ಸಾರಾಂಶ
ಜೋಯಿಡಾದ ತಹಸೀಲ್ದಾರ್ ಕಚೇರಿಯಲ್ಲಿ ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆ ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಜೋಯಿಡಾ: ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಬಸವೇಶ್ವರ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಬಸವೇಶ್ವರ ಹಾಗೂ ಹೇಮರಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಸರಳವಾಗಿ ಆಚರಿಸಲಾಯಿತು.
ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆ ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ ಮುನ್ನೊಳ್ಳಿ,ಇಲಾಖಾ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.ತಾಲೂಕಿನ ಉತ್ತರಕರ್ನಾಟಕದ ಶಿವಶರಣರ ಪ್ರಸಿದ್ಧ ಪುಣ್ಯ ಕ್ಷೇತ್ರ ಉಳವಿ ಚೆನ್ನಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿ ಪ್ರಯುಕ್ತ ದಿನವಿಡೀ ಅರ್ಚಕರಾದ ಶಂಕರಯ್ಯ ಕಲ್ಮಠ ಅವರ ಹಾಗೂ ಸಹ ಅರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆ, ವಿವಿಧ ಧಾರ್ಮಿಕ, ಭಜನಾ ಕಾರ್ಯಕ್ರಮಗಳು ನೆರವೇರಿದವು.
ತಾಲೂಕಿನ ಹಳೆಕೋಣಪಾದ ಬಸವೇಶ್ವರ ದೇವಾಲಯದಲ್ಲಿ ಬಸವ ಜಯಂತಿ ಪ್ರಯುಕ್ತ ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಜಾತ್ರೋತ್ಸವವನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮ, ಸಡಗರದಿಂದ ಆಚರಿಸಿದರು. ಕುಂಬಾರವಾಡಾದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ 8ನೇ ವಾರ್ಷಿಕೋತ್ಸವದ ಹಿನ್ನೆಲೆ ಅಕ್ಷಯ ತೃತೀಯ, ಬಸವ ಜಯಂತಿ ನಿಮಿತ್ತ ಸತ್ಯನಾರಾಯಣ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ, ಮೊದಲ ಮೂರು ಸ್ಥಾನ ಪಡೆದ ಕು. ಪೂಜಾ ಸುಧಾಕರ ದೇಸಾಯಿ, ಕು. ಅಶ್ವಿನಿ ಗುರುನಾಥ ಗಾವಡೆ, ಕು. ಪೂಜಾ ಚಂದ್ರಕಾಂತ ಪಾಲಕರ, ಕುಂಬಾರವಾಡಾ ಪ್ರೌಢಶಾಲೆಯ ವಿದ್ಯಾರ್ಥಿನಿಯರನ್ನು ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಬಸವೇಶ್ವರ ಭಾವಚಿತ್ರದ ಮೆರವಣಿಗೆ
ಯಲ್ಲಾಪುರ: ವೀರಶೈವ- ಲಿಂಗಾಯತ ಸಮುದಾಯದವರು ಪಟ್ಟಣದಲ್ಲಿ ಮೇ ೧೦ರಂದು ಬಸವೇಶ್ವರ ಜಯಂತಿಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.ಕಾರ್ಯಕ್ರಮದ ಪ್ರಯುಕ್ತ ವೀರಭದ್ರ ದೇವಸ್ಥಾನದಲ್ಲಿ ಅಕ್ಕನ ಬಳಗದ ಸದಸ್ಯರು ತೊಟ್ಟಿಲು ಪೂಜೆ, ಬಸವೇಶ್ವರ ನಾಮಕರಣ ಮುಂತಾದ ವಿಧಿಗಳನ್ನು ನಡೆಸಿ, ಬಸವೇಶ್ವರರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಹೊತ್ತು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.ಬಸವೇಶ್ವರ ವೃತ್ತದ ಬಸವೇಶ್ವರ ದೇವಸ್ಥಾನದಲ್ಲಿ ಮೆರವಣಿಗೆ ಸಂಪನ್ನಗೊಂಡಿತು. ವೀರಭದ್ರೆಶ್ವರ ಭಜನಾ ತಂಡದವರಿಂದ ಭಜನೆ, ಶ್ರೀದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು. ಪ್ರಮುಖರಾದ ಬಸವರಾಜ ಗೌಳಿ, ಮಹೇಶ ಗೌಳಿ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಮಂಜುನಾಥ ಜೋಗಾರಶೆಟ್ಟರ, ಶಿವಯ್ಯಾ ಹಿರೇಮಠ, ಉದಯ ಜಾಲಿಹಾಳ, ವಿರೂಪಾಕ್ಷ ಜೋಗಾರಶೆಟ್ಟರ, ನಾಗರಾಜ ಕೊರ್ನಳ್ಳಿ, ಜಯರಾಜ ಗೋವಿ, ವಿರೂಪಾಕ್ಷ ಪಾಟೀಲ, ಪ್ರಸಾದ ಜೋಗಾರಶೆಟ್ಟರ, ಪಿಸೆ ಅಕ್ಕನಬಳಗದ ಪುಷ್ಪಾ ಜೋಗಾರಶೆಟ್ಟರ, ರತ್ನಾಪಾಟೀಲ, ಶಶಿಕಲಾ ಹಿರೇಮಠ, ಗೌರಿ ನಂದೊಳ್ಳಿಮಠ, ರೇಣುಕಾ ಹೀರೆಮಠ, ಶಶಿಕಲಾ ಜಾಲಿಹಾಳ, ಪ್ರಭಾವತಿ ಗೋವಿ, ಸುವರ್ಣ ಹಿರೇಮಠ, ಸವಿತಾ ಕವಳಿ, ಸುಮಂಗಲಾ ಅಂಗಡಿ, ಹೇಮಾ ಜೋಗಾರಶೆಟ್ಟರ, ಅನುರಾಧಾ ಗೌಳಿ ಮತ್ತಿತರರು ಪಾಲ್ಗೊಂಡಿದ್ದರು.