ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಸಂಭ್ರಮ

| Published : Oct 18 2024, 01:17 AM IST

ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ರಾಮಾಯಣ ಕಾವ್ಯದಲ್ಲಿ ಮೂಡಿಬಂದಿರುವ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕೆಂದು ವಿಜಯಪುರ ಎಸ್‌ಬಿ ಕಲಾ ಮತ್ತು ಕೆಸಿಪಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ದೊಡಮನಿ ಹೇಳಿದರು. ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ರಾಮಾಯಣದಲ್ಲಿ ಮೌಲ್ಯಗಳಾದ ರಾಮನ ಆದರ್ಶ, ಸೀತೆಯ ಪತಿವೃತ, ಕರುಣೆ, ದಯಾಗುಣ, ಭಕ್ತಿ ಮೌಲ್ಯ, ದೌರ್ಜನ್ಯ ತಡೆ ಗಟ್ಟುವಿಕೆ, ನಿಸರ್ಗದ ಪ್ರೇಮ ಸೇರಿದಂತೆ ಅನೇಕ ಮೌಲ್ಯಗಳನ್ನು ಕಾಣುತ್ತೇವೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ರಾಮಾಯಣ ಕಾವ್ಯದಲ್ಲಿ ಮೂಡಿಬಂದಿರುವ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕೆಂದು ವಿಜಯಪುರ ಎಸ್‌ಬಿ ಕಲಾ ಮತ್ತು ಕೆಸಿಪಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ದೊಡಮನಿ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು. ರಾಮಾಯಣದಲ್ಲಿ ಮೌಲ್ಯಗಳಾದ ರಾಮನ ಆದರ್ಶ, ಸೀತೆಯ ಪತಿವೃತ, ಕರುಣೆ, ದಯಾಗುಣ, ಭಕ್ತಿ ಮೌಲ್ಯ, ದೌರ್ಜನ್ಯ ತಡೆ ಗಟ್ಟುವಿಕೆ, ನಿಸರ್ಗದ ಪ್ರೇಮ ಸೇರಿದಂತೆ ಅನೇಕ ಮೌಲ್ಯಗಳನ್ನು ಕಾಣುತ್ತೇವೆ. ಇಂತಹ ರಾಮಾಯಣ ಪ್ರತಿ ಮನೆಯಲ್ಲಿ ಇದ್ದರೆ ಶಾಶ್ವತ ಮೌಲ್ಯಗಳನ್ನು ನಾವು ಅರಿತು ಜೀವನ ಸಾಗಿಸಬೇಕಿದೆ ಎಂದರು.ಬೇಡರ ಕುಲಕ್ಕೆ ಸೇರಿದ ವಾಲ್ಮೀಕಿ ರಾಮಾಯಣ ರಚಿಸುವ ಮೂಲಕ ಜಗತ್ತಿಗೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ. ಇವರನ್ನು ಬೇಡರ ಕುಲದ ಸಾಂಸ್ಕ್ರತಿಕ ನಾಯಕರೆಂದರೆ ತಪ್ಪಾಗಲಾರದು. ಬೇಡರು ಧೈರ್ಯ, ಶಕ್ತಿ,ಯುಕ್ತಿಗೆ ಹೆಸರಾದವರು. ದೇಶಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಬೇಡ ಜನಾಂಗದ ಪಾತ್ರ ವಹಿಸಿದೆ ಎಂದು ವಿವರಿಸಿದರು.ಪಿಕೆಪಿಎಸ್ ಬ್ಯಾಂಕ್‌ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಗುರುವಿನ ಕಾರುಣ್ಯವಿದ್ದರೆ ಜೀವನ ಪಾವನವಾಗುತ್ತದೆ. ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿನ ಜೀವನ ಸಂದೇಶ ಅರಿತುಕೊಳ್ಳುವ ಅಗತ್ಯವಿದೆ. ಈಚೆಗೆ ಬಿಡುಗಡೆಯಾದ ಶರಣ ಶಕ್ತಿ ಚಲನಚಿತ್ರದಲ್ಲಿ ಶರಣ ಜೀವನ ವೃತ್ತಾಂತ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗಿದೆ. ಶರಣ ಶಕ್ತಿ ಅಲ್ಲ ಅದು ಶರಣರ ಭಕ್ತಿ ಎಂದಾಗಬೇಕಾಗಿತ್ತು ಎಂದರು.ಕರವೇ ಮುಖಂಡ ಅಶೋಕ ಹಾರಿವಾಳ ಮಾತನಾಡಿ, ಸನಾತನ ಹಿಂದು ಧರ್ಮದ ಸಂಸ್ಕ್ರತಿಯನ್ನು ಮಹರ್ಷಿ ವಾಲ್ಮೀಕಿಯವರು ರಾಮಾಯಣ ಕಾವ್ಯ ರಚಿಸುವ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ. ಒಂದು ವೇಳೆ ವಾಲ್ಮೀಕಿ ಈ ಕಾವ್ಯವನ್ನು ರಚಿಸದೇ ಹೋಗಿದ್ದರೆ ನಮಗೆ ಸನಾತನ ಹಿಂದು ಧರ್ಮದ ಸಂಸ್ಕ್ರತಿ, ಆಚಾರ-ವಿಚಾರ ಗೊತ್ತಾಗುತ್ತಿರಲಿಲ್ಲವೇನೋ. ರಾಮಾಯಣ ಕಾವ್ಯವು ನೆಮ್ಮದಿಯಿಂದ ಬದುಕಲು ನಮಗೆ ಪೂರಕವಾಗಿದೆ ಎಂದರು.ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಎಸ್ ಮುಖಂಡ ಅರವಿಂದ ಸಾಲವಾಡಗಿ ಮಾತನಾಡಿದರು.ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನಾಗರಾಳದ ಹುಚ್ಚಪ್ಪ ಮುತ್ಯಾ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮಂಜು ಹಿರೇಮನಿ, ತಾಪಂ ಇಒ ಪ್ರಕಾಶ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಅಪ್ರೋಜಅಹ್ಮದ ಪಟೇಲ, ಕ್ಷೇತ್ರಸಮನ್ವಾಧಿಕಾರಿ ಸುನೀಲ ನಾಯಕ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಡಿಎಸ್ಎಸ್ ಮುಖಂಡ ಮಹಾಂತೇಶ ಸಾಸಬಾಳ, ಮಹರ್ಷಿ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ರವಿ ನಾಯ್ಕೋಡಿ, ಸಮಾಜದ ಮುಖಂಡರಾದ ವೈ.ಎನ್.ಬೇವೂರ, ಪಿ.ವೈ.ಕೋಳೂರ ಇತರರು ಇದ್ದರು.

ಶಿವಾನಿ ಬಿರಾದಾರ ಸಂಗಡಿಗರು ಪ್ರಾರ್ಥಿಸಿದರು. ಮಲ್ಲಿಕಾರ್ಜುನ ರಾಜನಾಳ ಸ್ವಾಗತಿಸಿದರು. ವಿರೇಶ ಗೂಡ್ಲಮನಿ ನಿರೂಪಿಸಿದರು. ಸಾರೋಟಿನಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು.