ರಥೋತ್ಸವ, ಶ್ರೀಗಳ ಪುಣ್ಯಸ್ಮರನೋತ್ಸವ

| Published : Apr 12 2024, 01:06 AM IST

ಸಾರಾಂಶ

ಮುನವಳ್ಳಿ: ಯಕ್ಕುಂಡಿ ಗ್ರಾಮದಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಶ್ರೀ ಕುಮಾರೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಲಿಂ. ಮುರುಗೇಂದ್ರ ಶಿವಯೋಗಿ, ಲಿಂ.ಶಿವಲಿಂಗ ಶಿವಯೋಗಿ, ಲಿಂ. ಶ್ರೀ ವಿರುಪಾಕ್ಷಿ ಶ್ರೀಗಳ ಪುಣ್ಯಸ್ಮರನೋತ್ಸವ ಮಾರ್ಚ.29 ರಿಂದ ಎಪ್ರಿಲ 9 ರವರೆಗೆ ಜರುಗಿತು. ಕರ್ತೃ ಗದ್ದುಗೆಗಳಿಗೆವಿಶೆಷ ಪೂಜೆ, ರುಧ್ರಾಭಿಷೆಕ ಗಣಾಧಾರಣೆ, ಪೂಜಾ ವಿಧಾನಗಳು ಜರುಗಿದವು. ವಿಶೇಷ ಆಹ್ವಾನಿತ ವಿವಿಧ ಮಠಾಧೀಶ್ವರ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮುನವಳ್ಳಿ

ಯಕ್ಕುಂಡಿ ಗ್ರಾಮದಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಶ್ರೀ ಕುಮಾರೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಲಿಂ. ಮುರುಗೇಂದ್ರ ಶಿವಯೋಗಿ, ಲಿಂ.ಶಿವಲಿಂಗ ಶಿವಯೋಗಿ, ಲಿಂ. ಶ್ರೀ ವಿರುಪಾಕ್ಷಿ ಶ್ರೀಗಳ ಪುಣ್ಯಸ್ಮರನೋತ್ಸವ ಮಾರ್ಚ.29 ರಿಂದ ಎಪ್ರಿಲ 9 ರವರೆಗೆ ಜರುಗಿತು.ಕರ್ತೃ ಗದ್ದುಗೆಗಳಿಗೆವಿಶೆಷ ಪೂಜೆ, ರುಧ್ರಾಭಿಷೆಕ ಗಣಾಧಾರಣೆ, ಪೂಜಾ ವಿಧಾನಗಳು ಜರುಗಿದವು. ವಿಶೇಷ ಆಹ್ವಾನಿತ ವಿವಿಧ ಮಠಾಧೀಶ್ವರ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಿತು.ಲಿಂ.ಶ್ರೀ ಮುರುಘೇಂದ್ರ ಶ್ರೀಗಳ ಮೂರ್ತಿ ಪಲ್ಲಕ್ಕಿಯಲ್ಲಿರಿಸಿ ಸುಮಂಗಲೆಯರು ಕಳಸ ಆರತಿ, ಕುಂಭಮೇಳ, ವಿವಿಧ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಸಾನ್ನಿಧ್ಯ ಶ್ರೀಮಠದ ಪಂಚಾಕ್ಷರ ಶ್ರೀಗಳು ವಹಿಸಿದ್ದರು.ಪ್ರಥಮವಾಗಿ ಪ್ರಾರಂಭಿಸಿದ ರಥೋತ್ಸವ ಮಂಗಳವಾರ ಜರುಗಿತು. ಸುತ್ತಲಿನ ಗ್ರಾಮಗಳ ಭಕ್ತರಲ್ಲಿ ಉತ್ಸಾಹ ತುಂಬಿ ಜಯಘೋಷಣೆಗಳ ಮಳೆ ಸುರಿಸಿದರು. ಹುಬ್ಬಳ್ಳಿಯ ಮೂರುಸಾವಿರ ಮಠದ ನಿರಂಜನ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ ಶ್ರೀಗಳ, ಮುರಗೋಡ ದುರದುಂಢೇಶ್ವರ ಮಠದ ನೀಲಕಂಠ ಶ್ರೀಗಳು, ಕಿಲ್ಲಾತೊರಗಲ ಗಚ್ಚಿನ ಮಠದಚನ್ನಮಲ್ಲ ಶಿವಾಚಾರ್ಯ ಶ್ರೀಗಳು, ಬಾಗೊಜಿಕೊಪ್ಪದ ಶಿವಲಿಂಗ ಮುರುಗರಾಜೇಂದ್ರ ಶ್ರೀಗಳು, ಪ್ರಭುನೀಲಕಂಠ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಂಕರಗೌಡ ಪಾಟೀಲ, ಬಸವರಾಜ ಹೊಂಗಲ, ಬಸನಗ್ವಡಾ ಪಾಟೀಲ, ಜೈಲಾನಿ ಬಾರಿಗಿಡದ, ಶಂಕರ ಪಾಶ್ಚಾಪುರ, ಹಸನಸಾಬ್‌ ಬಾರಿಗಿಡದ, ಕಾಶಯ್ಯ ಮಠದ, ಬಂದೇನವಾಜ್‌ ಮುಲ್ಲಾ, ಶಿವಶಂಕರ ಕಡಕೋಳ, ಇರಯ್ಯ ಮಠಪತಿ, ಕುತುಬುದ್ದಿನ್‌ ತೊರಗಲ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.