ಸಾರಾಂಶ
ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ಸಂತ ತೆರೇಸ ದೇವಾಲಯದ ಆವರಣದಲ್ಲಿ ಮಾತೆಮಾರಿಯಮ್ಮ ಗವಿ ನಿರ್ಮಾಣಕ್ಕೆ ಕ್ರೈಸ್ತಧರ್ಮಗುರುಗಳ ಸಮ್ಮುಖದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ಸಂತ ತೆರೇಸ ದೇವಾಲಯದ ಆವರಣದಲ್ಲಿ ಮಾತೆಮಾರಿಯಮ್ಮ ಗವಿ ನಿರ್ಮಾಣಕ್ಕೆ ಕ್ರೈಸ್ತಧರ್ಮಗುರುಗಳ ಸಮ್ಮುಖದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿ, ಕ್ಷೇತ್ರದ ಮತದಾರರು ನನಗೆ ಮತಕೊಟ್ಟು ಆಶೀರ್ವಾದ ಮಾಡಿದ ಪರಿಣಾಮ ನಾಲ್ಕನೇ ಬಾರಿಗೂ ಗೆಲ್ಲುವಂತೆ ಮಾಡಿದರು. ದೊಡ್ಡರಾಯಪೇಟೆ ಪ್ರಾಥಮಿಕ ಪತ್ತಿನ ಸಂಘದ ನಿರ್ದೇಶಕರಾಗಿರುವಾಗಲೇ ಎಂಸಿಡಿಸಿಸಿ ಚುನಾವಣೆಯಲ್ಲಿ ನಿರ್ದೇಶಕನಾಗಿ ಅಯ್ಜೆಯಾದೆ. ಗ್ರಾಮದಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಗ್ರಾಮಸ್ಥರು ಸಹಕಾರ ನೀಡುತ್ತಿದ್ದು, ಯಾವುದೇ ಸಂದರ್ಭದಲ್ಲಿ ಅವರನ್ನು ಮರೆಯುವುದಿಲ್ಲ ಎಂದರು.
೭೫ ಲಕ್ಷ ರು.ವೆಚ್ಚದಲ್ಲಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಸಂಘದ ನೂತನ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಮೊದಲಹಂತದಲ್ಲಿ ೫೦ ಸಾವಿರ ರು.ಮಂಜೂರಾಗಿದೆ. ಲಿಂಗಾಯತರ ಬೀದಿಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗುವುದು ಎಂದರು.ಸಂತ ತೆರೇಸ ದೇವಾಲಯದ ಧರ್ಮಗುರು ಆಂತೋಣಿರಾಜ್ ಮಾತನಾಡಿ, ಶಾಸಕರು ನಾವು ಸಲ್ಲಿಸುವ ಅನೇಕ ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತ ಬಂದಿದ್ದಾರೆ ಎಂದರು.
ಶಾಸಕರು ಮಾತೆ ಮಾರಿಯಮ್ಮ ಗವಿನಿರ್ಮಾಣ ಸಂಬಂಧ ವೈಯಕ್ತಿಕ ಧನಸಹಾಯ ಮಾಡಿದರು.ಧರ್ಮಗುರು ಆಂತೋಣಿರಾಜ್ ಗ್ರಾಪಂ ಸದಸ್ಯ ಸಿದ್ದರಾಜು, ಮುಖಂಡರಾದ ಮಹದೇವಸ್ವಾಮಿ, ಜೋಷಪ್, ಅಲೆಕ್ಸಾಂಡರ್, ಪುಷ್ಪರಾಜ್ ರವಿಗೌಡ, ವಿನ್ಸೆಂಟ್, ಡಾ. ಅಂಬೇಡ್ಕರ್ ಸಂಘದ ಅಧ್ಯಕ್ಷ ಪ್ರದೀಪ್, ಪವನ್‌ಮೂರ್ತಿ, ಗ್ರಾಮದ ಮುಖಂಡರು ಗ್ರಾಮಾಸ್ಥರು, ಹಾಜರಿದ್ದರು.