ಸಾರಾಂಶ
ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವೂ,(ಚಾಮುಲ್) ಮೃತಪಟ್ಟ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳ 31ಮಂದಿ ವಾರಸುದಾರರಿಗೆ ತಲಾ 15 ಸಾವಿರ ಚೆಕ್ ಅನ್ನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್, ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ವಿತರಿಸಿದರು.ಪಟ್ಟಣದ ಚಾಮುಲ್‌ನ ಉಪ ವಿಭಾಗದ ಕಚೇರಿಯಲ್ಲಿ ಚಾಮುಲ್‌ನ ರೈತ ಕಲ್ಯಾಣ ಟ್ರಸ್ಟ್ ಸತ್ತವರ ಪರಿಹಾರವಾಗಿ 15ಸಾವಿರ ರು. ಮೃತ ಪಟ್ಟ 31 ಕುಟುಂಬದ ಸದಸ್ಯರಿಗೆ 4.65 ಲಕ್ಷ ರು. ಚೆಕ್ ಹಾಗೂ ನಿವೃತ್ತಿಗೊಂಡ ಪರಮಪುರ ಸಂಘದ ಹಾಲು ಪರೀಕ್ಷಕ ಗುರುಸ್ವಾಮಿಗೆ 2.25ಲಕ್ಷ ರು. ಬೆಕ್ ಮತ್ತು ಬೆಟ್ಟದ ಮಾದಹಳ್ಳಿ ಸಂಘದ ಹಾಲು ಪರೀಕ್ಷಕ ಬಸವಣ್ಣಚಾರ್‌ಗೆ 3 ಲಕ್ಷ ರು., ಹೊನ್ನೇಗೌಡನಹಳ್ಳಿ ಸಂಘದ ಹಾಲು ಪರೀಕ್ಷಕ ಮಹದೇವಪ್ಪಗೆ 2.7 ಲಕ್ಷ ರು. ಸೇರಿ ಒಟ್ಟು 7.95 ಲಕ್ಷ ರು. ನಿವೃತ್ತ ಪರಿಹಾರದ ಚೆಕ್ಕ್ ವಿತರಿಸಿದರು.
ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ಹಂಚಿಕೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವೂ,(ಚಾಮುಲ್) ಮೃತಪಟ್ಟ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರುಗಳ 31ಮಂದಿ ವಾರಸುದಾರರಿಗೆ ತಲಾ 15 ಸಾವಿರ ಚೆಕ್ ಅನ್ನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್, ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ವಿತರಿಸಿದರು.ಪಟ್ಟಣದ ಚಾಮುಲ್‌ನ ಉಪ ವಿಭಾಗದ ಕಚೇರಿಯಲ್ಲಿ ಚಾಮುಲ್‌ನ ರೈತ ಕಲ್ಯಾಣ ಟ್ರಸ್ಟ್ ಸತ್ತವರ ಪರಿಹಾರವಾಗಿ 15ಸಾವಿರ ರು. ಮೃತ ಪಟ್ಟ 31 ಕುಟುಂಬದ ಸದಸ್ಯರಿಗೆ 4.65 ಲಕ್ಷ ರು. ಚೆಕ್ ಹಾಗೂ ನಿವೃತ್ತಿಗೊಂಡ ಪರಮಪುರ ಸಂಘದ ಹಾಲು ಪರೀಕ್ಷಕ ಗುರುಸ್ವಾಮಿಗೆ 2.25ಲಕ್ಷ ರು. ಬೆಕ್ ಮತ್ತು ಬೆಟ್ಟದ ಮಾದಹಳ್ಳಿ ಸಂಘದ ಹಾಲು ಪರೀಕ್ಷಕ ಬಸವಣ್ಣಚಾರ್‌ಗೆ 3 ಲಕ್ಷ ರು., ಹೊನ್ನೇಗೌಡನಹಳ್ಳಿ ಸಂಘದ ಹಾಲು ಪರೀಕ್ಷಕ ಮಹದೇವಪ್ಪಗೆ 2.7 ಲಕ್ಷ ರು. ಸೇರಿ ಒಟ್ಟು 7.95 ಲಕ್ಷ ರು. ನಿವೃತ್ತ ಪರಿಹಾರದ ಚೆಕ್ಕ್ ವಿತರಿಸಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ಎಸ್.ನಂಜುಂಡ ಪ್ರಸಾದ್ ಮಾತನಾಡಿ, ಜನ ಶ್ರೀ ವಿಮಾ ಯೋಜನೆ, ರಾಸು ವಿಮೆ ಮುಂತಾದ ಸೌಲಭ್ಯ ಪಡೆದುಕೊಂಡು ಸಂಘಗಳಿಗೆ ಗುಣ ಮಟ್ಟದ ಹಾಲು ಸರಬರಾಜು ಮಾಡುವಂತೆ ಕರೆ ನೀಡಿದರು. ಜಿಲ್ಲೆಯಲ್ಲಿ ಖಾಸಗಿ ಡೈರಿಗಳು ಪ್ರಾರಂಭವಾಗಿದ್ದು ಖಾಸಗಿ ಡೇರಿಗಳು ತಾತ್ಕಾಲಿಕವಾಗಿ ಹಣ ಹೆಚ್ಚಾಗಿ ನೀಡುವ ಆಮೀಷ ನೀಡುತ್ತಿವೆ. ಇದಕ್ಕೆ ಸಂಘದ ಸದಸ್ಯರು ಮಾರುಹೋಗಬಾರದು ಎಂದರು.ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಮಾತನಾಡಿ, ಸಂಘಗಳಲ್ಲಿ ಸಿಗುವ ಸೌಲಭ್ಯ ಯಾವುದೇ ಖಾಸಗಿ ಸಂಘಗಳಲ್ಲಿ ದೊರೆಯುವುದಿಲ್ಲ ಹಾಗೂ ಖಾಸಗಿ ಸಂಘದಲ್ಲಿ ಉತ್ಪಾದಕರಿಗೆ ಯಾವುದೇ ಭದ್ರತೆ ಇರುವುದಿಲ್ಲ ಎಂದರು.
ಚಾಮುಲ್‌ನ ಗುಂಡ್ಲುಪೇಟೆ ಉಪ ವ್ಯವಸ್ಥಾಪಕ ಜಿ.ಪ್ರಭು, ವಿಸ್ತರಣಾಧಿಕಾರಿ ಪ್ರಕಾಶ್ ಹೆಚ್., ಸಿದ್ದಲಿಂಗೇಶ್, ರಂಜಿತ, ಉದಯ್, ಮಂಜೇಶ್, ಮುದ್ದಪ್ಪ, ಸಂಘದ ಸಿಇಒ ಮಹೇಂದ್ರ ಹಾಗು ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಉತ್ಪಾದಕರ ಸದಸ್ಯರು ಹಾಜರಿದ್ದರು.------------
13ಜಿಪಿಟಿ9ಗುಂಡ್ಲುಪೇಟೆ ಚಾಮುಲ್ ಉಪ ವಿಭಾಗ ಕಚೇರಿಯಲ್ಲಿ ಮೃತ ಸದಸ್ಯರ ಕುಟುಂಬಕ್ಕೆ ಚಾಮುಲ್ ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ರಸಾದ್, ಎಂ.ಪಿ.ಸುನೀಲ್ ಚೆಕ್ ವಿತರಿಸಿದರು.