ಸಾರಾಂಶ
Chain thief's trick: A gold chain worth 1.70 lakhs stolen
ಚಳ್ಳಕೆರೆ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಲನವಲನ ಗಮನಿಸಿ ಚಿನ್ನದ ಆಭರಣ ದೋಚುವ ಕಳ್ಳರ ಕಾಟ ಹೆಚ್ಚಾಗಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪರಶುರಾಮಪುರ ಗ್ರಾಮದ ನಾಗರತ್ನಮ್ಮ(೫೯) ಎಂಬ ಮಹಿಳೆ ತನ್ನ ತಂಗಿಯ ಮಗಳ ನಿಶ್ಚಿತಾರ್ಥ ಕಾರ್ಯಕ್ಕೆ ಹೊಸದುರ್ಗಕ್ಕೆ ಹೋಗಿ ಸೋಮವಾರ ಮಧ್ಯಾಹ್ನ ಚಳ್ಳಕೆರೆಗೆ ವಾಪಸ್ ಬಂದು ಪರಶುರಾಮಪುರಕ್ಕೆ ಬಸ್ ಹತ್ತುವ ವೇಳೆ ಅವರ ಕುತ್ತಿಗೆಯಲ್ಲಿದ್ದ ೪೫ಗ್ರಾಂ ತೂಕದ ೧.೭೦ ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತು ಪರಾರಿಯಾಗಿದ್ದಾರೆ. ಬಸ್ಸಿನೊಳಗೆ ಬಂದ ನಾಗರತ್ನಮ್ಮ, ಕುತ್ತಿಗೆಯಲ್ಲಿದ್ದ ಸರ ತುಂಡಾಗಿದ್ದು ಗಾಬರಿಯಿಂದ ಕೂಗಿಕೊಂಡಾಗ ಸಾರ್ವಜನಿಕರು ಸಮಧಾನಪಡಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಠಾಣಾಧಿಕಾರಿ ಶ್ರೀನಿವಾಸ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.
-----