ಬೇಲೂರು : ಪೊಲೀಸ್ ಬಂದೋಬಸ್ತ್ ನೊಂದಿಗೆ ದೇವಾಲಯಕ್ಕೆ ಶ್ರೀ ಚನ್ನಕೇಶವ ಸ್ವಾಮಿ ಆಭರಣಗಳು

| N/A | Published : Mar 30 2025, 03:01 AM IST / Updated: Mar 30 2025, 10:09 AM IST

ಬೇಲೂರು : ಪೊಲೀಸ್ ಬಂದೋಬಸ್ತ್ ನೊಂದಿಗೆ ದೇವಾಲಯಕ್ಕೆ ಶ್ರೀ ಚನ್ನಕೇಶವ ಸ್ವಾಮಿ ಆಭರಣಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಧರಿಸುವ ಚಿನ್ನಾಭರಣಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ದೇವಾಲಯಕ್ಕೆ ತರಲಾಯಿತು.

  ಬೇಲೂರು :  ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಧರಿಸುವ ಚಿನ್ನಾಭರಣಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ದೇವಾಲಯಕ್ಕೆ ತರಲಾಯಿತು.

ತಹಸೀಲ್ದಾರ್ ಉಪಖಜಾನೆಯಲ್ಲಿಟ್ಟಿದ್ದ ಶ್ರೀ ಚನ್ನಕೇಶವ ಸ್ವಾಮಿಯ ಚಿನ್ನಾಭರಣ, ಶ್ರೀದೇವಿ ಹಾಗೂ ಭೂದೇವಿ ಆಭರಣಗಳಿದ್ದ ಪೆಟ್ಟಿಗೆಗೆ ತಹಸೀಲ್ದಾರ್ ಎಂ. ಮಮತಾ, ಪುರಸಭೆ ಅಧ್ಯಕ್ಷ ಎ. ಆರ್. ಅಶೋಕ್ , ದೇವಾಲಯದ ಪ್ರಧಾನ ಅರ್ಚಕ ಕೃಷ್ಣಸ್ವಾಮಿ ಭಟ್ ಹಾಗೂ ನರಸಿಂಹಪ್ರಿಯಭಟ್ ರವರು ಪೂಜೆ ಸಲ್ಲಿಸಿದ ನಂತರ ಪೊಲೀಸ್ ಠಾಣೆಯಿಂದ ಬಿಗಿಭದ್ರತೆಯೊಂದಿಗೆ ಸ್ವಾಮಿ ದೇಗುಲಕ್ಕೆ ಪಲ್ಲಕ್ಕಿಯಲ್ಲಿ ತರಲಾಯಿತು.

ನಂತರ ದೇಗುಲದ ಆಡಳಿತಾಧಿಕಾರಿ, ಅಪರ ಜಿಲ್ಲಾಧಿಕಾರಿಗಳಾದ ಕೆ.ಟಿ. ಶಾಂತಳಾ ನೇತೃತ್ವದಲ್ಲಿ ಒಡವೆಗಳನ್ನು ಪರೀಕ್ಷಿಸಿದ ನಂತರ ದೇಗುಲದ ಸುಪರ್ದಿಗೆ ಇಡಲಾಯಿತು. ಯುಗಾದಿ ಹಬ್ಬದಂದು ಚನ್ನಕೇಶವ ಸ್ವಾಮಿ ಆಲಯಶುದ್ಧಿ, ಪಂಚಾಮೃತಾಭಿಷೇಕ ಸೇರಿದಂತೆ ಯುಗಾದಿ ಹಬ್ಬದ ದಿನದಂದು ಎಲ್ಲಾ ಬಂಗಾರದ ಒಡವೆಗಳನ್ನು ಸ್ವಾಮಿಗೆ ಅಲಂಕರಿಸಲಾಗುತ್ತದೆ.

 ನಂತರ ಸುಮಾರು 20 ದಿನಗಳ ಕಾಲ ಎಲ್ಲಾ ಒಡವೆಗಳನ್ನು ದೇವಾಲಯದಲ್ಲಿ ಶ್ರೀಯವರಿಗೆ ತೊಡಸಲಾಗುವುದು. ಏ. 2 ರಿಂದ 15 ರವರೆಗೆ ವಿವಿಧ ಉತ್ಸವಗಳು ನಡೆಯಲಿವೆ, ಏ. 10 ಹಾಗೂ 11 ರಂದು ನಡೆಯುವ ನಾಡ ರಥೋತ್ಸವ ಜರುಗಲಿದ್ದು, ಸರ್ವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇಗುಲದ ಆಡಳಿತಾಧಿಕಾರಿ ಕೆ.ಟಿ. ಶಾಂತಳಾ ಮನವಿ ಮಾಡಿದರು.