ಆನ್‌ಲೈನ್‌ ಮೂಲಕ ಮಹಿಳೆಗೆ ವಂಚನೆ

| Published : Jan 09 2025, 12:46 AM IST

ಸಾರಾಂಶ

ಸಿಬಿಐ ಅಧಿಕಾರಿ ಹೆಸರಿನಲ್ಲಿ ಆನ್‌ಲೈನ್ ಮುಖಾಂತರ ಮಹಿಳೆಗೆ 24 ಲಕ್ಷ ರು. ವಂಚಿಸಿದ ಘಟನೆ ಜ. 7ರಂದು ಕಾರ್ಕಳದಲ್ಲಿ ಸಂಭವಿಸಿದೆ.

ಕಾರ್ಕಳ: ಸಿಬಿಐ ಅಧಿಕಾರಿ ಹೆಸರಿನಲ್ಲಿ ಆನ್‌ಲೈನ್‌ ಮುಖಾಂತರ ಮಹಿಳೆಗೆ 24 ಲಕ್ಷ ರು. ವಂಚಿಸಿದ ಘಟನೆ ಜ. 7ರಂದು ಕಾರ್ಕಳದಲ್ಲಿ ಸಂಭವಿಸಿದೆ.ಪ್ರೀಮ ಶರಿಲ್ ಡಿಸೋಜ ವಂಚನೆಗೊಳಗಾದವರು. ಇವರ ಮೊಬೈಲ್‌ಗೆ ಜ. 7ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ದೆಹಲಿ ಟೆಲಿಕಾಂ ಇಲಾಖೆಯಿಂದ ಕಾಲ್ ಮಾಡುತ್ತಿದ್ದು ನಿಮ್ಮ ಆಧಾರ್ ನಂಬ್ರದಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ನಿಮ್ಮವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು ಈ ಬಗ್ಗೆ ಸೈಬ‌ರ್ ಅಧಿಕಾರಿಯು ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದು ತಿಳಿಸಿರುತ್ತಾರೆ. ಆ ಬಳಿಕ ವೀಡಿಯೋ ಕಾಲ್ ಮಾಡಿ ಪೊಲೀಸ್‌ ಸಮವಸ್ತ್ರ ಧರಿಸಿದ ವ್ಯಕ್ತಿಯು ತಾನು ಸಿಬಿಐ ಅಧಿಕಾರಿ ಎಂದು ತಿಳಿಸಿ ನೀವು ತನಿಖೆಗೆ ಸಹಕರಿಸಬೇಕು ಈ ವಿಚಾರವನ್ನು ಯಾರ ಬಳಿಯಲ್ಲಿಯೂ ಹೇಳುವಂತಿಲ್ಲ ಹೇಳಿದರೆ ನಿಮ್ಮಗಂಡ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಪ್ರೀಮ ಶರಿಲ್ ಡಿಸೋಜ ಅವರ ಬ್ಯಾಂಕ್ ಖಾತೆಗಳಲ್ಲಿರುವ ಹಣದ ವಿವರ ಪಡೆದುಕೊಂಡು ಹಣವನ್ನು ಅವರು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಬೇಕು ಇಲ್ಲವಾದರೆ ಅರೆಸ್ಟ್ ವಾರಂಟ್ ಕಳುಹಿಸುತ್ತೇವೆ ಎಂದು ಹೆದರಿಸಿದ್ದಾನೆ. ಅದರಂತೆ ಪ್ರೀಮ ಶರಿಲ್‌ ಡಿಸೋಜ ಆಪಾದಿತರ ಫೆಡರಲ್ ಬ್ಯಾಂಕ್‌ನ ಖಾತೆಗೆ 14 ಲಕ್ಷ ರು. ಮತ್ತು ಯೆಸ್ ಬ್ಯಾಂಕ್ ಖಾತೆಗೆ 10 ಲಕ್ಷ ರು. ಹಣವನ್ನು ಎಫ್‌ಡಿ ಖಾತೆಯಿಂದ ಅರ್ ಟಿ ಜಿ ಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-------------------------------------------------

ನದಿಯಲ್ಲಿ ಮುಳುಗಿ ಸಾವುಕಾರ್ಕಳ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ನದಿಯಲ್ಲಿ ಏಡಿ ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಕಡ್ತಲದಲ್ಲಿ ವರದಿಯಾಗಿದೆ.ಕಡ್ತಲ ನಿವಾಸಿ ಕೃಷ್ಣ(55) ಮೃತಪಟ್ಟವರು. ಕೃಷ್ಣ ಅವರ ಕುಡಿತದ ಚಟದಿಂದ ಬೇಸತ್ತಿದ್ದ ಅವರ ಪತ್ನಿ, ಮಕ್ಕಳೊಂದಿಗೆ ಆತ್ರಾಡಿಯ ತನ್ನ ತವರು ಮನೆಯಲ್ಲಿ ಇದ್ದರು. ಈ ಹಿನ್ನೆಲೆಯಲ್ಲಿ ಕೃಷ್ಣ ಮನೆಯಲ್ಲಿ ಒಂಟಿಯಾಗಿದ್ದರು. ಜ.5 ರಂದು ಅತಿಯಾಗಿ ಮದ್ಯ ಸೇವಿಸಿ ಕಡ್ತಲ ಗ್ರಾಮದ ಧರ್ಬುಜೆಯಲ್ಲಿರುವ ತಿರ್ಥೊಟ್ಟು ನದಿಯಲ್ಲಿ ಏಡಿ ಹಿಡಿಯಲು ಹೋಗಿದ್ದ ಕೃಷ್ಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಕುರಿತು ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.