ಕಲಬುರಗಿ ಜಿಲ್ಲೆಗೆ ಸಿಮೆಂಟ್‌ ಕಂಪನಿಗಳ ಲಗ್ಗೆ

| Published : Dec 14 2023, 01:30 AM IST

ಸಾರಾಂಶ

ಜನಪರ ಕಾಂಗ್ರೆಸ್ ಸರ್ಕಾರದ ನೀತಿಗಳ ಫಲವಾಗಿ ಆಡಳಿತಕ್ಕೆ ಬಂದ ಆರೇ ತಿಂಗಳಲ್ಲಿ ಕಲಬುರಗಿ ಜಿಲ್ಲೆಗೆ ₹7,610 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಒಟ್ಟಾರೆ 2,060 ನೂತನ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ

ಕಲಬುರಗಿ: ಸಿಮೆಂಟ್‌ ಕಂಪನಿಗಳಿಂದ ₹7610 ಕೋಟಿ ಬಂಡವಾಳ ಹೂಡಿಕೆ: ಸಚಿವ ಪ್ರಿಯಾಂಕ್ ಖರ್ಗೆಕನ್ನಡಪ್ರಭ ವಾರ್ತೆ ಕಲಬುರಗಿ

ಜನಪರ ಕಾಂಗ್ರೆಸ್ ಸರ್ಕಾರದ ನೀತಿಗಳ ಫಲವಾಗಿ ಆಡಳಿತಕ್ಕೆ ಬಂದ ಆರೇ ತಿಂಗಳಲ್ಲಿ ಕಲಬುರಗಿ ಜಿಲ್ಲೆಗೆ ₹7,610 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಒಟ್ಟಾರೆ 2,060 ನೂತನ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ‌ ಉನ್ನತ ಮಟ್ಟದ ಒಪ್ಪಿಗೆ ಸಮಿತಿ ಸಭೆಯಲ್ಲಿ ಭಾಗವಹಿಸಿದ‌ ನಂತರ ಆ ಕುರಿತು ಹೇಳಿಕೆ ನೀಡಿರುವ, ಸಚಿವರು ಕಲಬುರ್ಗಿ ಜಿಲ್ಲೆಗೆ ಬಂದಿರುವ ಬಂಡವಾಳದ ವಿವರ ನೀಡಿದರು.

ಶ್ರೀ ಸಿಮೆಂಟ್ಸ್‌ನಿಂದ ₹2,850 ಕೋಟಿ ವೆಚ್ಚದಲ್ಲಿ, ಪ್ರತಿ ವರ್ಷ 6 ಮಿಲಿಯನ್ ಟನ್ ತಯಾರಿಕಾ ಸಾಮರ್ಥ್ಯದ ನೂತನ ಸಿಮೆಂಟ್ ಕಾರ್ಖಾನೆ ಸ್ಥಾಪನೆ, 1,000 ನೂತನ ಉದ್ಯೋಗ ಸೃಷ್ಠಿಯಾಗಲಿವೆ.

ಅಲ್ಟ್ರಾಟೆಕ್ ಸಿಮೆಂಟ್ಸ್‌ನಿಂದ ₹2,670 ಕೋಟಿ ವೆಚ್ಚದಲ್ಲಿ, ಪ್ರತಿ ವರ್ಷ 4 ಮಿಲಿಯನ್ ಟನ್ ತಯಾರಿಕಾ ಸಾಮರ್ಥ್ಯದ ನೂತನ ಸಿಮೆಂಟ್ ಕಾರ್ಖಾನೆ ಸ್ಥಾಪನೆ, 650 ನೂತನ ಉದ್ಯೋಗ ಸೃಷ್ಟಿಯಾಗಲಿವೆ.

ಓರಿಯೆಂಟ್ ಸಿಮೆಂಟ್ಸ್‌ನಿಂದ ₹90 ಕೋಟಿ ವೆಚ್ಚದಲ್ಲಿ 10.1 ಮೆಗಾವ್ಯಾಟ್ ಸಾಮರ್ಥ್ಯದ ವೇಸ್ಟ್ ಹೀಟ್ ರಿಕವರಿ ಬಾಯ್ಲರ್ ಘಟಕ ಸ್ಥಾಪನೆ, 60 ನೂತನ ಉದ್ಯೋಗ ಸೃಷ್ಟಿಯಾಗಲಿವೆ.

ರಾಮ್ಕೋ ಸಿಮೆಂಟ್ಸ್‌ನಿಂದ ₹2,000 ಕೋಟಿ ವೆಚ್ಚದಲ್ಲಿ, ಪ್ರತಿ ವರ್ಷ 2.15 ಮಿಲಿಯನ್ ಟನ್ ತಯಾರಿಕಾ ಸಾಮರ್ಥ್ಯದ ನೂತನ ಸಿಮೆಂಟ್ ಕಾರ್ಖಾನೆ ಸ್ಥಾಪನೆ, 360 ನೂತನ ಉದ್ಯೋಗ ಸೃಷ್ಟಿಯಾಗಲಿದ್ದು ಇದು ಜಿಲ್ಲೆಯಲ್ಲಿ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜೊತೆಗೆ ಜಿಲ್ಲೆಯ ಆರ್ಥಿಕ ಪುನಶ್ಚೇತನಕ್ಕೂ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಿವೆ ಎಂದು ಖರ್ಗೆ ಹೇಳಿದ್ದಾರೆ.