ಚಕ್ರಾ-ಸಾವೇಹಕ್ಲು ಮುಳುಗಡೆಯ ನಿಜವಾದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು

| Published : Nov 06 2024, 12:38 AM IST

ಚಕ್ರಾ-ಸಾವೇಹಕ್ಲು ಮುಳುಗಡೆಯ ನಿಜವಾದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಚಕ್ರಾ-ಸಾವೇಹಕ್ಲು ಮುಳುಗಡೆಯ ನಿಜವಾದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಸೋಷಿಯಲ್ ಜಸ್ಟೀಸ್ ಪಬ್ಲಿಕ್ ಪ್ರಾಬ್ಲಂ ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮ್ಮದ್‌ ಒತ್ತಾಯಿಸಿದರು.

ಶಿವಮೊಗ್ಗ: ಚಕ್ರಾ-ಸಾವೇಹಕ್ಲು ಮುಳುಗಡೆಯ ನಿಜವಾದ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಸೋಷಿಯಲ್ ಜಸ್ಟೀಸ್ ಪಬ್ಲಿಕ್ ಪ್ರಾಬ್ಲಂ ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮ್ಮದ್‌ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ತಾಲೂಕು ಕಸಬಾ 1ನೇ ಹೋಬಳಿ ಅಗಸವಳ್ಳಿ ಗ್ರಾಮದ ಸ.ನಂ. 167ರಲ್ಲಿ ಚಕ್ರಾ, ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗಾಗಿ 1,148 ಎಕರೆ ಜಮೀನನ್ನು ಮೀಸಲಾಗಿಡಲಾಗಿದೆ. ಆದರೆ, ಇಲ್ಲಿ ನಿಜವಾದ ಸಂತ್ರಸ್ತರಿಗೆ ಭೂಮಿ ಸಿಗುತ್ತಿಲ್ಲ ಎಂದು ಆರೋಪಿಸಿದರು.ಸಂತ್ರಸ್ತರ ಪುನರ್ವಸತಿ ಹೋರಾಟ ಸಮಿತಿ ಹೆಸರಲ್ಲಿ ಕೆಲವರು ನಕಲಿ ದಾಖಲೆಗಳನ್ನು ನೀಡಿ ಭೂ ಕಬಳಿಕೆ ಮಾಡಿಕೊಂಡು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಅನೇಕರು ನಕಲಿ ಸಹಿಯ ಮೂಲಕ ಅನಧಿಕೃತವಾಗಿ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಕೆಲ ಪ್ರಭಾವಿಗಳು ತಮ್ಮ ಹೆಸರಿಗೂ ಅಲ್ಲದೇ, ಸಂಬಂಧಿಕರ ಹೆಸರಿಗೂ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.ಸಾವೆಹಕ್ಲು ಮುಳುಗಡೆ ಸಂತ್ರಸ್ತರು ಸುಮಾರು 200ಕ್ಕೂ ಹೆಚ್ಚು ಜನರಿದ್ದಾರೆ. ಅವರ ಸ್ವಾಧೀನಕ್ಕೆ ಜಮೀನುಗಳಿದ್ದರೂ ಇದುವರೆಗೂ ಪೋಡಿಯೇ ಆಗಿಲ್ಲ. ಸಾಕಷ್ಟು ಬಾರಿ ಅರ್ಜಿಗಳನ್ನು ಕೊಟ್ಟರೂ ಕೂಡ ತಮ್ಮ ಹೆಸರಿಗೆ ಜಮೀನು ಇಲ್ಲ. ಸುಮಾರು 50 ವರ್ಷಗಳಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇವರಿಗೆ ತಕ್ಷಣವೇ ಜಮೀನು ಮಂಜೂರು ಮಾಡಿ ಪೋಡಿ ಮಾಡಿ ಪಹಣಿ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಂತ್ರಸ್ತರಾದ ಗಣೇಶ್ ಮಾತನಾಡಿ, ಹಲವು ವರ್ಷಗಳಿಂದ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ, ಇತ್ತೀಚಿನದ ದಿನಗಳಲ್ಲಿ ಕೆಲವರು ನಾವೇ ಮುಳುಗಡೆ ಸಂತ್ರಸ್ತರು ಎಂದು ಹೇಳಿಕೊಂಡು ಜಮೀನನ್ನು ಪಡೆದುಕೊಂಡಿದ್ದಾರೆ. ಅವರ ಹೆಸರಿಗೆ ಪಹಣಿ ಕೂಡ ಆಗಿದೆ. ಇದು ಹೇಗೆ ಸಾಧ್ಯ? ಅಲ್ಲದೇ ಅರ್ಧ ಎಕರೆ ಮುಳುಗಡೆಯಾದವರಿಗೆ 4 ಎಕರೆ ಜಮೀನು ಮಂಜೂರು ಮಾಡಿದ್ದಾರೆ. 4 ಎಕರೆ ಮುಳುಗಡೆಯಾದವರಿಗೆ ಕೇವಲ ಒಂದು ಎಕರೆ ನೀಡಿದ್ದಾರೆ. ಇದು ಕೂಡ ಅವೈಜ್ಞಾನಿಕವಾಗಿದೆ ಎಂದು

ಈ ವಿಚಾರದಲ್ಲಿ ದೊಡ್ಡ ಭ್ರಷ್ಟಾಚಾರವೇ ನಡೆದಿದೆ. ಕಂದಾಯಾಧಿಕಾರಿಗಳ ಜೊತೆಗೆ ಸೇರಿಕೊಂಡು ಬಹುದೊಡ್ಡ ಹಗರಣವನ್ನು ಮಾಡಿದ್ದಾರೆ. ಇದು ಮುಡಾ ಹಗರಣಕ್ಕಿಂತ ಬಹುದೊಡ್ಡ ಹಗರಣವಾಗಿದ್ದು, ಭೂಮಾಫಿಯಾಗಿದೆ. ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಸೈಫುಲ್ಲಾ, ಸಂತೋಷ್, ಶ್ರೀಧರ್ ಮತ್ತಿತರರು ಇದ್ದರು.