Chappell, the returning officer of the Koli presidency, is a puppet of the Congress

-ಅಂಬಿಗರ ಚೌಡಯ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ದೌವಲಪ್ಪ ಆರೋಪ

---

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕು ಕೋಲಿ ಅಧ್ಯಕ್ಷ ಸ್ಥಾನದ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಜಯಪ್ಪ ಚಾಪೆಲ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರ ಕೈಗೊಂಬೆಯಾಗಿ ಕಾರ್ಯನಿರ್ವಹಸುತ್ತಿದ್ದಾರೆಂದು ಅಂಬಿಗರ ಚೌಡಯ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ದೌವಲಪ್ಪ ಆರೋಪಿಸಿದ್ದಾರೆ.

ಕೋಲಿ ಸಮಾಜಕ್ಕೆ ವಂಚನೆ ಮಾಡಿದ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸುಣಗಾರ ಎಚ್ಚರಿಕೆ ನೀಡಿದ್ದಾರೆ.

ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಸ್ಘಾನಕ್ಕೆ ಸಮಯ ನಿಗದಿಪಡಿಸುವಂತೆ ಅನೇಕ ಸಲ ಮನವಿ ಪತ್ರ ನೀಡಲಾಗಿದೆ.

ಮಾಜಿ ಅಧ್ಯಕ್ಷ ಅನೀಲಕುಮಾರ ಜಮಾದಾರ ಹೂಡದಳ್ಳಿ ತಾವೇ ಅಧ್ಯಕ್ಷರೆಂದು ಬಿಂಬಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಕೋಲಿ ಸಮಾಜದ ಒಟ್ಟು ೧೦೬೦ ಸದಸ್ಯರಿದ್ದಾರೆ.

ಆದರೆ, ಚುನಾವಣಾಧಿಕಾರಿ ಜಯಪ್ಪ ಚಾಪೆಲ ಅವರು ಸಮರ್ಥವಾಗಿರದ ಸದಸ್ಯರೊಂದಿಗೆ ಭಾಗಿಯಾಗಿದ್ದಾರೆ. ಕಾಂಗ್ರೆಸ ಪಕ್ಷದ ಮುಖಂಡರ ಹೆಸರು ಬಹಿರಂಗಪಡಿಸದೆ ಗಂಭೀರವಾಗಿ ಆರೋಪಿಸಿದ ಅವರು ಚುನಾವಣಾಧಿಕಾರಿ ಉದ್ದೇಶಪೂರ್ವಕವಾಗಿ ಚುನಾವಣೆಯನ್ನು ಮುಂದೂಡಿಸುತ್ತಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಾಲ್ಕೈದು ಜನರು ಆಕಾಂಕ್ಷಿಗಳಾಗಿದ್ದಾರೆ. ಕೋಲಿ ಸಮಾಜದ ಹೆಸರಿನ ಮೇಲೆ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ.

ಸಮಾಜಕ್ಕೆ ನಂಬಿಕೆ ದ್ರೋಹ ಮಾಡಿದವರ ಕಡೆಗೆ ಹೆಚ್ಚು ಕೆಲಸವನ್ನು ಮಾಡುತ್ತಿರುವ ಚುನಾವಣಾಕಾರಿ ಕಾರ್ಯವನ್ನು ನಾವು ವಿರೋಧಿಸುತ್ತೇನೆ ಎಂದರು.

ತಾಲೂಕ ಕೋಲಿ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಅತೀ ಶೀಘ್ರವಾಗಿ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕೆಂದು ದೂರು ಸಲ್ಲಿಸಲಾಗುವುದು.

ನಮ್ಮ ಮಾತಿಗೆ ಬೆಲೆ ಮಾನ್ಯತೆ ಸಿಗದಿದ್ದರೆ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಗುವುದು ಎಂದು ನಿಜ ಶರಣ ಅಂಬಿಗರ ಚೌಡಯ್ಯ ಸೇವ ಸಮಿತಿ ಪ್ರಧಾನ ಕಾರ್ಯದರ್ಶಿ ದೌವಲಪ್ಪ ಸುಣಗಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ತುಮಕುಂತಾ, ಲಕ್ಷ್ಮೀಕಾಂತ ಚಂದ್ರಂಪಳ್ಳಿ, ಜಗನ್ನಾಥ ಜಮಾದಾರ, ಈರಪ್ಪ ನಾಟೀಕಾರ, ಮಹೇಶ ರಾಣಾಪೂರ, ಮಹೇಶ ಗರಗಪಳ್ಳಿ, ಶ್ರೀಕಾಂತ ಕಲ್ಯಾಣಕರ, ಶ್ರೀಕಾಂತ ಜೋಗದ, ವೆಂಕಟೇಶ ಮೊಗಡಂಪಳ್ಳಿ ಇದ್ದರು.

ಫೋಟೊ

೨೩ಜಿಯು-ಸಿಎಚ್!

ಚಿಂಚೋಳಿ ಪಟ್ಟಣದಲ್ಲಿ ತಾಲೂಕು ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಲಕ್ಷ್ಮಣ ತುಮಕುಂಟಾ, ಮಹೇಶ್‌ ರಾಣಾಪೂರ ಇದ್ದರು.