ಟಿಎಪಿಸಿಎಂಎಸ್ ಚುನಾವಣೆ: ಎಲ್ಲಾ 12 ಸ್ಥಾನಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

| Published : Oct 06 2025, 01:00 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕು ಟಿಎಪಿಸಿಎಂಎಸ್ ಚುನಾವಣೆಯಲ್ಲಿ 12 ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಅಧಿಕಾರ ಚುಕ್ಕಾಣೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕು ಟಿಎಪಿಸಿಎಂಎಸ್ ಚುನಾವಣೆಯಲ್ಲಿ 12 ನಿರ್ದೇಶಕ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಅಧಿಕಾರ ಚುಕ್ಕಾಣೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಜೆಡಿಎಸ್ - ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮತಗಳು ಹಂಚಿಕೆಯಾಗಿದ್ದರಿಂದ ಚುನಾವಣೆಯಲ್ಲಿ ಎ ತರಗತಿಯಲ್ಲಿ 4 ಮಂದಿ ಹಾಗೂ ಬಿ ತರಗತಿಯಲ್ಲಿ 8 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಎ ತರಗತಿಯಿಂದ ಕೆ.ಜೆ ರವಿಶಂಕರ್ 16, ಟಿ.ಕೆ ಯತೀಶ್ 13, ಎಸ್.ಎಂ ನಾಗರಾಜು 13, ವೆಂಕಟರಾಮು 13 ಮತಗಳನ್ನು ಪಡೆದು ಆಯ್ಕೆಯಾದರೆ. ಬಿ ತರಗತಿ ಸಾಮಾನ್ಯ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಎಂ. ನಂದೀಶ್ 1191, ಬಿ.ಎಸ್ ಸಂದೇಶ್ 1122, ಮಹಿಳಾ ಮೀಸಲಿನಿಂದ ಹೆಚ್.ಸಿ ಸುಚಿತ್ರ 939, ಪದ್ಮಮ್ಮ 899, ಹಿಂದುಳಿದ ವರ್ಗಗಳ ಪ್ರವರ್ಗ ’ಎ’ ನಿಂದ ಎಲ್.ನಾಗರಾಜು 1007, ಪ್ರವರ್ಗ ’ಬಿ’ ನಿಂದ ಬಿ.ಎಸ್ ಚಂದ್ರಶೇಖರ್ 1080, ಪರಿಶಿಷ್ಟ ಜಾತಿಯಿಂದ ಶಿವಯ್ಯ 906, ಪರಿಶಿಷ್ಟ ಪಂಗಡದಿಂದ ನಾಗರಾಜು 809 ಮತ ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಿರ್ದೇಶಕರ ಸ್ಥಾನಗಳಿಗೆ ಮತದಾನ ಬಹಳ ಬಿರುಸಿನಿಂದ ನಡೆಯಿತು. ಒಟ್ಟು 3027 ಮತದಾರರ ಪೈಕಿ 2716 ಮಂದಿ ಮತ ಚಲಾಯಿಸಿದ್ದಾರೆ. ಮತದಾನಕ್ಕಾಗಿ ಒಟ್ಟು 8 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಬೆಳಗ್ಗೆ 8 ರಿಂದ ಸಂಜೆ 4 ವರೆಗೆ ಮತದಾನ ನಡೆದು ಷೇರುದಾರ ಮತದಾರರು ತಮ್ಮ ಮತದಾನ ಮಾಡಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಚೇತನಾಯಾದವ್ ಕಾರ್ಯ ನಿರ್ವಹಿಸಿದರು.