ಅಥಣಿಯಲ್ಲಿ ಸಂಭ್ರಮದ ರಂಗಪಂಚಮಿ ಆಚರಣೆ

| Published : Mar 30 2024, 12:50 AM IST

ಸಾರಾಂಶ

ಅಥಣಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಾಗೂ ಬೇಸಿಗೆ ಬಿಸಿಲಿನ ತಾಪದ ನಡುವೆ ಹೋಳಿ ಹಬ್ಬದ 5ನೇ ದಿನವಾದ ಶುಕ್ರವಾರ ಪಟ್ಟಣದಲ್ಲಿ ರಂಗ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಅಥಣಿಲೋಕಸಭೆ ಚುನಾವಣೆಯ ನೀತಿ ಸಂಹಿತೆ ಹಾಗೂ ಬೇಸಿಗೆ ಬಿಸಿಲಿನ ತಾಪದ ನಡುವೆ ಹೋಳಿ ಹಬ್ಬದ 5ನೇ ದಿನವಾದ ಶುಕ್ರವಾರ ಪಟ್ಟಣದಲ್ಲಿ ರಂಗ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಹಿಂದು ಧರ್ಮದ ವರ್ಷದ ಕೊನೆಯ ಹಬ್ಬವಾದ ಹೋಳಿ ಹುಣ್ಣಿಮೆಯನ್ನು ಚಿಕ್ಕಮಕ್ಕಳು, ಯುವಕ-ಯುವತಿಯರು ಪರಸ್ಪರ ಬಣ್ಣಗಳನ್ನು ಹಚ್ಚಿ ಸಂಭ್ರಮಿಸಿದರು. ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಯುವಕರು, ಮಹಿಳೆಯರು, ಚಿಕ್ಕಮಕ್ಕಳು ಸೇರಿದಂತೆ ಎಲ್ಲರೂ ಬಣ್ಣದಾಟವಾಡಿ, ರಂಗು ರಂಗಿನ ಬಣ್ಣದ ಅಟವನ್ನು ಆಡಿ ಸಂಭ್ರಮಿಸಿದ ದೃಶ್ಯಗಳು ಕಂಡು ಬಂದವು.

ಪಟ್ಟಣದ ವಿವಿಧ ಗಲ್ಲಿ ಗಲ್ಲಿಗಳಲ್ಲಿ ಯುವಕರ ಮತ್ತು ಮಕ್ಕಳ ತಂಡಗಳು ಕೈಯಲ್ಲಿ ಹಲಿಗೆ ಬಾರಿಸುತ್ತಾ ಪರಸ್ಪರ ಬಣ್ಣ ಮತ್ತು ಬಣ್ಣದ ನೀರನ್ನು ಎರಚಿ ಸಂಭ್ರಮಿಸಿದರು.