ಚನ್ನಮ್ಮನವರು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ರೇವಣ್ಣನವರಿಗೆ ಮಾತ್ರ ತಾಯಿಯಾಗದೇ ಇಡೀ ರಾಜ್ಯಕ್ಕೆ ತಾಯಿಯಾಗಿದ್ದರು ಎಂದು ಜೆಡಿಎಸ್ ರಾಜ್ಯ ಉಪಾಧ್ಯ ಕ್ಷ, ಅಥಣಿಯ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ರೇವಣ್ಣನವರಿಗೆ ಮಾತ್ರ ತಾಯಿಯಾಗಿದೇ ಇಡೀ ರಾಜ್ಯಕ್ಕೆ ತಾಯಿಯಾಗಿದ್ದರು ಎಂದು ಜೆಡಿಎಸ್ ರಾಜ್ಯ ಉಪಾಧ್ಯ ಕ್ಷ, ಅಥಣಿಯ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.ಪಟ್ಟಣದಲ್ಲಿ ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚನ್ನಮ್ಮ ನಿಧನ ಹಿನ್ನೆಲೆಯಲ್ಲಿ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ತಾಯಿ ಚನ್ನಮ್ಮನವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಅಧ್ಯಕ, ಮಾಜಿ ಶಾಸಕ ಕೆ.ಪಿ.ಮಗ್ಗೆನವರ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮನೆಗೆ ಭೇಟಿ ನೀಡಿದಾಗ ತಾಯಿ ಚನ್ನಮ್ಮ ನಮ್ಮ ಬಗ್ಗೆ ವಿಚಾರಿಸಿ ನಮಗೆ ಊಟ ಬಡಿಸಿ ಕ್ಷೇಮ ಸಮಾಚಾರ ವಿಚಾರಿಸಿ ಕಳಿಸುತ್ತಿದ್ದರು. ಅವರನ್ನು ಕಳೆದುಕೊಂಡ ರಾಜ್ಯ ಬಡವಾಗಿದೆ ಎಂದರು.ಹುಕ್ಕೇರಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ತಾಯಿ ಚನ್ನಮ್ಮ ಅವರು ಜೆಡಿಎಸ್ ಪಕ್ಷ ಬೆಳೆಯಲು ಹಿಂದಿನ ಪ್ರೇರಣ ಶಕ್ತಿಯಾಗಿದ್ದರು. ಅವರ ಆಶೀರ್ವಾದ ಈ ಪಕ್ಷಕ್ಕೆ ಇರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಮುಖಂಡರಾದ ಮಲ್ಲಿಕಾರ್ಜುನ್ ಕನಶೆಟ್ಟಿ, ಎಸ್.ಎಸ್.ಡವಳೇಶ್ವರ್, ಶಬ್ಬೀರಗೌಡ ಪಾಟೀಲ, ಜಕ್ಕಪ್ಪ ದರಿಗೌಡರ, ದುಂಡಪ್ಪ ನಿಂಗನೂರ, ವಿದ್ಯಾಸಾಗರ ಈರನ್ನವರ್, ಸಂದೀಪ ಪಿಂಪಳೆ, ಮಹೇಶ ಪೂಜಾರಿ ಸೇರಿದಂತೆ ಚಿಕ್ಕೋಡಿ, ಕಾಗವಾಡ, ಅಥಣಿ, ಹುಕ್ಕೇರಿ ಸೇರಿದಂತೆ ನೂರಾರು ಕಾರ್ಯಕರ್ತರು, ಅಭಿನಾನಿಗಳು, ಮುಖಂಡರು ಪಾಲ್ಗೊಂಡಿದ್ದರು.