ಸಾರಾಂಶ
ಕವಿ ಹುಯಿಲಗೋಳ ನಾರಾಯಣ ರಾಯರು ಬರೆದ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎಂಬ ಗೀತೆಯನ್ನು 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯಾಗಿ ಗಾಯಕ ಪಿ.ಕಾಳಿಂಗರಾವ್ ಹಾಡಿ ಜನಮನ ಸೆಳೆದಿದ್ದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ,ಶತಮಾನ ಪೂರೈಸಿರುವ ಹುಯಿಲಗೋಳ ನಾರಾಯಣರಾಯರ ರಾಯರು ರಚಿಸಿರುವ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡ ಗೀತೆಯ ಗೀತ ಗಾಯನ ಕಾರ್ಯಕ್ರಮ ವನ್ನು ನಗರದ ನ್ಯೂ ಹೊರೈಜಾನ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮ ದ ಅಧ್ಯಕ್ಷ ತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತಾನಾಡಿ, ನಾಡಿನ ಹೆಸರಾಂತ ಕವಿ ಹುಯಿಲಗೋಳ ನಾರಾಯಣ ರಾಯರು ಬರೆದ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಎಂಬ ಗೀತೆಯನ್ನು 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯಾಗಿ ಗಾಯಕ ಪಿ.ಕಾಳಿಂಗರಾವ್ ಹಾಡಿ ಜನಮನ ಸೆಳೆದಿದ್ದರು ಎಂದರು.
ಈ ಗೀತೆಗೆ ಮಾರುಹೋಗಿದ್ದ ಮೈಸೂರಿನ ಅರಸಾರಾಗಿದ್ದ ಜಯಚಾಮರಾಜ ವಡೆಯರ್ ರವರು, ಹುಯಿಲಗೋಳರನ್ನು ನೆನಪಿನಲ್ಲುಳಿಯುವಂತೆ ಸನ್ಮಾನಿಸಬೇಕೆಂದು ತೀರ್ಮಾನಿಸಿ,ದೇಶದ ಮೊದಲ ರಾಷ್ಟ್ರಪತಿಯಾಗಿದ್ದ ಡಾ.ರಾಜೇಂದ್ರ ಪ್ರಸಾದ್ ರವನ್ನು ಸನ್ಮಾನ ಸಮಾರಂಭಕ್ಕೆ ಕರೆಸಿ ಅವರಿಂದ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.ಈ ಗೀತೆಗೆ ನೂರುವರ್ಷ ತುಂಬಿದ ಸಂದರ್ಭದಲ್ಲಿ ಅಂತಹ ಮಹನೀಯರ ನೆನಪನ್ನು ಮಾಡಿಕೊಳ್ಳುವುದು ಮತ್ತು ಅಂತಹ ಮಹಾನುಭಾವವರ ಕುರಿತು ಮಕ್ಕಳಿಗೆ ತಿಳಿಯಪಡಿಸಲು ಅವರು ಬರೆದ ಗೀತೆಯ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಮಹನೀಯರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷ ಶಿವಣ್ಣ, ಸಾಹಿತಿ ಸರಸಮ್ಮ, ಸಮಿತಿಯ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮ ದಲ್ಲಿ ಕಸಾಪ ಪಧಾಧಿಕಾರಿಗಳಾದ ಅಮೃತ ಕುಮಾರ್,ಮಹಂತೇಶ್, ಪ್ರೇಮಲೀಲಾ ವೆಂಕಟೇಶ್,ಅಣ್ಣಮ್ಮ,ಶಿಕ್ಷಕರಾದ ಪ್ರಜ್ವಲಾ,ಚಂದ್ರಕಲಾ, ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕಿ ಗೀತಾ ಇದ್ದರು.