ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ಇರುವ ಶ್ರೀಆಂಜನೇಯಸ್ವಾಮಿ ದೇವಾಲಯದಿಂದ ಗ್ರಾಮದವರೆಗೆ ಕಂಡಾಯ ಮತ್ತು ದೇವರ ಬಸವನನ್ನು ಮೆರವಣಿಗೆಯಲ್ಲಿ ತರಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಉತ್ಸವ ಜರುಗಿತು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಶ್ರೀಸಿದ್ದಪ್ಪಾಜಿ ದೇವರ ನಾಲ್ಕನೇ ವರ್ಷದ ಕಂಡಾಯ ಉತ್ಸವ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ಇರುವ ಶ್ರೀಆಂಜನೇಯಸ್ವಾಮಿ ದೇವಾಲಯದಿಂದ ಗ್ರಾಮದವರೆಗೆ ಕಂಡಾಯ ಮತ್ತು ದೇವರ ಬಸವನನ್ನು ಮೆರವಣಿಗೆಯಲ್ಲಿ ತರಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಉತ್ಸವ ಜರುಗಿತು. ಉತ್ಸವ ಸಾಗಿದ ಮಾರ್ಗದ ಉದ್ದಕ್ಕೂ ಭಕ್ತರು ಈಡುಗಾಯಿ ಸೇವೆ ಮತ್ತು ದೂಪ, ದೀಪದ ಸೇವೆ ಸಲ್ಲಿಸಿದರು. ಚರ್ಮವಾದ್ಯ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು.
ಕಂಡಾಯ ಮಹೋತ್ಸವದ ನಿಮಿತ್ತ ಸಿದ್ದಪ್ಪಾಜಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು. ಚಂದ್ರ ಮಂಡಲೋತ್ಸವ ಗಮನ ಸೆಳೆಯಿತು. ಸ್ಥಳೀಯರು ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ಸಿದ್ದಪ್ಪಾಜಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಸ್ವಾಮಿ, ಕಾರ್ಯದರ್ಶಿ ರವಿ, ಖಜಾಂಚಿ ಸುರೇಶ್, ಸಹ ಕಾರ್ಯದರ್ಶಿ ನಾಗರಾಜು, ವಿಶ್ವಕರ್ಮ ಕುಲದ ಮುಖಂಡ ರಾಮಾನುಜಾಚಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಪ್ರಕಾಶ್, ದೊಡ್ಡ ಯಜಮಾನ್ ಪ್ರಕಾಶಣ್ಣ, ಚಿಕ್ಕಯಜಮಾನ್ ನಾರಾಯಣಪ್ಪ, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಎನ್.ವಿ.ಚಲುವರಾಜು, ವೆಂಕಟೇಶ್, ಸೋಮಶೇಖರ್, ಮೇಳಾಪುರ ರಾಜು, ಶಂಕರ್ ಪೂಜಾ ಕೈಂಕರ್ಯಗಳಲ್ಲಿ ಬಾಗವಹಿಸಿದ್ದರು.
ಜನವರಿ 5 ರಿಂದ 10 ದಿನಗಳ ಕಾಲ ಚಲುವನಾರಾಯಣಸ್ವಾಮಿಗೆ ಕೊಠಾರೋತ್ಸವಮೇಲುಕೋಟೆ: ಚೆಲುವನಾರಾಯಣಸ್ವಾಮಿಯವರ ದೇವಾಲಯದಲ್ಲಿ ಜನವರಿ 5 ರಿಂದ 10 ದಿನಗಳ ಕಾಲ ಕೊಠಾರೋತ್ಸವ ಎಂದೇ ಕರೆಯುವ ಅಧ್ಯಯನೋತ್ಸವ ವೈಭವದಿಂದ ನೆರವೇರಲಿದೆ.
ವೈಷ್ಣವಪಂಥದಲ್ಲಿ ನಾರಾಯಣನ ಸಾಕ್ಷಾತ್ಕಾರ ಪಡೆದು ದೈವತ್ವಕ್ಕೇರಿದ 123 ಮಂದಿ ಆಳ್ವಾರುಗಳಿಗೆ ಧನುರ್ಮಾಸದ ವೇಳೆ ವಿಶೇಷ ಮಾಲೆ ಮರ್ಯಾದೆ ಸಮರ್ಪಿಸುವ ಹಾಗೂ ಅವರನ್ನು ನೆನೆಯುವ ಮಹೋತ್ಸವವಾಗಿದೆ.ಕೊಠಾರಮಂಟಪದಲ್ಲಿ ಪ್ರತಿಸಂಜೆ ಆಳ್ವಾರುಗಳು ಮತ್ತು ರಾಮಾನುಜಾರ್ಯರಿಗೆ ಮಾಲೆಮರ್ಯಾದೆ ನಡೆಯಲಿದೆ. ಸಂಗೀತ ರಾಮಾಯಣ, ಅರೆಯರ್‌ಪಾಟ್ಟು ಹಾಗೂ ದಿವ್ಯಪ್ರಬಂಧಪಾರಾಯಣದೊಂದಿಗೆ ಚೆಲುವನಾರಾಯಣನಿಗೆ ಉತ್ಸವಗಳು ಜರುಗಲಿವೆ.
ಇದಕ್ಕೂ ಮುನ್ನ 5 ರಿಂದ 14ರವರೆಗೆ ಪ್ರತಿದಿನ ಸಂಜೆ ರಾಜಬೀದಿಯಲ್ಲಿ ವಿವಿಧ ಕೈಂಕರ್ಯಪರರಿಂದ ಅನೂಚಾನ ಸಂಪ್ರದಾಯ ಹಾಗೂ ದೇವಾಲಯದ ಕೈಪಿಡಿಯಲ್ಲಿ ಉಲ್ಲೇಖವಾದಂತೆ ನೇಮಿಸೆವೆಯಾಗಿ ಚೆಲುವನಾರಾಯಣಸ್ವಾಮಿಗೆ ಪುಷ್ಪಕೈಂಕರ್ಯ ನಂತರ ದೇವಾಲಯದಲ್ಲಿ ಸೇವೆಗಳು ನಡೆಯಲಿದೆ.ಪ್ರತಿದಿನ ಚೆಲುವನಾರಾಯಣಸ್ವಾಮಿ ವೈವಿಧ್ಯಮಯ ಪುಷ್ಪಾಲಂಕಾರದೊಂದಿಗೆ ಕಂಗೊಳಿಸಲಿದ್ದು ಮೇಲುಕೋಟೆಯ ಪಾರಂಪರಿಕ ನೈವೇಧ್ಯಗಳು ಸ್ವಾಮಿಗೆ ಅರ್ಪಣೆಯಾಗುವುದು ಕೊಠಾರೋತ್ಸವದ ವಿಶೇಷವಾಗಿದೆ.
ಚೆಲುವನಾರಾಯಣಸ್ವಾಮಿ ಕೊಠಾರೋತ್ಸವವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾರ ಮಾರ್ಗದರ್ಶನದಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತದೆ ಎಂದು ಪಾರುಪತ್ತೇಗಾರ್ ಹಾಗೂ ಸ್ಥಾನಾಚಾರ್ಯರಾದ ಶ್ರೀನಿವಾಸನರಸಿಂಹನ್ ಗುರೂಜಿ ತಿಳಿಸಿದ್ದಾರೆ.ಭಕ್ತಾದಿಗಳು ಪ್ರತಿಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೊಠಾರೋತ್ಸವದಲ್ಲಿ ಚೆಲುವನಾರಾಯಣಸ್ವಾಮಿ ಹಾಗೂ 12 ಆಳ್ವಾರುಗಳನ್ನು ಒಟ್ಟಾಗಿ ದರ್ಶನಮಾಡಬುದು ವರ್ಷದಲ್ಲಿ ಹತ್ತುದಿನಗಳ ಕಾಲಮಾತ್ರ ಈ ಅವಕಾಶವಿದೆ. ವಿಷ್ಣುದೀಪ ನಂತರ ದೇವಾಲಯದಲ್ಲಿ ಯಾವುದೇ ಉತ್ಸವ ಮತ್ತು ಅಭಿಷೇಕ ಇರಲಿಲ್ಲ. ಜನವರಿ 5 ರಂದು ನಡೆಯುವ ಪ್ರಥಮ ಉತ್ಸವದೊಂದಿಗೆ ಉತ್ಸವಾದಿಗಳು ಆರಂಭವಾಗುತ್ತದೆ ಎಂದೂ ಮಾಹಿತಿ ನೀಡಿದ್ದಾರೆ.