀರಜಾನ್ ಬೇಪಾರಿ, ಶಾಹೀದ ದೇವಿಹೊಸೂರ, ಪೀರಸಾಬ್ ಚೋಪದಾರ, ಅಬ್ದುಲ್‌ರಜಾಕ ಜಮಾದಾರ, ಜಮೀರ್ ಜಿಗರಿ, ಎಸ್.ಎಸ್. ಖಾಜಿ, ಅಲ್ಲಾಭಕ್ಷ ತಿಮ್ಮಾಪೂರ, ನಜೀರ್ ನದಾಫ, ಸೈಯ್ಯದ್‌ಅನ್ವರ್ ಕೊಟ್ಟಿಗೇರಿ, ರಾಜೇಸಾಬ್ ಮೊಮಿನಗಾರ, ದಾದಾಪೀರ ಚೂಡಿಗಾರ, ಐಸ್ಪಾಕ ಕೋಳೂರ, ಇಮ್ತಿಯಾಜ್ ತಿಮ್ಮಾಪುರ, ಸುಭಾನಿ ಚೂಡಿಗಾರ, ನಾಸೀರಖಾನ್ ಪಠಾಣ, ನೂರಅಹ್ಮದ್ ಕರ್ಜಗಿ ಸೇರಿದಂತೆ ಅಂಜುಮನ್ ಪದಾಧಿಕಾರಿಗಳು, ಎಲ್ಲ ಮಸೀದಿಯ ಮುತ್ತೋಲಿಗಳು, ಮೌಲಾನಾಗಳು ಮತ್ತಿತರರು ಪಾಲ್ಗೊಂಡಿದ್ದರು.ಮೆಕ್ಕಾ ಮದೀನಾ ಮೆರವಣಿಗೆ...ಈದ್ ಮಿಲಾದ್ ಆಚರಣೆ ನಿಮಿತ್ತ ಮೆಕ್ಕಾ ಮತ್ತು ಮದೀನಾ ಸ್ಥಳಗಳ ಐತಿಹ್ಯ ಸಾರುವ ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆ ಶುಕ್ರವಾರ ಮಧ್ಯಾಹ್ನ ನಡೆಯಿತು.
ಮೌಲಾನಾ ರಫೀಕ್ ಮುಲ್ಲಾ ಪೈಗಂಬರ್ ಕುರಿತಾದ ಭಾವಗೀತೆ ಹೇಳುತ್ತಾ ಮೆರವಣಿಗೆ ನಡೆಸಿದರು. ನಗರದ ಪಿ.ಬಿ. ರಸ್ತೆಯಲ್ಲಿರುವ ಮೆಹಬೂಬ್ ಸುಬಾನಿ ದರ್ಗಾದಿಂದ ಆರಂಭವಾದ ಮೆರವಣಿಗೆ ಮಣಿಯಾರ ಓಣಿ, ನಗರಸಭೆ ಮುಂಭಾಗ, ಎಂಜಿ ವೃತ್ತ, ಜೆಪಿ ವೃತ್ತ, ಜೆಎಚ್ ಪಟೇಲ್ ವೃತ್ತ ಮಾರ್ಗವಾಗಿ ಸಂಚರಿಸಿ ಖಬರಸ್ಥಾನ್‌ದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪುನಃ ಸುಭಾಷ್ ಸರ್ಕಲ್, ಅಂಬೇಡ್ಕರ್ ವೃತ್ತ, ಪುರದ ಓಣಿ, ಎಂಜಿ ರೋಡ್, ಜೈನ್ ಬಸದಿ ಬಳಿ ಸಾಗಿ ಮೆಹಬೂಬ್ ಸುಬಾನಿ ದರ್ಗಾವನ್ನು ತಲುಪಿ ಸಂಪನ್ನಗೊಂಡಿತು.