ಸಾರಾಂಶ
ಹೊಸಕೋಟೆ: ರಾಮಾಯಣ ರಚಿಸಿ ಸಮಾಜಕ್ಕೆ ಸಂದೇಶ ಕೊಟ್ಟಿರುವ ಮಹರ್ಷಿ ವಾಲ್ಮೀಕಿ ರೀತಿ ನೈತಿಕ ಪರಿವರ್ತನೆಯಿಂದ ಜೀವನ ಬದಲಿಸಿಕೊಳ್ಳಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಎಐಆರ್ ಬಡಾವಣೆಯಲ್ಲಿ 3.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ವಾಲ್ಮೀಕಿ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ ಸೂಲಿಬೆಲೆಯಲ್ಲಿ ವಾಲ್ಮಿಕಿ ಭವನ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಈ ವರ್ಷ ಹೊಸಕೋಟೆಯಲ್ಲಿ ವಾಲ್ಮೀಕಿ ಭವನದ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಿ ನುಡಿದಂತೆ ನಡೆದಿದ್ದೇನೆ. ಈಗ ಸಮುದಾಯ ಭವನದ ಮೇಲ್ಭಾಗದಲ್ಲಿ ಮತ್ತೊಂದು ಮಹಡಿ ನಿರ್ಮಾಣ ಮಾಡಿಕೊಟ್ಟು ಸಮುದಾಯದ ಮಕ್ಕಳಿಗೆ ವಿವಿಧ ತರಬೇತಿ ಕೇಂದ್ರಗಳ ಸ್ಥಾಪನೆ ಹಾಗೂ ವಾಲ್ಮೀಕಿ ಭವನಕ್ಕೆ ಲಿಫ್ಟ್ ಅಳವಡಿಸಿಕೊಡುತ್ತೇನೆ ಭರವಸೆ ನೀಡಿದರು.ತಾಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಹನುಮರಾಜು ಮಾತನಾಡಿ, ವಾಲ್ಮೀಕಿ ಸಮುದಾಯದ ಬಹುದಿನದ ಕನಸು ವಾಲ್ಮೀಕಿ ಭವನ ನಿರ್ಮಾಣವಾಗಲು ಶಾಸಕ ಶರತ್ ಬಚ್ಚೇಗೌಡರ ಇಚ್ಛಾಶಕ್ತಿಯೇ ಕಾರಣ. ಸಮುದಾಯದ ಪರವಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಸರ್ವ ಸಮುದಾಯಗಳನ್ನು ಸಮಾನವಾಗಿ ಕಾಣುತ್ತಿದ್ದ ಮಾಜಿ ಸಂಸದ ಬಚ್ಚೇಗೌಡರಂತೆ ಶಾಸಕ ಶರತ್ ಬಚ್ಚೇಗೌಡರು ಕೂಡ ತಂದೆಯ ಹಾದಿಯಲ್ಲಿ ಸಾಗುತ್ತಿದ್ದು ಎಲ್ಲಾ ಸಮುದಾಯಗಳಿಗೆ ಭವನ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆ. ವಾಲ್ಮಿಕಿ ಭವನಕ್ಕೆ 1 ಕೋಟಿಗೂ ಹೆಚ್ಚು ಅನುದಾನ ಸರ್ಕಾರದಿಂದ ಕೊಡಿಸಿದ್ದಾರೆಂದು ಹೇಳಿದರು.ಕಾರ್ಯಕ್ರಮದಲ್ಲಿ ಟಿಎಪಿಸಿಎಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್, ನಗರಸಭೆ ಅಧ್ಯಕ್ಷೆ ಆಶಾ ರಾಜಶೇಖರ್, ಇಒ ಮುನಿಯಪ್ಪ, ಡಿವೈಎಸ್ಪಿ ಮಲ್ಲೇಶ್, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಬೆಳ್ಳೂರು ಆಂಜಿನಪ್ಪ, ಗಿರಿಜನ ವಾಲ್ಮೀಕಿ ಸಂಘದ ಅಧ್ಯಕ್ಷ ತವಟಹಳ್ಳಿ ಮುನಿಯಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಬಿಎಂಆರ್‌ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜು, ತಾಪಂ ಮಾಜಿ ಅಧ್ಯಕ್ಷ ಡಾ.ಡಿ.ಟಿ.ವೆಂಕಟೇಶ್, ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ದೇವರಾಜ್, ಮುಖಂಡರಾದ ಬಿಜಿ. ನಾರಾಯಣಗೌಡ, ಡಾ.ವಿವಿ ಸದಾನಂದ, ಸಗೀರ್ ಅಹ್ಮದ್ ಇತರರಿದ್ದರು.
ಫೋಟೋ: 7 ಹೆಚ್‌ಎಸ್‌ಕೆ 1 ಮತ್ತು 2ಹೊಸಕೋಟೆಯ ಎಐಆರ್ ಬಡಾವಣೆಯಲ್ಲಿ ನಿರ್ಮಿಸಿರುವ ವಾಲ್ಮೀಕಿ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ನೆರೆವೇರಿಸಿದರು. ತಾಲೂಕು ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಹನುಮರಾಜು, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಟಿಎಪಿಸಿಎಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್, ನಗರಸಭೆ ಅಧ್ಯಕ್ಷೆ ಆಶಾ ಇತರರು ಪಾಲ್ಗೊಂಡಿದ್ದರು.