ಚಾಮಂಡೇಶ್ವರಿ ತಾಯಿಗೆ ಚಿನ್ನ ಲೇಪಿತ ಕವಚ

| Published : Feb 04 2025, 12:32 AM IST

ಸಾರಾಂಶ

ಚಾಮರಾಜನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಚಾಮುಂಡೇಶ್ವರಿ ತಾಯಿಗೆ ತಮಿಳುನಾಡಿನಲ್ಲಿರುವ ಶ್ರೀಕಂಠಸ್ವಾಮಿ ತಮ್ಮ ತಾಯಿ ತಂದೆಯ ಸ್ಮರಣಾರ್ಥ ಚಿನ್ನ ಲೇಪಿತ ಕವಚಗಳನ್ನು ಚಾಮುಂಡೇಶ್ವರಿ ತಾಯಿಗೆ ತೊಡಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ಚಾಮುಂಡೇಶ್ವರಿ ತಾಯಿಗೆ ತಮಿಳುನಾಡಿನಲ್ಲಿರುವ ಶ್ರೀಕಂಠಸ್ವಾಮಿ ತಮ್ಮ ತಾಯಿ ತಂದೆಯ ಸ್ಮರಣಾರ್ಥ ಚಿನ್ನ ಲೇಪಿತ ಕವಚವನ್ನು ಕೊಡುಗೆಯಾಗಿ ನೀಡಿದರು.ಚಾಮುಂಡೇಶ್ವರಿ ತಾಯಿ ದೇವಸ್ಥಾನದ ಅವರಣಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಕವಚಗಳನ್ನು ಇಟ್ಟು ಹೋಮ ಹವನ ಫಲಗಳನ್ನು ಇಟ್ಟು ಪೂಜೆ ಸಲ್ಲಿಸಿ, ನಂತರ ಚಾಮುಂಡೇಶ್ವರಿ ತಾಯಿಗೆ ಕವಚಗಳನ್ನು ತೊಡಿಸಿ, ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ಇದಕ್ಕೂ ಮುನ್ನ ಚಿನ್ನ ಲೇಪಿತ ಕವಚಗಳನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಂಠಸ್ವಾಮಿ ನನ್ನ ತಂದೆ ಹಿಂದೆ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು, ನಂತರ ನಾವು ತಮಿಳುನಾಡಿಗೆ ಹೋಗಿ ನೆಲೆಸಿದವು, ಭಗವಂತ ನಮಗೆ ಸಕಲವನ್ನು ಕೊಟ್ಟು ಕಾಪಾಡುತ್ತಿದ್ದು, ನಮ್ಮ ತಂದೆ ತಾಯಿಯ ಸ್ಮರಣೆಗಾಗಿ ಈಗಾಗಲೇ ಚಾಮರಾಜೇಶ್ವರ ಉತ್ಸವ ಮೂರ್ತಿಗೆ ಚಿನ್ನಾಭರಣ ಮಾಡಿಸಿಕೊಟ್ಟಿದ್ದು ಈಗ ಚಾಮುಂಡೇಶ್ವರಿ ತಾಯಿಗೆ ಸುಮಾರು ಎರಡುವರೆ ಲಕ್ಷ ವೆಚ್ಚದಲ್ಲಿ ಚಿನ್ನ ಲೇಪಿತ ಕವಚವನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ ಎಲ್ಲವು ಭಗವಂತನ ಇಚ್ಛೆ ಎಂದರು.

ಅರ್ಚಕ ನಾಗರಾಜ ದೀಕ್ಷಿತ್ ಮಾತನಾಡಿ, ಇದು ಮಾಘ ಮಾಸ ಈ ಸಂದರ್ಭದಲ್ಲಿ ದೇವಿಯು ತನ್ನ ವಿರಾಟ ರೂಪದಲ್ಲಿ ಭಕ್ತೆರಿಗೆ ದರ್ಶನ ನೀಡಿ ಆಶೀರ್ವದಿಸುತ್ತಾಳೆ, ಇದು ಸುದಿನ ಚಾಮರಾಜೇಶ್ವರ ದೇವಸ್ಥನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಹುಲ್ಲಹಳ್ಳಿಯ ಎಚ್.ವಿ.ವಿಶ್ವೇಶ್ವರ ಪಂಡಿತ ಅವರ ಪುತ್ರ ಶ್ರೀಕಂಠಸ್ವಾಮಿ ದೇವರಿಗೆ ವಜ್ರಾಂಗಿ ಆಭರಣವನ್ನು ನೀಡಿದ್ದಾರೆ, ತಾಯಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದರು. ಈ ಸಂದರ್ಭದಲ್ಲಿ ಶ್ರೀಕಂಠಸ್ವಾಮಿ ಹಾಗೂ ಅವರ ಕುಟುಂಬ, ತಹಸೀಲ್ದಾರ್ ಗಿರಿಜಾ, ಹಿರಿಯರಾದ ಗಣೇಶ್ ದೀಕ್ಷಿತ್, ಆಗಮಿಕರಾದ ದರ್ಶನ್, ಅನಿಲ್, ಪ್ರದೀಪ್‌ಕುಮಾರ್ ದೀಕ್ಷಿತ್, ರಮೇಶ್ ಇದ್ದರು.