ಒಗ್ಗಟ್ಟಿನಿಂದ ಹಬ್ಬ ಆಚರಿಸಿ

| Published : Aug 30 2024, 02:00 AM IST

ಸಾರಾಂಶ

ದೇಶದಲ್ಲಿ ಹತ್ತಾರು ಭಾಷೆ, ಜಾತಿಗಳಿದ್ದರೂ ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಹಾಗೆಯೇ ನಾವು ಆಚರಿಸುವ ಹಬ್ಬಗಳನ್ನು ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸಿ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕೆಂದು ಬನಹಟ್ಟಿ ಸಿಪಿಐ ಸಂಜೀವ ಬಳಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ದೇಶದಲ್ಲಿ ಹತ್ತಾರು ಭಾಷೆ, ಜಾತಿಗಳಿದ್ದರೂ ನಾವೆಲ್ಲರೂ ಭಾರತೀಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಹಾಗೆಯೇ ನಾವು ಆಚರಿಸುವ ಹಬ್ಬಗಳನ್ನು ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸಿ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕೆಂದು ಬನಹಟ್ಟಿ ಸಿಪಿಐ ಸಂಜೀವ ಬಳಗಾರ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆದ ಸೆ.೨ರಂದು ನಡೆಯುವ ಅಲ್ಲಮಪ್ರಭುದೇವರ ಜಾತ್ರಾ ಮಹೋತ್ಸವ ಹಾಗೂ ಸೆ.೭ರಿಂದ ಪ್ರಾರಂಭಗೊಳ್ಳುವ ಗಣೇಶ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಾತ್ರೆ ಹಾಗೂ ಕುಸ್ತಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು. ಅದರಂತೆ ಗಣೇಶ ಹಬ್ಬದ ವೇಳೆ ಯವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಆಚರಿಸುವಂತೆ ಸಲಹೆ ನೀಡಿದರು.

ಮುಖಂಡ ಪ್ರವೀಣ ನಾಡಗೌಡ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೆಂಡಾಲ್ ಹಾಕಬೇಕು. ನಿಯಮದಂತೆ ಪುರಸಭೆ, ಹೆಸ್ಕಾಂ ಹಾಗೂ ಪೊಲೀಸ್ ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕೆಂದು ಹೇಳಿದರು.

ಈ ವೇಳೆ ಕೇದಾರಿ ಪಾಟೀಲ, ಪ್ರಭು ಗಸ್ತಿ, ಪಾಟೀಲ, ಸಂಜು, ದಯಾನಂದ ಕಾಳೆ, ಭುಜಬಲಿ ಕೆಂಗಾಲಿ ಸಲಹೆ ಸೂಚನೆಗಳನ್ನು ನೀಡಿದರು. ಠಾಣಾಧಿಕಾರಿ ಅಪ್ಪಣ್ಣ ಐಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಕಬಾಡಗಿ, ಸಚಿನ ಕೊಡತೆ, ಸಂತೋಷ ಜಮಖಂಡಿ, ಸಿದ್ರಾಮ ಕಾಗಿ, ಮಾಸೂಂ ಇನಾಂದಾರ, ಅಲ್ಲಾಭಕ್ಷ ಅಲಾಸ, ಶಂಕರ ಕುಂಬಾರ, ಧನಪಾಲ ಬೋದೆನ್ನವರ, ದಸ್ತಗೀರ ತಾಂಬೊಳಿ, ತವನಪ್ಪ ಮಾಟ, ಸದಾಶಿವ ಗೋಡ್ಸೆ ಮತ್ತಿತರಿದ್ದರು.