ಸಾರಾಂಶ
ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪ್ರವಾದಿ ಮಹಮ್ಮದ್ ರ ಜನ್ಮ ದಿನವಾದ್ದರಿಂದ ಮುಸ್ಲಿಂ ಸಮುದಾಯದವರು ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ, ಸಾಮರಸ್ಯ ಮೂಡಿಸುವ ಸಂದೇಶವನ್ನು ಪಾಲಿಸುವುದಕ್ಕಾಗಿ ಈ ಹಬ್ಬ ಮಹತ್ವದ್ದಾಗಿದೆ.
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ನಗರದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪ್ರವಾದಿ ಮಹಮ್ಮದ್ ರ ಜನ್ಮ ದಿನವಾದ್ದರಿಂದ ಮುಸ್ಲಿಂ ಸಮುದಾಯದವರು ಈ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆ, ಸಾಮರಸ್ಯ ಮೂಡಿಸುವ ಸಂದೇಶವನ್ನು ಪಾಲಿಸುವುದಕ್ಕಾಗಿ ಈ ಹಬ್ಬ ಮಹತ್ವದ್ದಾಗಿದೆ.ಹಬ್ಬದ ಮೆರವಣಿಗೆಯ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಸಮಾಜದ ಮುಖಂಡರಾದ ಸೈಯದ್ ಮುನೀರ್ ಮುಲ್ಲಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಎಸ್ ಸಾದತ್ ವುಲ್ಲಾ, ಧರ್ಮ ಗುರುಗಳಾದ ಮೊಹಮ್ಮದ್ ಇಬ್ರಾಹಿಂ ರಫಾಯಿ, ಜಿ. ದಾದಾಪೀರ್, ಸೂರ್ಯೋದಯ ಅಜೀಜ್, ರಹಮತ್ ಉಲ್ಲಾ, ಭಾಷಾ, ಇಲಾಹಿ ನಿಸಾರ್, ನೌಶಾದ್, ಫಾರೂಕ್, ರಫಿವುಲ್ಲಾ ಮುಂತಾದ ಸಾವಿರಾರು ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಮುಸ್ಲಿಂ ಮುಖಂಡರು ಹಣ್ಣು ವಿತರಣೆ ಮಾಡಿದರು. ಈ ವೇಳೆ ಸೂರ್ಯೋದಯ ಅಬ್ದುಲ್ ಅಜೀಜ್, ಉಸ್ತಾದ್ ಸಲ್ಮಾನ್, ಎಸ್ ಎನ್ ಪಿಟಿ ಲಾರಿ ಮಾಲೀಕ ಅಹ್ಮದ್ ಅಬ್ಬಾಸ್ , ಅಬ್ದುಲ್ ಕರೀಂ, ವಾಸೀಂ ಖುರೇಶಿ ಹಾಗೂ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.