ಸಾರಾಂಶ
ಚನ್ನಪಟ್ಟಣ ತಾಲೂಕಿನ ಹನಿಯೂರು ಡೇರಿ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಸುಮಂತ ಅಧ್ಯಕ್ಷತೆಯಲ್ಲಿ ನಡೆಯಿತು.
-ಹೈನುಗಾರರು ಕಡ್ಡಾಯ ರಾಸು ವಿಮಾ ಯೋಜನೆ ಮಾಡಿಸಿಚನ್ನಪಟ್ಟಣ: ತಾಲೂಕಿನ ಹನಿಯೂರು ಡೇರಿ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಸುಮಂತ ಅಧ್ಯಕ್ಷತೆಯಲ್ಲಿ ನಡೆಯಿತು.
ಬಮೂಲ್ ಶಿಬಿರ ಕಚೇರಿ ಕೃಷಿ ಅಧಿಕಾರಿ ಜಿತೇಂದ್ರಕುಮಾರ್ ಮಾತನಾಡಿ, ಡೇರಿ ಸದಸ್ಯರಿಗೆ ಬಮೂಲ್ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ರೈತರು ಹೆಚ್ಚು ಹಾಲು ಪೂರೈಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ತಯಾರಿಸಿ ರಾಜ್ಯ, ದೇಶ, ವಿದೇಶಗಳಿಗೆ ಸರಬರಾಜು ಮಾಡಿ ಒಕ್ಕೂಟಕ್ಕೆ ಹೆಚ್ಚಿನ ಲಾಭ ಬರಲು ಕಾರಣವಾಗುತ್ತದೆ. ಹೈನೋದ್ಯಮದಲ್ಲಿ ತೊಡಗಿರುವ ಹಾಲು ಉತ್ಪಾದಕರಿಗೆ ಅನೇಕ ಪ್ರಯೋಜನಗಳನ್ನುನೀಡಲಾಗುತ್ತಿದೆ. ಹೈನುಗಾರರು ತಪ್ಪದೆ ರಾಸು ವಿಮಾ ಯೋಜನೆ ಮಾಡಿಸಿಬೇಕು ಎಂದರು.
ಬಮೂಲ್ ಚನ್ನಪಟ್ಟಣ ಶಿಬಿರ ಕಚೇರಿ ವಿಸ್ತರಣಾಧಿಕಾರಿ ಜಿ.ಆನಂದ್ ಕುಮಾರ್ ಮಾತನಾಡಿ, ಹನಿಯೂರು ಹಾಲು ಸಂಘದ ಪ್ರತಿಯೊಬ್ಬ ಸದಸ್ಯರು ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಭಾಗವಹಿಸುವುದರಿಂದ ಸಂಘದ ಆಡಳಿತ ವ್ಯವಹಾರದ ಸ್ಥಿತಿಗತಿಗಳನ್ನು ತಿಳಿದು ತಮ್ಮ ಸಲಹೆ-ಸೂಚನೆ ನೀಡಬಹುದಾಗಿದೆ ಎಂದರು.ಸಂಘದ ಅಧ್ಯಕ್ಷೆ ಸುಮಂತ ಮಾತನಾಡಿ, ಸಂಘ ಉತ್ತಮವಾಗಿ ನಡೆಯಲು ಹಾಗೂ ಸರ್ವತೋಮುಖ ಬೆಳವಣಿಗೆಗೆ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದರು.
ಸಂಘದ ಸಿಇಒ ರೂಪ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿದರು. ಡೇರಿ ಉಪಾಧ್ಯಕ್ಷ ಶಂಕರೇಗೌಡ, ನಿರ್ದೇಶಕರಾದ ಕೃಷ್ಣೇಗೌಡ ಮುನಿವೀರೇಗೌಡ, ರವಿ.ಎಚ್.ಎಸ್, ಪಾಪಚಾರಿ, ಹುಚ್ಚೇಗೌಡ, ಮಂಜುನಾಥ.ಎಚ್.ಪಿ, ಕುಮಾರ, ಚಿಕ್ಕತಾಯಮ್ಮ, ಭಾಗ್ಯಮ್ಮ ಇತರರಿದ್ದರು.